ಬ್ರೇಕಿಂಗ್ ನ್ಯೂಸ್
03-08-24 06:48 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್.3: ಕೇರಳದ ವಯನಾಡು ಭೂಕುಸಿತ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರ, ಪಶ್ಚಿಮ ಘಟ್ಟದ 57 ಸಾವಿರ ಚದರ ಕಿಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿದೆ.
ಜುಲೈ 31 ರಂದು ಈ ಸಂಬಂಧ ಕರಡು ಅಧಿಸೂಚನೆ ಹೊರಡಿಸಿದ್ದು ಇದು ಕಳೆದ ಒಂದು ದಶಕದಲ್ಲಿ ಹೊರಡಿಸುತ್ತಿರುವ 6ನೇ ಕರಡು ಅಧಿಸೂಚನೆಯಾಗಿದೆ. ಇದರಲ್ಲಿ ಪಶ್ಚಿಮಘಟ್ಟದ ಶೇ. 36ರಷ್ಟು ಪ್ರದೇಶ ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಿದೆ. ಭೂಕುಸಿತ ಸಂಭವಿಸಿರುವ ಕೇರಳದ ವಯನಾಡು ಜಿಲ್ಲೆಯ 13 ಹಳ್ಳಿಗಳನ್ನು ಒಳಗೊಂಡಂತೆ ರಾಜ್ಯ ವ್ಯಾಪ್ತಿಯ 10 ಸಾವಿರ ಚದರ ಕಿಮೀ ಪಶ್ಚಿಮಘಟ್ಟ ಪ್ರದೇಶ ಪರಿಸರ ಸೂಕ್ಷ್ಮ ವಲಯದಲ್ಲಿದೆ ಎಂದು ಕರಡು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕದ 20,668 ಚದರ ಕಿ.ಮೀ. ಪ್ರದೇಶವನ್ನು “ಪರಿಸರ ಸೂಕ್ಷ್ಮ ವಲಯ’ (ಇಎಸ್‌ಎ) ಎಂದು ಘೋಷಿಸಲಾಗಿದೆ.

ಇತ್ತೀಚೆಗಷ್ಟೇ ಭೀಕರ ಭೂಕುಸಿತಕ್ಕೆ ತುತ್ತಾಗಿರುವ ಕೇರಳದ ವಯನಾಡಿನ 13 ಹಳ್ಳಿಗಳು ಹಾಗೂ 6 ರಾಜ್ಯಗಳ ಘಟ್ಟ ಪ್ರದೇಶಗಳು ಅಧಿಸೂಚನೆಯಲ್ಲಿ ಸೇರಿವೆ. ಈ ಅಧಿಸೂಚನೆ ಹೊರಡಿಸಿದ 60 ದಿನಗಳ ಒಳಗಾಗಿ ಸಲಹೆಗಳು ಮತ್ತು ತಕರಾರುಗಳನ್ನು ಸಲ್ಲಿಸಬಹುದಾಗಿದೆ. ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಭೂಕುಸಿತದ ಬೆನ್ನಲ್ಲೇ ಕೇಂದ್ರ ಸರಕಾರ ಜು.31ರಂದು ಈ ಅಧಿಸೂಚನೆ ಹೊರಡಿಸಿದೆ.
ಪರಿಸರ ಸೂಕ್ಷ್ಮ ವಲಯದಲ್ಲಿ ಕಲ್ಲು ಕೋರೆ, ಗಣಿಗಾರಿಕೆ, ಮರಳುಗಾರಿಕೆ ಪೂರ್ಣ ನಿಷೇಧ ಇರಲಿದೆ. ಈಗಾಗಲೇ ಇರುವ ಗಣಿಗಾರಿಕೆ 5 ವರ್ಷಗಳಲ್ಲಿ ಸ್ಥಗಿತವಾಗಬೇಕು. ಹೊಸ ಉಷ್ಣ ಸ್ಥಾವರ ನಿರ್ಮಾಣ ಇಲ್ಲ. ಈಗಿರುವ ಉಷ್ಣ ಸ್ಥಾವರಗಳಿಗೆ ಅಡ್ಡಿ ಇಲ್ಲ, ಆದರೆ ವಿಸ್ತರಣೆ ಮಾಡುವಂತಿಲ್ಲ. ಬೃಹತ್ ನಿರ್ಮಾಣ ಯೋಜನೆ, ಟೌನ್‌ಶಿಪ್ ನಿಷೇಧ. ಹಾಲಿ ನಿರ್ಮಾಣಗಳ ದುರಸ್ತಿ, ನವೀಕರಣಕ್ಕೆ ಅಡ್ಡಿ ಇಲ್ಲ ಎನ್ನಲಾಗುತ್ತಿದೆ.
The government has issued a draft notification to declare over 56,800 square kilometres of the Western Ghats across six states, including 13 villages in Kerala’s landslide-hit Wayanad, Ecologically Sensitive Area (ESA). The development comes amid massive landslides wreaking havoc in Wayanad, leading to the deaths of over 300 people.
14-04-26 02:04 pm
HK News Staffer
ಸುಳ್ಯದಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆ; ಅಡ್ಡಲಾಗಿ...
13-04-26 09:49 pm
ಕುಂದಾಪುರದ 111 ವರ್ಷಗಳ ಸರ್ಕಾರಿ ಶಾಲೆಗೆ ಬಂತು ಎಐ ರ...
13-04-26 08:19 pm
ದಾವಣಗೆರೆ ದಕ್ಷಿಣದಲ್ಲಿ ಪ್ರಚಾರದಿಂದ ದೂರ; ಸಿಎಂ ರಾಜ...
13-04-26 04:20 pm
ಪಿಗ್ಮಿ ಏಜೆಂಟರು ಮಧ್ಯವರ್ತಿಗಳಲ್ಲ, ಬ್ಯಾಂಕುಗಳ ನೌಕರ...
12-04-26 07:58 pm
14-04-26 01:46 pm
HK News Staffer
ಟಿಸಿಎಸ್ ಕಂಪನಿಯಲ್ಲಿ ಹೈಫೈ ಜಿಹಾದ್; ಸೆಕ್ಸ್ ದಂಧೆ,...
13-04-26 10:35 pm
ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗು...
13-04-26 09:07 pm
ಅಮೆರಿಕ- ಇರಾನ್ ಸಂಧಾನ ಯಶಸ್ವಿಯಾಗ್ತಿತ್ತು, ನೆತನ್ಯ...
13-04-26 01:27 pm
ಹೊರ್ಮುಜ್ ಜಲಸಂಧಿಯನ್ನು ನಾವೇ ತಡೆಯುತ್ತೇವೆ, ಅಣ್ವಸ್...
12-04-26 10:59 pm
13-04-26 11:39 pm
Mangalore Correspondent
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
14-04-26 11:52 am
HK News Staffer
ನಂತೂರು ಭೀಕರ ಅಪಘಾತ ; ಬೈಕ್ ಸವಾರನ ಧಾವಂತಕ್ಕೆ ರಸ್ತ...
14-04-26 11:14 am
ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಪತ್ನಿ ಸೌಮ್ಯಾ ಶೆಟ...
11-04-26 11:14 pm
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm
ಧಾರವಾಡ ಯೂತ್ ಕಾಂಗ್ರೆಸ್ ಮುಖಂಡನ ಹತ್ಯೆ ; ಮನೆಗೆ ನು...
11-04-26 12:04 pm