ಬ್ರೇಕಿಂಗ್ ನ್ಯೂಸ್
06-08-24 02:00 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 6: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾದ ಹಗರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ತುರ್ತಾಗಿ ಕೋರ್ಟಿಗೆ ಆರೋಪ ಪಟ್ಟಿ ಸಲ್ಲಿಸಿದೆ. 3 ಸಾವಿರ ಪುಟಗಳ ಚಾರ್ಜ್ ಶೀಟ್ ಅನ್ನು ಬೆಂಗಳೂರಿನ 1ನೇ ACMM ಕೋರ್ಟ್ಗೆ ಸಲ್ಲಿಕೆ ಮಾಡಿದೆ. ಆದ್ರೆ, ಚಾರ್ಜ್ಶೀಟ್ನಲ್ಲಿ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ನಾಗೇಂದ್ರ ಆಗಲೀ, ಇಡಿ ವಿಚಾರಣೆ ಎದುರಿಸಿರುವ ಬಸನಗೌಡ ದದ್ದಲ್ ಹೆಸರಾಗಲೀ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಅಧಿಕಾರಿಗಳು ಪ್ರಥಮ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಒಟ್ಟು ಮೂರು ಸಾವಿರ ಪುಟಗಳ ಚಾರ್ಜ್ಶೀಟ್ನಲ್ಲಿ ಹಣ, ಚಿನ್ನ, ಕಾರು ಸೇರಿ 50 ಕೋಟಿ ರೂಪಾಯಿ ಜಪ್ತಿ ಮಾಡಿರುವುದಾಗಿ ಎಸ್ಐಟಿ ಉಲ್ಲೇಖಿಸಿದೆ. ನಗದು- 16.83 ಕೋಟಿ ರೂಪಾಯಿ ಹಣ, 11 ಕೋಟಿ 70 ಲಕ್ಷ ಮೌಲ್ಯದ 16.252 ಕೆ.ಜಿ ಚಿನ್ನ, 4.51 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಉರುಸ್ ಕಾರು, ಮರ್ಸಿಡೀಸ್ ಬೆಂಜ್ ಕಾರು, ಆರೋಪಿ ಬ್ಯಾಂಕ್ ಖಾತೆಯಿಂದ 3.19 ಕೋಟಿ ರೂ. ಹಣ, 13.72 ಕೋಟಿ ರೂ. ಹಣ ಫ್ರೀಜ್ ಸೇರಿದಂತೆ ಒಟ್ಟು 49.96 ಕೋಟಿ ರೂ.ವನ್ನು ವಶಪಡಿಸಿದ್ದು ಈ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದಲ್ಲಿ ಮೊದಲು ಬಂಧನವಾಗಿರುವ ಆರೋಪಿಗಳ ವಿರುದ್ಧ ಮಾತ್ರ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಸತ್ಯನಾರಾಯಣ ವರ್ಮಾ( ಹೈದರಾಬಾದ್) , ಪದ್ಮನಾಭ (ವ್ಯವಸ್ಥಾಪಕ), ಪರುಶುರಾಮ್ ( ಲೆಕ್ಕಾಧಿಕಾರಿ), ನೆಕ್ಕುಂಟಿ ನಾಗರಾಜ್ (ನಾಗೇಂದ್ರ ಆಪ್ತ), ನಾಗೇಶ್ವರ್ ರಾವ್(ನೆಕ್ಕುಂಟಿ ನಾಗರಾಜ್ ಸಂಬಂಧಿ), ಸತ್ಯನಾರಾಯಣ ಇಟ್ಕಾರಿ (ಫಸ್ಟ್ ಫೈನಾನ್ಸ್ ಅಧ್ಯಕ್ಷ), ಜಗದೀಶ್ (ಉಡುಪಿ), ತೇಜಾ ತಮ್ಮಯ್ಯ(ಬೆಂಗಳೂರು), ಪಿಟ್ಟಲ ಶ್ರೀನಿವಾಸ್ ಗಚ್ಚಿಬೌಲಿ(ಆಂಧ್ರ ಪ್ರದೇಶ), ಸಾಯಿತೇಜ (ಹೈದರಾಬಾದ್) ಸೇರಿ ಒಟ್ಟು 12 ಆರೋಪಿಗಳ ಹೆಸರು ಉಲ್ಲೇಖವಾಗಿದೆ. ಆದ್ರೆ, ಈ ದೋಷಾರೋಪ ಪಟ್ಟಿಯಲ್ಲಿ ಮಾಜಿ ಸಚಿವ ನಾಗೇಂದ್ರ, ಶಾಸಕ ಬಸನಗೌಡ ದದ್ದಲ್ ಅವರ ಹೆಸರಿಲ್ಲದಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಶಾಸಕರ ನೇರ ಪಾತ್ರ ಇದ್ದರೂ, ಎಸ್ಐಟಿ ಅಧಿಕಾರಿಗಳು ಇವರ ರಕ್ಷಣೆಗೆ ಯತ್ನಿಸಿದ್ದರು. ಆದರೆ ಇಡಿ ತನಿಖೆಗೆ ಬಂದು ನಾಗೇಂದ್ರ ಅವರನ್ನು ವಶಕ್ಕೆ ಪಡೆದು ವಿಚಾರಣೆ ಬಳಿಕ ಜೈಲಿಗೆ ತಳ್ಳಿದೆ. ಇಡಿ ತನಿಖೆ ಇನ್ನೂ ಪೂರ್ತಿಗೊಂಡಿಲ್ಲ.
The Special Investigation Team (SIT), probing the alleged multi-crore scam at the Karnataka Maharshi Valmiki Scheduled Tribes Development Corporation has filed a preliminary charge sheet against 12 accused.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
16-08-25 03:34 pm
HK News Desk
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
16-08-25 04:45 pm
Mangalore Correspondent
Expert PU College Announces ‘Xcelerate 2025’...
15-08-25 09:04 pm
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
16-08-25 11:25 am
HK News Desk
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am