ಬ್ರೇಕಿಂಗ್ ನ್ಯೂಸ್
31-05-24 06:17 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 31: ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಜೂನ್ 6 ರವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಮಾಡಿದೆ. ಬೆಂಗಳೂರಿನ 42 ನೇ ಎಸಿಎಂಎಂ ನ್ಯಾಯಾಲಯ ಈ ಮಹತ್ವದ ಆದೇಶ ಮಾಡಿದೆ. ಪ್ರಜ್ವಲ್ ಪರ ವಾದ ಮಾಡಿದ ವಕೀಲರು 1 ದಿನ ಮಾತ್ರ ಎಸ್ಐಟಿ ಕಸ್ಟಡಿಗೆ ಕೊಡುವಂತೆ ಮನವಿ ಮಾಡಿದ್ದರು. ಆದರೆ ನ್ಯಾಯಾಧೀಶರು ಜೂನ್ 6 ರವರೆಗೆ ಕಸ್ಟಡಿಗೆ ನೀಡಿದೆ.
ಎಸ್‌ಐಟಿ ಪರವಾಗಿ ವಾದ ಮಂಡನೆ ಮಾಡಿದ ಎಸ್‌ಎಸ್‌ಪಿ ಅಶೋಕ್ ನಾಯಕ್, ಇವನು ಒಬ್ಬ ವಿಕೃತ ಕಾಮಿ ಎನ್ನಿಸುತ್ತಿದೆ. ಇವ ತುಂಬಾ ಅಪಾಯಕಾರಿ ಇದ್ದಾನೆ. ಸಂತ್ರಸ್ತ ಮಹಿಳೆ ಹೇಳಿಕೆ ಪ್ರಕಾರ ಅತ್ಯಾಚಾರ ಮಾಡಿದ್ದಾನೆ. ಈ ಪ್ರಕರಣದಲ್ಲಿ 100 ಕ್ಕೂ ಹೆಚ್ಚು ಸಂತ್ರಸ್ತಯರು ಇದ್ದಾರೆ. ಈ ಬಗ್ಗೆ ಮೀಡಿಯಾದಲ್ಲಿ ಸುದ್ದಿ ಅಗಬಾರದು ಅಂತ ತಡಯಾಜ್ಞೆ ತಂದಿದ್ದಾರೆ ಎಂದು ವಾದಿಸಿದರು.
ಅಲ್ಲದೆ, ವಾಟ್ ಆ್ಯಪ್ ಕಾಲ್ ಮಾಡಿ ಬಟ್ಟೆ ಬಿಚ್ಚಲು ಹೇಳಿದ್ದಾನೆ. ಹೀಗಾಗಿ ಪ್ರಜ್ವಲ್ ನ್ನ ತನಿಖೆ ಮಾಡಬೇಕಿದೆ. ವಿಡಿಯೋ ಮಾಡಿರೋ ಮೊಬೈಲ್ ಪತ್ತೆ ಮಾಡಬೇಕಿದೆ. ಜೊತೆಗೆ ಹಲವು ಸಾಕ್ಷಿಗಳನ್ನು ಪತ್ತೆ ಮಾಡಬೇಕಿದೆ. ಈತ ದೇಶ ಬಿಟ್ಟು ಹೋಗಿದ್ದ. ವಾಪಸು ಬರುವ ಉದ್ದೇಶ ಇರಲಿಲ್ಲ. ಇದನ್ನು ಎಲ್ಲಾ ತನಿಖೆ ಮಾಡಬೇಕಿದೆ ಎಂದು ಸರ್ಕಾರಿ ಪರ ವಕೀಲರು ವಾದ ಮಂಡನೆ ಮಾಡಿದರು.
ಯಾಕೆ ವಿದೇಶಕ್ಕೆ ಹೋಗಿದ್ದ ಅಂತ ಇಲ್ಲಿಯವರೆಗೆ ಪ್ರಜ್ವಲ್ ಹೇಳಿಲ್ಲ. ಹೀಗಾಗಿ ಆರೋಪಿ ವಿಚಾರಣೆ ತುಂಬಾ ಅಗತ್ಯ ಇದೆ. ಸಂತ್ರಸ್ತರಿಗೆ ಹೆದರಿಸಿ ಕಿರುಕುಳ ನೀಡಿದ್ದಾನೆ. ಈ ಪ್ರಕರಣದ ವಿಚಾರವಾಗಿ ನಿನ್ನೆ ಹಾಸನದಲ್ಲಿ ಪ್ರತಿಭಟನೆ ಅಗಿದೆ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು. ಅಲ್ಲದೆ 14 ದಿನ ಕಸ್ಟಡಿಗೆ ನೀಡಿ ಅಂತ ಎಸ್ಐಟಿ ಪರ ವಕೀಲರು ವಾದ ಮಂಡಿಸಿದರು.
ಪ್ರಜ್ವಲ್ ಪರ ವಕೀಲ ಅರುಣ್ ವಾದ ಮಂಡಿಸಿ, ಆರೋಪಿ ಬಗ್ಗೆ ಸಾಕ್ಷಿ ಇಲ್ಲ. ವಿಡಿಯೋ ಮಾಡಿದ್ದಾನೆ ಎನ್ನಲಾದ ಡಿವೈಸ್ ಇಲ್ಲ. ಆರೋಪಿ ಎಸ್ಐಟಿ ಮುಂದೆ ಶರಣಾಗಿದ್ದಾನೆ. 14 ದಿನ ಕಸ್ಟಡಿಗೆ ಕೇಳುವುದು ನ್ಯಾಯ ಬದ್ದ ಅಲ್ಲ. ಕಸ್ಟಡಿಗೆ ಕೊಡಿ ಬೇಡಿ ಅನ್ನಲ್ಲ. ಕೊಟ್ಟರೆ ಒಂದು ದಿನ ಮಾತ್ರ ಕೊಡಿ ಅಂತ ಪ್ರಜ್ವಲ್ ಪರ ವಕೀಲರು ವಾದ ಮಂಡನೆ ಮಾಡಿದ್ದರು.
Hassan MP Prajwal Revanna was sent to a six-day police custody till June 6 on Friday, after being produced in a Bengaluru court. The Special Investigation Team probing the sexual assault allegations against him had sought a 15-day custody for him in the first FIR registered against him in Holenarasipura.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm