ಬ್ರೇಕಿಂಗ್ ನ್ಯೂಸ್
16-05-24 06:02 pm HK News Desk ಕರ್ನಾಟಕ
Photo credits : News first Kannada
ಹುಬ್ಬಳ್ಳಿ , ಮೇ.16: ಹುಬ್ಬಳ್ಳಿಯಲ್ಲಿ ಪಾಗಲ್ ಪ್ರೇಮಿಯಿಂದ ಹತ್ಯೆಯಾದ ಅಂಜಲಿ ಅಂತ್ಯಸಂಸ್ಕಾರ ನೆರವೇರಿದೆ. ಮಂಟೂರು ರಸ್ತೆಯಲ್ಲಿನ ಹರಿಶ್ಚಂದ್ರ ಘಾಟ್‌ನಲ್ಲಿ ಹಿಂದು ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು. ಅಂತ್ಯಸಂಸ್ಕಾರದಲ್ಲಿ ಕುಟುಂಬಸ್ಥರು- ಭಾಗಿಯಾಗಿದ್ದರು. ನೇಹಾ ತಂದೆ ನಿರಂಜನ ಹಿರೇಮಠ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿದ್ದರು.
ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿ ಹತ್ಯೆ ಪ್ರಕರಣ ಸಂಬಂಧ ಅಂಜಲಿ ಕುಟುಂಬಕ್ಕೆ ನೇಹಾ ತಂದೆ ನೆರವು ನೀಡಿದ್ದಾರೆ. ನಿರಂಜನ ಹಿರೇಮಠ 1 ಲಕ್ಷ ರೂ. ನೆರವು ನೀಡಿದ್ದಾರೆ. ಇದೇ ವಾರ್ಡ್‌ನ ಕಾರ್ಪೊರೇಟರ್ ಆಗಿರೋ ನಿರಂಜನ್ ಹಿರೇಮಠ, ಅಂತ್ಯಕ್ರಿಯೆಗೆಂದು ಶವವನ್ನು ಮನೆಗೆ ತಂದ ವೇಳೆ 1 ಲಕ್ಷ ಹಣ ವಿತರಣೆ ಮಾಡಿದರು. ತನ್ನ ಮಗಳ ಕೊಲೆಯಾಗಿ ಒಂದು ತಿಂಗಳು ಗತಿಸುವ ಮುಂಚೆಯೇ ಯುವತಿ ಕೊಲೆ ಆಗಿರೋದಕ್ಕೆ ಮರುಕ ವ್ಯಕ್ತಪಡಿಸಿ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ.




ಇನ್ನು, ಅಂಜಲಿ ಹತ್ಯೆ ಪ್ರಕರಣ ಸಂಬಂಧ ದೂರು ಕೊಟ್ಟರೂ ಸುಮ್ಮನಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ಬೆಂಡಿಗೇರಿ ಠಾಣೆ ಇನ್ಸ್‌ಪೆಕ್ಟರ್ ಸಿ.ಬಿ.ಚಿಕ್ಕೋಡಿ, ಮಹಿಳಾ ಹೆಡ್ ಕಾನ್ಸ್‌ಸ್ಟೇಬಲ್ ರೇಖಾ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ನೇಹಾ ಹಿರೇಮಠ್ ರೀತಿನೇ ನಿನ್ನನ್ನೂ ಕೊಲ್ತೀನಿ ಅಂತಾ ಕಿರಾತಕ ಧಮ್ಕಿ ಹಾಕಿದ್ದ, ಆರೋಪಿ ಗಿರೀಶ್ ವಿರುದ್ಧ ಮೃತ ಅಂಜಲಿ ಕುಟುಂಬ ದೂರು ನೀಡಿದ್ದರು. ಆದರೆ ಆರೋಪಿ ಸಿಕ್ಕಿಲ್ಲ ಅಂತೇಳಿ ದೂರಿನ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಕ್ಕೆ ಅಮಾನತು ಮಾಡಲಾಗಿದೆ.
Anjali Murder, Hubballi Neha father Niranjan donates 1 lakh rupees to Mother of Anjali
02-01-26 10:24 pm
HK News Desk
CM Siddaramaiah, Ballari Clash, MLA Bharat Re...
02-01-26 06:09 pm
Ballari Banner Fight, FIR, Death: ಬ್ಯಾನರ್ ವಿಚ...
02-01-26 04:13 pm
ಕೋಗಿಲು ಬಡಾವಣೆ ನಿರಾಶ್ರಿತರಿಗೆ ಮನೆ ಹಂಚಿಕೆ ; ವ್ಯಾ...
02-01-26 01:58 pm
ಎಲ್ಲರಂತೆ ನನಗೂ ಆಕಾಂಕ್ಷೆ ಇದೆ ; ಕುರ್ಚಿ ಫೈಟ್ ನಡು...
01-01-26 06:21 pm
02-01-26 06:43 pm
HK News Desk
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ;...
30-12-25 06:48 pm
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
02-01-26 11:01 pm
Mangalore Correspondent
ಪಾಲಿಕೆ ವ್ಯಾಪ್ತಿಯಲ್ಲಿ ಬೇಸಿಗೆ ಮೊದಲೇ ನೀರಿನ ಸಮಸ್ಯ...
02-01-26 11:00 pm
Pratibha Kulai: ಹಿಂದು ಮುಖಂಡರು ಮರ್ಯಾದೆ ಕಳಕೊಂಡಿ...
02-01-26 09:32 pm
ಕಿಲಿಮಂಜಾರೋ ಬಳಿಕ ಮೌಂಟ್ ಕೆನ್ಯಾ ಹತ್ತಿದ 11ರ ಪೋರ ;...
02-01-26 02:02 pm
Dr Vinaya Hegde Death, NItte Mangalore: ನಿಟ್ಟ...
01-01-26 09:43 am
02-01-26 12:58 pm
Mangalore Correspondent
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm
ಹೊಸ ವರ್ಷ ಸಂಭ್ರಮಾಚರಣೆ ; ಮಂಗಳೂರಿನಲ್ಲಿ ಒಂದು ಸಾವಿ...
01-01-26 08:25 pm
ಕಾರು ಬಾಡಿಗೆ ನೆಪದಲ್ಲಿ ಸುಳ್ಯದಿಂದ ಯುವಕನ ಕರೆದೊಯ್ದ...
31-12-25 07:05 pm
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm