ಬ್ರೇಕಿಂಗ್ ನ್ಯೂಸ್
16-08-24 11:44 am Bengaluru correspondent ಕರ್ನಾಟಕ
ವಿಜಯಪುರ, ಆಗಸ್ಟ್ 16: ವಿಜಯೇಂದ್ರನ ಜೊತೆ ಹೊಂದಾಣಿಕೆ ಆಗುವ ಪ್ರಶ್ನೆಯೇ ಇಲ್ಲ. ಯಾಕೆಂದರೆ, ಮೊನ್ನೆ ಡಿ.ಕೆ ಶಿವಕುಮಾರ್ ಅವರೇ ಕಾಂಗ್ರೆಸ್ ಕೊಟ್ಟ ಭಿಕ್ಷೆಯಿಂದ ವಿಜಯೇಂದ್ರ ಎಂಎಲ್ಎ ಆಗಿದ್ದಾಗಿ ಹೇಳಿದ್ದಾರೆ. ನೀವು ವಿಧಾನಸೌದ ಕಟ್ಟೆ ಹತ್ತಲು, ಕಾಂಗ್ರೆಸ್ ಕೊಟ್ಟ ಭಿಕ್ಷೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಇವರಿಬ್ಬರದ್ದು ಹೊಂದಾಣಿಕೆ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅಂಥವರ ಜೊತೆ ನಾನು ಹೊಂದಾಣಿಕೆ ಆಗುವುದಿಲ್ಲ ಎಂದು ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನನಗೆ ಒಬ್ಬ ಮೆಸೆಂಜರ್ ಅನ್ನು ಕೊಟ್ಟು ಕಳಿಸಿದ್ದರು. ಸ್ವಲ್ಪ ದಿನ ಸಮಾಧಾನದಿಂದ ಇರಲು ಹೇಳಿದ್ದಾರೆ, ಎಲ್ಲವೂ ಸರಿ ಮಾಡುವ ಭರವಸೆ ನೀಡಿದ್ದಾರೆ. ಪಕ್ಷದಲ್ಲಿ ಪ್ರಾಮಾಣಿಕರಿಗೆ ಸೂಕ್ತ ಗೌರವ ಕೊಡುವ ಕೆಲಸ ಮಾಡುವುದಾಗಿ ಹೇಳಿದ್ದಾರೆ. ನಾನು ಈಗ ಪಕ್ಷದ ವಿರುದ್ಧ ಯಾವುದೇ ಹೇಳಿಕೆ ಕೊಡುವುದಿಲ್ಲ. ರಾಷ್ಟ್ರೀಯ ಅಧ್ಯಕ್ಷರು ಸಂದೇಶ ಕಳಿಸಿದ್ದಾರೆ. ಜೊತೆಗೆ ಸಂಘದ ಹಿರಿಯರು ಕಿವಿಮಾತು ಹೇಳಿದ್ದಾರೆ.
ಕರ್ನಾಟಕದಲ್ಲಿ ಹೊಂದಾಣಿಕೆ ರಾಜಕಾರಣ ಮುಕ್ತ ಮಾಡಿ, ಬಿಜೆಪಿಯಲ್ಲಿ ನಿಷ್ಟಾವಂತ ರಾಜಕಾರಣಿಗಳಿಗೆ ಗೌರವ ಕೊಡುವ ಭರವಸೆ ನೀಡಿದ್ದಾರೆ. ನಾನು ಪಕ್ಷದ ಹಿರಿಯರು ಹಾಗೂ ಸಂಘದವರು ಹೇಳಿದಂತೆ ಕೇಳುತ್ತೇನೆ. ನಮ್ಮ ಪಾದಯಾತ್ರೆ ಯಾರದೇ ನೇತೃತ್ವದಲ್ಲಿ ಅಲ್ಲ. ಬಿಜೆಪಿ ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತದೆ. ಯಾರು ಬರುವವರು ಬರಬಹುದು, ಬಿಡುವವರು ಬಿಡಬಹುದು. ನಾವೆಲ್ಲರೂ ಕೂಡಿ ಪಾದಯಾತ್ರೆ ಮಾಡುತ್ತೇವೆ, ಸಾಮೂಹಿಕ ನಾಯಕತ್ವದಲ್ಲಿ ಪಾದಯಾತ್ರೆ ಮಾಡುತ್ತೇವೆ.
ನಾವೇನೂ ಬಿನ್ನಮತೀಯರಲ್ಲ, ಬಂಡಾಯಗಾರರಲ್ಲ. ಬಿಜೆಪಿ ಪಕ್ಷವನ್ನು ಹೊಂದಾಣಿಕೆ ರಾಜಕಾರಣ ಎಂಬ ಶಾಪದಿಂದ ಮುಕ್ತ ಮಾಡಿ, ನಿಜವಾದ ಬಿಜೆಪಿ ಕಟ್ಟಬೇಕು ಅಂದುಕೊಂಡಿದ್ದೇವೆ. ನಮ್ಮನ್ನು ಭಿನ್ನಮತೀಯ ಅಥವಾ ಬಂಡಾಯಗಾರರೆಂದು ದಯವಿಟ್ಟು ಕರೆಯುವುದು ಬೇಡ. ನಮಗೆ ಬಂಡಾಯ ಎಂದು ನೀವು ಕರೆದರೆ ವಿಜಯೇಂದ್ರ ನಿಮಗೆ ಏನೋ ಪ್ಯಾಕೇಜ್ ಕೊಟ್ಡಿದ್ದಾನೆ ಎಂದು ತಿಳಿದುಕೊಳ್ಳುತ್ತೇವೆ. ನಮ್ಮ ಗುಂಪಿಗೆ ಬಂಡಾಯಗಾರರೆನ್ನದೇ ಪಕ್ಷದ ವೃದ್ಧಿಗಾಗಿ ಹೋರಾಟ ಮಾಡುತ್ತಿರುವ ಕಾರ್ಯಕರ್ತರು ಎಂದು ಕರೆಯಿರಿ.
ನಮಗೆ ಯಾವುದೇ ಸಭೆ ಕರೆದರು ಒಬ್ಬೊಬ್ಬರೇ ಹೊಗಿ ಕಾಂಪ್ರಮೈಸ್ ಆಗಲ್ಲ, ಎಲ್ಲರೂ ಒಟ್ಟಿಗೆ ಹೋಗುತ್ತೇವೆ. ಮಾಜಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ್ ಅವರು ಸಹಿತ ಬರಬೇಕಿತ್ತು. ಅವರಿಗೆ ಡೆಂಗ್ಯೂ ಆದ ಕಾರಣ ಮೊನ್ನೆ ನಡೆದ ಸಭೆಗೆ ಬಂದಿಲ್ಲ. ನೀವು ತೆಗೆದುಕೊಂಡ ನಿರ್ಣಯಕ್ಕೆ ನಾನು ಬದ್ದ ಎಂದಿದ್ದಾರೆ, ಜೊತೆಗೆ ಸಾಕಷ್ಟು ಜನರು ಕೂಡ ಕರೆ ಮಾಡಿದ್ದಾರೆ. ಮುಂದಿನ ಸಭೆಗೆ ಬಹಳಷ್ಟು ಜನ ಬರುತ್ತಾರೆ. ಆಗ ನಮ್ಮದೇ ಟೀಮ್ ದೊಡ್ಡದಾಗಿ ನಿಷ್ಠಾವಂತ ಬಿಜೆಪಿ ಟೀಮ್ ಆಗುತ್ತದೆ. ಆಗ ಅನಿಷ್ಟರು ಕುರ್ಚಿ ಖಾಲಿ ಮಾಡಿಕೊಂಡು ಮನೆಗೆ ಹೋಗಬೇಕಾಗುತ್ತದೆ ಎಂದು ಯತ್ನಾಳ್ ಹೇಳಿದ್ದಾರೆ.
No question of compromise with BJP state president Vijayendra says Yatnal
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm