ಬ್ರೇಕಿಂಗ್ ನ್ಯೂಸ್
19-03-24 12:09 pm HK News Desk ಕರ್ನಾಟಕ
ಹುಬ್ಬಳ್ಳಿ , ಮಾ 18: ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಇತ್ತೀಚೆಗೆ ಪ್ರಬಲ ಮೋದಿ ಟೀಕಾಕಾರನಾಗಿ ಬದಲಾಗಿದ್ದಾರೆ. ತುಂಬ ಅಧ್ಯಯನ ಮಾಡಿ, ಮೋದಿ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಚರ್ಚೆಗಳಲ್ಲಿ, ಸಭೆಗಳಲ್ಲಿ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಮೋದಿ ಅವರನ್ನು ಟೀಕಿಸುತ್ತಿದ್ದಾರೆ. ಹಾಗಿದ್ದರೆ ಸಂತೋಷ್ ಲಾಡ್ ಒಮ್ಮಿಂದೊಮ್ಮೆಗೆ ಹೀಗೆ ಪ್ರಖರ ಟೀಕಾಕಾರನಾಗಿ ಬದಲಾಗಿದ್ದು ಹೇಗೆ? ಇದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸ್ಪಷ್ಟ ಉತ್ತರ ಸಿಕ್ಕಿದೆಯಂತೆ !
ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಹ್ಲಾದ್ ಜೋಶಿ ಅವರು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸಂತೋಷ್ ಲಾಡ್ ಬೈಗುಳದ ರಹಸ್ಯ ತೆರೆದಿಟ್ಟಿದ್ದಾರೆ.
ಸಂತೋಷ್ ಲಾಡ್ ಅವರು ಇತ್ತೀಚೆಗೆ ನನ್ನನ್ನು ಮತ್ತು ಮೋದಿಯವರನ್ನು ನಿರಂತರವಾಗಿ ಬಯ್ಯುತ್ತಿದ್ದಾರೆ, ಟೀಕೆ ಮಾಡುತ್ತಿದ್ದಾರೆ. ಅವರು ಈ ರೀತಿಯ ಟೀಕೆ ಮಾಡುತ್ತಿರುವುದು ತಮ್ಮ ಸಚಿವ ಪದವಿ ಉಳಿಸಿಕೊಳ್ಳಲು. ಇದನ್ನು ಸ್ವತಃ ಅವರೇ ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ಜೋಶಿ ಹೇಳಿದರು.
ನಾನು ಮತ್ತು ಲಾಡ್ ಆಗಾಗ ಫ್ಲೈಟ್‌ನಲ್ಲಿ ಸಿಗ್ತಾ ಇರುತ್ತೇವೆ. ದಿಲ್ಲಿಯಿಂದ ಬರುವಾಗ, ಬೆಂಗಳೂರಿನಿಂದ ಬರುವಾಗ ಸಿಗುತ್ತೇವೆ. ಮಾತಾಡಿಕೊಳ್ತೇವೆ. ಒಂದು ದಿನ ನಾನು ಕೇಳಿದೆ. ನೀವು ನನ್ನ ಮೇಲೆ ನಿರಂತರವಾಗಿ ಟೀಕೆ ಮಾಡ್ತಾ ಇರ್ತೀರಿ. ಅದೇನೂ ತೊಂದರೆ ಇಲ್ಲ. ನಾನು ಸಣ್ಣವನು. ಆದರೆ, ಮೋದಿ ಅವರ ಮೇಲೂ ದಾಳಿ ಮಾಡ್ತೀರಲ್ಲಾ, ನಿಮ್ಮ ಪರಿಸ್ಥಿತಿ ಏನು? ಎಂದು ಕೇಳಿದೆ.
ನಾನು ಮತ್ತು ಸಂತೋಷ್ ಲಾಡ್ ಹಿಂದಿಯಲ್ಲಿ ಮಾತಾಡೋದು ಜಾಸ್ತಿ. ಅವರು ಹಿಂದಿಯಲ್ಲಿ ಹೇಳಿದರು: ಕ್ಯಾ ಕರೂ ಸಾಬ್, ಊಪರ್ ಸೇ ಇನ್‌ಸ್ಟ್ರಕ್ಷನ್ ಹೈ, ಮೈ ಡೈಲಿ ಗಾಲಿ ನಹೀ ದಿಯಾ ತೋ ನೌಕರಿ ಚಲೀ ಜಾತೀ ಹೈ! (ಏನು ಮಾಡಲಿ ಸಾಹೇಬ್ರೆ.. ಮೇಲಿನಿಂದ ನನಗೆ ಸೂಚನೆ ಇದೆ. ದಿನಾ ಬಯ್ಯದೆ ಹೋದರೆ ನನ್ನ ಕೆಲಸವೇ ಹೋಗಿ ಬಿಡ್ತದೆ) ಎಂದು ಹೇಳಿದೆ.
ಆಗಿಂದ ನಾನು ತಲೆ ಕೆಡಿಸಿಕೊಂಡಿಲ್ಲ, ನೀವು ತಲೆ ಕೆಡಿಸಿಕೊಳ್ಳಬೇಡಿ. ಉತ್ತರ ಕೊಡುವಾಗ ಕೊಡ್ತೀನಿ ಎಂದು ಜೋಶಿಯವರು ಸಭೆಯಲ್ಲಿ ಹೇಳುವ ವಿಡಿಯೊ ಈಗ ಎಲ್ಲೆಡೆ ವೈರಲ್ ಆಗಿದೆ.
Santosh lad says no option need to shout at Modi always have instructions, Pralhad Joshi reveals flight conversation.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm