ಬ್ರೇಕಿಂಗ್ ನ್ಯೂಸ್
15-07-24 01:01 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 15: ಕೆಂಗಲ್ ಹನುಮಂತಯ್ಯ ಅವರ ಕನಸಿನ ಅರಮನೆ, ರಾಜ್ಯಾಡಳಿತದ ಪ್ರಾಮುಖ್ಯ ಸೌಧ ವಿಧಾನಸೌಧಕ್ಕೆ ಹೊಸ ಖದರ್ ಬಂದಿದೆ. ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ದೂರದೃಷ್ಟಿ ಯೋಜನೆ ಮತ್ತು ಯೋಚನೆಯ ಫಲವಾಗಿ 68 ವರ್ಷಗಳ ಇತಿಹಾಸವಿರುವ ವಿಧಾನಸೌಧ ಕಟ್ಟಡಕ್ಕೆ ಪುನಶ್ಚೇತನ ಸಿಕ್ಕಿದೆ.
ವಿಧಾನಸೌಧ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿರುವ ಸುಂದರ ವಾಸ್ತು ಶಿಲ್ಪವಿರುವ ಕಟ್ಟಡ. ಇಂತಹ ಮನೋಹರ ಆಡಳಿತ ಸೌಧ ಬೇರೆ ರಾಜ್ಯದಲ್ಲಿ ಕಾಣಲು ಸಾಧ್ಯವಿಲ್ಲ. ಆದರೆ ಹೊರಗಿನ ಸೌಂದರ್ಯಕ್ಕೆ ಕುಂದು ಬಾರದಂತೆ ಒಳಗಿನ ಸೌಂದರ್ಯವನ್ನೂ ಬಿಂಬಿಸಬೇಕು ಎಂದು ಕನಸು ಕಂಡವರು ಸ್ಪೀಕರ್ ಯು.ಟಿ.ಖಾದರ್. ಈ ಯೋಜನೆಗೆ ಸಾಥ್ ನೀಡಿದ್ದು ಸಿದ್ದರಾಮಯ್ಯ ಸರಕಾರ. ರಾಜ್ಯದ ಏಳೂವರೆ ಕೋಟಿ ಜನರ ಪೈಕಿ ಶಾಸಕರಾಗುವವರು 224 ಮಂದಿ. ಶಾಸಕರಾಗಿ ವಿಧಾನಸೌಧ ಪ್ರವೇಶಿಸುವುದೇ ಒಂದು ಭಾಗ್ಯ. ಅದರಲ್ಲೂ ಇಡೀ ವಿಧಾನಸೌಧಕ್ಕೆ ಸಭಾಧ್ಯಕ್ಷರಾಗುವುದು ಎಂದರೆ ಸಣ್ಣ ಮಾತಲ್ಲ. ಅದು ಯು.ಟಿ.ಖಾದರ್ ಗೆ ಕರುನಾಡು ನೀಡಿದ ದೊಡ್ಡ ಕೊಡುಗೆ ಮತ್ತು ಗೌರವ.




ವಿಧಾನಸೌಧ ಪ್ರವೇಶದಲ್ಲಿ ಎದುರುಗೊಳ್ಳುವ ಕಬ್ಬಿಣದ ಗ್ರಿಲ್ಸ್ ಇರುವ ಧೂಳು ಹಿಡಿದಿರುವ ಹಳೆಯ ಕಾರಿಡಾರ್, ಬಾಗಿಲುಗಳು ಕಟ್ಟಡದ ಕಲೆಗಾರಿಕೆಗೆ ಕಪ್ಪು ಚುಕ್ಕೆಯಾಗಿತ್ತು. ಮಣ್ಣು, ಧೂಳಿನ ಕಳೆಯಿರುವ ನೆಲ ಎದುರುಗೊಳ್ಳುತ್ತಿತ್ತು. ಹೊರದೇಶದ ವಿಐಪಿಗಳು, ಸೆಲೆಬ್ರಿಟಿಗಳು ವಿಧಾನಸೌಧಕ್ಕೆ ಭೇಟಿ ನೀಡುವಾಗ ಅವರನ್ನು ಹಳೆಯ ಗ್ರಿಲ್ ಕಿಟಕಿ, ಬಾಗಿಲುಗಳೇ ಸ್ವಾಗತಿಸುತ್ತಿದ್ದವು. ಇದಕ್ಕೆ ಬದಲಾವಣೆ ತಂದ ಸ್ಪೀಕರ್ ಯು.ಟಿ.ಖಾದರ್ ಸರಕಾರದ ಸಹಭಾಗಿತ್ವದಲ್ಲಿ ಹೊಸ ರೂಪ ನೀಡಿದ್ದಾರೆ. ರಾಜ್ಯ ಅರಣ್ಯ ಕೈಗಾರಿಕಾ ನಿಗಮದಿಂದ ಬೀಟೆ ಮತ್ತು ತೇಗದ ಮರ ಪಡೆದು ಸ್ವಾಗತ ದ್ವಾರಗಳಿಗೆ ಹೊಸ ಗೆಟಪ್ ನೀಡಿದ್ದಾರೆ. ಪ್ರಸ್ತುತ ವಿಐಪಿಗಳು, ಮಂತ್ರಿ ಮಹೋದಯರು ಸಾಗುವ ಪೂರ್ವ ಮತ್ತು ಪಶ್ಚಿಮದ ಮುಖ್ಯದ್ವಾರಗಳು ಸಾಂಪ್ರದಾಯಿಕ ಶೈಲಿಯ ಮರದ ಕೆತ್ತನೆಯಿಂದ ನಳನಳಿಸುತ್ತಿದೆ. ನೆಲಕ್ಕೆ ಹಸಿರು ಮಕಮಲ್ಲು, ಮಹಡಿ ಏರುವ ಸ್ಟೆಪ್ ಗಳಿಗೆ ಕೆಂಪು ಕಾರ್ಪೆಟ್ ಹಾಸಲಾಗಿದೆ. ಕಲಾಪ ನಡೆಯುವಲ್ಲಿ ಮತ್ತು ಅವಶ್ಯಕ ಸ್ಥಳಗಳ ಗೋಡೆಗಳಿಗೆ ರಾಜ್ಯ ಸರಕಾರದ ಲಾಂಛನ "ಗಂಡ ಭೇರುಂಡ" ಆಕೃತಿಯ ಗಡಿಯಾರ ಅಳವಡಿಸಲಾಗಿದೆ. ಒಟ್ಟಿನಲ್ಲಿ ವಿಧಾನಸೌಧದ ಒಳಾಂಗಣ ಹೊಸ ಖದರ್ ನೊಂದಿಗೆ ಕಂಗೊಳಿಸುತ್ತಿದೆ. ಇನ್ನು ಸೌಧಕ್ಕೆ ನೂರು ವರ್ಷ ಕಳೆದರೂ ಈಗಿನ ಪುನಶ್ಚೇತನ ಇತಿಹಾಸದ ಪುಟ ಸೇರಲಿದೆ. ಇದು ಕೇವಲ ಆರಂಭವಷ್ಟೆ. ಮುಂದಿನ ದಿನಗಳಲ್ಲಿ ಇಡೀ ವಿಧಾನಸೌಧದ ಒಳಾಂಗಣವನ್ನು ಹಳೆಯ ರೂಪ ನೀಡಿ ನವೀನ ಶೈಲಿಯಲ್ಲಿ ಬದಲಿಸುವ ಕನಸನ್ನು ಸ್ಪೀಕರ್ ಖಾದರ್ ಹೊಂದಿದ್ದಾರೆ.
2024 ಜುಲೈ 15 ಸೋಮವಾರ ವಿಧಾನಸಭೆ ಕಲಾಪ ಆರಂಭವಾಗುವ ಮುಂಚಿತವಾಗಿ ಸ್ಪೀಕರ್ ಯು.ಟಿ. ಖಾದರ್ ಅವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವೀಕರಣದ ಕಾರ್ಯವನ್ನು ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಸಚಿವ ಮತ್ತು ವಿಧಾನಸಭಾ ವಿಶೇಷ ಬೋರ್ಡ್ ಮೆಂಬರ್ ಎಚ್.ಕೆ. ಪಾಟೀಲ್, ಗೃಹ ಸಚಿವ ಜಿ. ಪರಮೇಶ್ವರ್, ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ.
Vidhana Soudha get new get up photos go viral after U T Khader has been appointed as Speaker
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
08-11-25 04:08 pm
Mangaluru Staff
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm