ಬ್ರೇಕಿಂಗ್ ನ್ಯೂಸ್
17-08-24 09:36 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್.17: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬೆನ್ನಲ್ಲೇ ಕರ್ನಾಟಕ ಹೈಕೋರ್ಟ್ ನಲ್ಲಿ ಕೇವಿಯಟ್ ಅರ್ಜಿ ದಾಖಲಾಗಿದೆ. ಹೈಕೋರ್ಟ್ ವಕೀಲ ಎಸ್.ಪಿ.ಪ್ರದೀಪ್ ಕುಮಾರ್ ಕೇವಿಯಟ್ ಅರ್ಜಿ ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯಪಾಲರು ನೀಡಿರುವ ತನಿಖೆಯ ಅನುಮತಿಯನ್ನು ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದರೆ ಆಗ ನಮ್ಮ ವಾದ ಆಲಿಸದೆ ಯಾವುದೇ ಆದೇಶ ಮಾಡಬಾರದು ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ಮುಡಾ ಹಗರಣವನ್ನು ತನಿಖೆಗೆ ಒಳಪಡಿಸಲು ಆದೇಶಿಸಬೇಕು ಎಂದು ಕೋರಿ ಎಸ್.ಪಿ.ಪ್ರದೀಪ್ ಕುಮಾರ್ ಈಗಾಗಲೇ "ಜನಪ್ರತಿನಿಧಿಗಳ ವಿಶೇಷ ಕೋರ್ಟ್" ನಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಮುಡಾದಲ್ಲಿ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರು ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎಂಬ ಪ್ರಕರಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿದ್ಧರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದರು.

ಕೇವಿಯಟ್ ಸಲ್ಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅರ್ಜಿದಾರ ಪ್ರದೀಪ್ ಕುಮಾರ್, ‘ಕಾನೂನು ಪ್ರಕಾರ ಸಿದ್ದರಾಮಯ್ಯ ಅವರು ಹೈಕೋರ್ಟ್ ಮೊರೆ ಹೋಗಬಹುದು, ಕೇವಿಯಟ್ ಇಲ್ಲದೇ ಹೋದರೆ ಅವರಿಗೆ ರಿಲೀಫ್ ಸಿಗಬಹುದು. ಹೀಗಾಗಿ, ನಾನು ಕೇವಿಯಟ್ ಸಲ್ಲಿಸಿದ್ದೇನೆ ಎಂದಿದ್ದಾರೆ.
ಕರ್ನಾಟಕ ಸರ್ಕಾರ ಅಥವಾ ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ಮಂಜೂರಾತಿಗೆ ಸಂಬಂಧಿಸಿದಂತೆ ಯಾವುದೇ ಕಾನೂನು ಕ್ರಮಗಳನ್ನು ಇನ್ನೂ ಕೈಗೊಂಡಿಲ್ಲ. ಅಂತೆಯೇ ಪ್ರಕರಣದ ಮತ್ತೊಬ್ಬ ದೂರುದಾರ ಟಿಜೆ ಅಬ್ರಹಾಂ ಅವರು ಕೂಡ ಸೋಮವಾರ ಕೇವಿಯಟ್ ಸಲ್ಲಿಸುವುದಾಗಿ ಹೇಳಿದ್ದಾರೆ. ಯಾವುದೇ ಪ್ರಕರಣದಲ್ಲಿ ಅರ್ಜಿಗೆ ಮೊದಲೇ ನಿಗದಿತ ವಿಚಾರದಲ್ಲಿ ಕೇವಿಯಟ್ ಸಲ್ಲಿಸಿದ್ದರೆ, ಕೋರ್ಟ್ ತುರ್ತು ತೀರ್ಪು ನೀಡುವುದಕ್ಕೆ ಕಷ್ಟವಾಗುತ್ತದೆ.
One of the complainants in the MUDA 'scam' case on Saturday filed a caveat in the Karnataka High Court after Governor Thaawarchand Gehlot granted permission to prosecute Chief Minister Siddaramaiah.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
19-10-26 12:40 am
HK News Staffer
Mangalore Crime, Bantwal Stabbing: ಬಂಟ್ವಾಳ ;...
18-10-26 09:45 pm
Kokkada Fight, Mangalore: ಕೊಕ್ಕಡ ; ಹೂವಿನ ವ್ಯಾ...
18-10-26 09:32 pm
Fr Cyprian Pinto Arrest, POCSO: ಬಾಲಕರಿಗೆ ಲೈಂಗ...
18-10-26 10:36 am
ಎಂಆರ್ ಪಿಎಲ್ ಘಟಕದಲ್ಲಿ ಸ್ಫೋಟ ಘಟನೆ ; ತೀವ್ರ ಗಾಯಗೊ...
17-10-26 11:09 am