ಬ್ರೇಕಿಂಗ್ ನ್ಯೂಸ್
26-07-24 10:39 pm HK News Desk ಕರ್ನಾಟಕ
ಕಾರವಾರ, ಜುಲೈ 26: ಅಂಕೋಲಾ ಗುಡ್ಡ ಕುಸಿತದ ಕಾರ್ಯಾಚರಣೆ 11ನೇ ದಿನ ಮುಂದುವರಿದರೂ, ಯಾವುದೇ ಫಲ ಸಿಕ್ಕಿಲ್ಲ. ಇಸ್ರೋ ಮತ್ತು ನೇವಿ ತಜ್ಞರು ನಡೆಸಿದ ಡ್ರೋಣ್ ಕ್ಯಾಮರಾ ಪರಿಶೀಲನೆಯಲ್ಲಿ ರಸ್ತೆಯಿಂದ 60 ಮೀಟರ್ ದೂರದಲ್ಲಿ ನದಿಯ ಮಧ್ಯೆ ಲಾರಿಯ ಅವಶೇಷ ಇದೆಯೆಂಬ ಮಾಹಿತಿ ಸಿಕ್ಕಿದೆ. ಆದರೆ, ಭಾರೀ ಮಳೆಯ ಕಾರಣ ನದಿಯಲ್ಲಿ ಪ್ರವಾಹದ ರೀತಿ ನೀರು ಹರಿಯುತ್ತಿದ್ದು, ಇದರಿಂದಾಗಿ ಸ್ಕೂಬಾ ಡೈವರ್ ಗಳು ನೀರಿನಾಳಕ್ಕೆ ಇಳಿಯಲು ಸಾಧ್ಯವಾಗಿಲ್ಲ.
ನೇವಿ ಮಾಹಿತಿ ಪ್ರಕಾರ, 15-20 ಅಡಿ ಆಳದಲ್ಲಿ ಲಾರಿ ಇದೆ ಎನ್ನಲಾಗುತ್ತಿದೆ. ಆದರೆ, ನೀರಿನಲ್ಲಿ ಭಾರೀ ಸೆಳೆತ ಇರುವುದು ಮತ್ತು ಮಣ್ಣು, ಕಲ್ಲಿನೊಂದಿಗೆ ತೀವ್ರ ಗತಿಯಲ್ಲಿ ಸಾಗುವುದರಿಂದ ಅದರ ನಡುವೆ ಆಳಕ್ಕಿಳಿದರೂ, ಯಾವುದೇ ದೃಶ್ಯ ಕಣ್ಣಿಗೆ ಕಾಣದು ಎನ್ನುವುದು ಸ್ಕೂಬಾ ಡೈವರ್ ಗಳ ವಾದ. ಸಮುದ್ರದಲ್ಲಿ ಡೈವ್ ಮಾಡುವುದು ಸುಲಭ ಮತ್ತು ಆಳಕ್ಕಿಳಿದು ನೆಲವನ್ನು ನೋಡುವುದೂ ಸಾಧ್ಯ. ಆದರೆ, ರಭಸದಲ್ಲಿ ಮಣ್ಣು, ಕಸಗಳ ಜೊತೆಗೆ ಹರಿಯುವ ನದಿ ನೀರಿನಲ್ಲಿ ಆಳಕ್ಕಿಳಿದು ಅವಶೇಷ ಪತ್ತೆ ಮಾಡಲು ಕಷ್ಟ. ನದಿ ನೀರಿಗಿಳಿದರೂ, ಹೊರ ಬರುವುದೇ ಕಷ್ಟ ಎಂದು ನೇವಿ ಅಧಿಕಾರಿಗಳು ಹೇಳುತ್ತಾರೆ.


ಇದೇ ವೇಳೆ, ಕೇರಳದ ಪಿಡಬ್ಲ್ಯುಡಿ ಮತ್ತು ಪ್ರವಾಸೋದ್ಯಮ ಸಚಿವ ಪಿ.ಎ. ಮಹಮ್ಮದ್ ರಿಯಾಸ್ ಮತ್ತು ಶಾಸಕ ಕೆಎಂ ಸಸೀಂದ್ರನ್ ದುರಂತ ನಡೆದಿರುವ ಸ್ಥಳಕ್ಕೆ ಆಗಮಿಸಿದ್ದಾರೆ. ಈಗಾಗಲೇ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಕನ್ನಡ ಮತ್ತು ಮಲೆಯಾಳ ಭಾಷೆ ಅರಿತಿರುವ ಕಾರಣ ದುರಂತ ಜಾಗದಲ್ಲೇ ಬೀಡು ಬಿಟ್ಟಿದ್ದು, ಮಲೆಯಾಳಂ ವಾಹಿನಿಗಳಿಗೆ ಸ್ಥಳದಲ್ಲಿನ ಬೆಳವಣಿಗೆ ಬಗ್ಗೆ ಮಾಹಿತಿಗಳನ್ನು ನೀಡುತ್ತಿದ್ದಾರೆ. ಇಡೀ ಕೇರಳದಲ್ಲಿ ಜನರು ಲಾರಿ ಚಾಲಕ ಅರ್ಜುನ್ ಜೀವಂತ ಬರುವಂತೆ ಹಾರೈಸುತ್ತಿದ್ದಾರೆ. ಕೇರಳದ ಲೀಡಿಂಗ್ ಚಾನೆಲ್ಗಳು ಅರ್ಜುನ್ ನಾಪತ್ತೆ ಸುದ್ದಿಯನ್ನೇ ಇಡೀ ದಿನ ಪ್ರಮುಖವಾಗಿ ಬಿತ್ತರಿಸುತ್ತಿದ್ದು, ಇಡೀ ದೇಶದ ಗಮನ ಸೆಳೆಯುವಂತೆ ಮಾಡಿದೆ.
The search for three people including Kozhikode native Arjun, who went missing in a massive landslide, was severely hindered by heavy rain in Shirur on Friday. The downpour began just as Indian Navy scuba divers were preparing to dive into the deep waters of the Gangavali River.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
26-08-26 10:58 pm
HK News Desk
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm