ಬ್ರೇಕಿಂಗ್ ನ್ಯೂಸ್
04-03-24 04:56 pm Bangalore Correspondent ಕರ್ನಾಟಕ
ಬೆಂಗಳೂರು, ಮಾ 03: ರಾಜ್ಯಸಭಾ ಚುನಾವಣೆಯ ದಿನ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಯ ಎಫ್‌ಎಸ್‌ಎಲ್ ವರದಿಯನ್ನು ಬಿಜೆಪಿ ಹಾಕಿರುವುದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಸುದ್ದಿಗಾರರ ಜೊತೆ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಖಾಸಗಿ ಸಂಸ್ಥೆಗಳನ್ನು ಇಟ್ಟುಕೊಂಡು ಖಾಸಗಿಯಾಗಿ ಫೋರೆನ್ಸಿಕ್ ವರದಿಗಳನ್ನು ತರಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡುವುದೇ ಮೊದಲನೇ ದೇಶದ್ರೋಹದ ಕೆಲಸ, ಇದು ಸಾಮಾನ್ಯ ಪ್ರಕರಣ ಅಲ್ಲ, ದೇಶದ್ರೋಹದ ಘೋಷಣೆ ಕೂಗಿದ್ದಾರೆ ಅಂತ ಹೇಳ್ತಾ ಇದ್ದಾರೆ. ಅದಕ್ಕೆ ಸರ್ಕಾರ ಉತ್ತರ ಕೊಡಬೇಕು. ಬಿಜೆಪಿಯವರು ಖಾಸಗಿ ಸಂಸ್ಥೆಗಳ ಹತ್ತಿರ ಹೋಗಿ ಅದನ್ನು ಪಬ್ಲಿಕ್ ಮಾಡ್ತಾ ಇದ್ದಾರಲ್ಲ, ಅದು ಮೊದಲನೇ ದೇಶದ್ರೋಹದ ಕೆಲಸ ಎಂದು ಕಿಡಿಕಾರಿದರು.
ಕ್ಲೂ ಫಾರ್ ಎವಿಡೆನ್ಸ್ ಫೋರೆನ್ಸಿಕ್ ಲ್ಯಾಬ್ ಅನ್ನೋ ಸಂಸ್ಥೆಯ ಕ್ರೆಡಿಬಿಲಿಟಿ ಏನು? ಇವರು ಖಾಸಗಿಯಾಗಿ ಏನಾದರೂ ಮಾಡಿಕೊಳ್ಳಲಿ. ಆ ಸಂಸ್ಥೆಗೆ ಸರ್ಕಾರದ ಸರ್ಟಿಫಿಕೇಶನ್ ಇದಿಯೋ ತರಬೇತಿ ಇದೆಯೋ ನನಗೆ ಗೊತ್ತಿಲ್ಲ ಎಂದ ಪ್ರಿಯಾಂಕ್ ಖರ್ಗೆ, ಇದ್ದರೂ ಕೂಡ ಆ ಲ್ಯಾಬ್ ಈ ವಿಚಾರದಲ್ಲಿ ಸ್ಥಳೀಯ ಪೊಲೀಸರಿಗೆ ಮತ್ತು ಸರ್ಕಾರದ ಗಮನಕ್ಕೆ ತಂದು ವರದಿ ಕೊಡಬೇಕಿತ್ತು. ಅಷ್ಟು ಮೆಚುರಿಟಿ ಸಂಸ್ಥೆಗೆ ಇರಬೇಕಾಗಿತ್ತು. ಬಿಜೆಪಿಯವರು ಫೋರೆನ್ಸಿಕ್ ಲ್ಯಾಬ್‌ಗೆ ಕೊಟ್ಟಿರುವ ಫೂಟೇಜ್ ಯಾವುದು?ಇಂಟರ್ನೆಟ್‌ನಲ್ಲಿ ವಿಡಿಯೋ ಕ್ವಾಲಿಟಿ ಸಪ್ರೆಸ್ ಆಗಿಯೇ ಆಗುತ್ತದೆ. ಯಾವ ಫೂಟೇಜ್ ಕೊಟ್ಟಿದ್ದಾರೆ ಮೊದಲನೇ ಪ್ರಶ್ನೆ, ರಾ ಫೂಟೇಜ್ ಕೊಟ್ಟಿದ್ರೆ ಇವರಿಗೆ ರಾ ಫೂಟೇಜ್ ಎಲ್ಲಿಂದ ಸಿಕ್ತು? ಎಂದು ಪ್ರಶ್ನಿಸಿದರು.
ಇನ್ನು, ಖಾಸಗಿಯಾಗಿ ಎಫ್‌ಎಸ್‌ಎಲ್ ವರದಿ ತಯಾರಿಸಿದ ಸಂವಾದ ಫೌಂಡೇಶನ್‌ಗೆ ಏನು ಆಸಕ್ತಿ ಹೂ ಆರ್ ದೇ? ಎಂದು ಪ್ರಶ್ನಿಸಿದ ಖರ್ಗೆ, ಸಂವಾದ ಸಂಸ್ಥೆ RSS ನವರ ಭಜನೆ ಆಡುವ ಸಂಸ್ಥೆ. ಇದು ಯಾವ ರೀತಿ ಸಾಮಾಜಿಕ ಜಾಲತಾಣದಲ್ಲಿ ಜಾತಿ ಜಾತಿಗಳ ನಡುವೆ ಜಗಳ ಹಚ್ಚುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೂ ಆರ್ ದೇ? ಫೂಟೇಜ್ ಕೊಡೋದಕ್ಕೆ ಲ್ಯಾಬ್ ಟೆಸ್ಟ್ ಮಾಡುವುದಕ್ಕೆ ಅವರು ಯಾರು? ಎಂದು ಪ್ರಶ್ನಿಸಿದರು.
ಇನ್ನು, ಸರ್ಕಾರ ಪದೇ ಪದೇ ಎಫ್ಎಸ್ಎಲ್ ರಿಪೋರ್ಟ್ ನೋಡುವುದಕ್ಕೆ ಕಾರಣ ಯಾವುದೇ ಗೊಂದಲ ಇರಬಾರದು ಅನ್ನೋದು ಎಂದ ಸಚಿವ ಪ್ರಿಯಾಂಕ ಖರ್ಗೆ, ಇವರು ಯಾವ ಫೂಟೇಜ್ ಕೊಟ್ಟಿದ್ದಾರೋ? ಮೂರು ತೆಗೆದುಕೊಂಡಿದ್ದಾರೋ ನೂರು ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಗೃಹ ಇಲಾಖೆ ಇದರ ಬಗ್ಗೆ ವರದಿ ಕೊಡಬೇಕೇ ಹೊರತು ಸಂವಾದ ಫೌಂಡೇಶನ್ ಅಲ್ಲ. ಬಿಜೆಪಿಯವರಿಗೆ ಜವಾಬ್ದಾರಿಯುತ ಪಕ್ಷವಾಗಿ ಸಂವಾದ ಹಾಕಿದ ತಾಳಕ್ಕೆ ಕುಣಿತಾರಲ್ಲ ಇವರಿಗೆ ನಾಚಿಕೆ ಬೇಡ್ವಾ? ಎಂದು ಹೀಯಾಳಿಸಿದರು.
Priyank kharge slams samvada foundation over fsl report of Pakistan zindabad twitted by BJP.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm