ಬ್ರೇಕಿಂಗ್ ನ್ಯೂಸ್
28-02-24 07:23 pm HK News Desk ಕರ್ನಾಟಕ
ಶಿರಸಿ, ಫೆ 28: ರಾಜ್ಯಸಭಾ ಚುನಾವಣೆಯ ಮತದಾನಕ್ಕೆ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯೆ ನೀಡಿದ್ದಾರೆ. ''ಮಂಗಳವಾರ ಮುಂಜಾನೆಯಿಂದ ತಮ್ಮ ಆರೋಗ್ಯದಲ್ಲಿ ಏರುಪೇರು ಆಗಿತ್ತು. ವೈದ್ಯರ ಸಲಹೆಯ ಮೇರೆಗೆ ನಾನು ಮತದಾನಕ್ಕೆ ಹೋಗಲು ಸಾಧ್ಯವಾಗಲಿಲ್ಲ'' ಎಂದು ಸ್ಪಷ್ಟಪಡಿಸಿದರು.
ಯಾರಿಗೋ ಹೆದರಿ, ಬೆದರಿ ಮತದಾನದಿಂದ ದೂರ ಉಳಿದಿಲ್ಲ , ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೋಗಲ್ಲ ,ಅನಾರೋಗ್ಯದಿಂದ ಭಾಗವಹಿಸಿಲ್ಲ ಅಷ್ಟೇ ; ಶಾಸಕ ಹೆಬ್ಬಾರ್
ಈ ಕುರಿತು ಯಲ್ಲಾಪುರದಲ್ಲಿ ಬುಧವಾರ ಮಾಧ್ಯಮದವರ ಜೊತೆ ಮಾತನಾಡಿದ ಹೆಬ್ಬಾರ್, ''ಆಸ್ಪತ್ರೆಯಲ್ಲೇ ಸಮಯ ಕಳೆದು ಹೋಯಿತು. ಅದಕ್ಕೆ ರಾಜ್ಯಸಭಾ ಚುನಾವಣೆಯ ಮತದಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಯಾರಿಗೋ ಹೆದರಿ, ಬೆದರಿ ಮತದಾನದಿಂದ ದೂರ ಉಳಿದಿಲ್ಲ. ಅಲ್ಲದೇ ರಾಜ್ಯ ರಾಜಕಾರಣದಲ್ಲಿ ಎಲ್ಲವನ್ನು ಎದುರಿಸಲು ಸಿದ್ಧ. ಕಾನೂನು ಹೋರಾಟ ಆಗಿರಲಿ ಅಥವಾ ರಾಜಕೀಯ ವಿಷಯ ಆಗಲಿ'' ಎಂದು ಖಡಕ್ ಆಗಿ ಹೇಳಿದರು.
ಪಕ್ಷದ ಮೇಲೆ ಅಸಮಾಧಾನ ಇದೆ- ಹೆಬ್ಬಾರ್: '
'ತನಗೆ ಬಿಜೆಪಿ ಮೇಲೆ ಅಸಮಾಧಾನ ಇದೆ. ತನ್ನನ್ನು ಸ್ಥಳೀಯ ಬಿಜೆಪಿ ನಾಯಕರು ಸೋಲಿಸಲು ಪ್ರಯತ್ನ ಪಟ್ಟರು. ಇದನ್ನು ಹೈಕಮಾಂಡ್ ಗಮನಕ್ಕೂ ತಂದಿದ್ದೇನೆ. ಆದ್ರೆ, ಯಾವುದೇ ಕ್ರಮ ಆಗಿಲ್ಲ'' ಎಂದ ಹೆಬ್ಬಾರ್ ಅವರು, ''ಸದ್ಯ ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಟ್ಟು ಹೋಗಲ್ಲ. ಬಿಜೆಪಿಗೆ ರಾಜೀನಾಮೆ ಕೊಡುವ ಪ್ರಮೇಯ ಬಂದಿಲ್ಲ. ನನಗೆ ಪಕ್ಷದ ಮೇಲೆ ಅಸಮಾಧಾನ ಇದೆ. ನನ್ನನ್ನು ಸೋಲಿಸಲು ಮುಂದಾದವರನ್ನೇ ಪೋಷಿಸಲಾಗುತ್ತಿದೆ'' ಎಂದು ಆರೋಪಿಸಿದರು. ಆದ್ರೆ, ಕಾಂಗ್ರೆಸ್ ಸೇರ್ಪಡೆ ವಿಚಾರವನ್ನು ಶಿವರಾಮ್ ಹೆಬ್ಬಾರ್ ತಳ್ಳಿಹಾಕಿದರು.
''ನಾನು ಬಿಜೆಪಿಯ ಶಾಸಕನಾಗಿದ್ದು, ಇಲ್ಲಿ ಶಾಸಕನಾಗಿ ಉಳಿಯುತ್ತೇನೆ. ಆದರೆ, ಕಾದು ನೋಡೋಣ. ಮುಂದೆ ಬದಲಾದ ರಾಜಕಾರಣ ಏನು ಮಾಡಬೇಕು ಎಂಬುದರ ಬಗ್ಗೆ ಚಿಂತಿಸುತ್ತೇನೆ ಎಂದೂ ಸಹ ಪ್ರತಿಕ್ರಿಯಿಸಿದರು. ಇದೇ ವೇಳೆ ಪಾಕಿಸ್ತಾನ ಕುರಿತ ಘೋಷಣೆಗೆ ಸಂಬಂಧಿಸಿದ ಪ್ರತಿಕ್ರಿಯಿಸಿ, ''ಇದನ್ನು ಯಾರೇ ಹೇಳಿದ್ದರೂ ಖಂಡನೀಯ'' ಎಂದರು.
Shivaram Hebbar says will not betray BJP party, give health reason. BJP MLA Shivaram Hebbar, also a former minister, abstained from voting, embarrassing the party leadership in the state.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm