ಬ್ರೇಕಿಂಗ್ ನ್ಯೂಸ್
21-12-23 03:59 pm HK News Desk ಕರ್ನಾಟಕ
ಬಾಗಲಕೋಟೆ, ಡಿ 21: ಸಂಸತ್ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಮತ್ತೊಬ್ಬ ಟೆಕ್ಕಿಯನ್ನು ದೆಹಲಿ ಪೊಲೀಸರು ಬುಧವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. 30 ವರ್ಷದ ಸಾಯಿಕೃಷ್ಣ ಜಗಲಿ ವಶಕ್ಕೆ ಪಡೆಯಲಾದ ಟೆಕ್ಕಿ ಆಗಿದ್ದಾರೆ. ಸದ್ಯ ದೆಹಲಿ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ಧಾರೆ.
’’ತಮ್ಮ ಪುತ್ರನನ್ನು ವಿಚಾರಣೆಗಾಗಿ ಕರೆದುಕೊಂಡು ಹೋಗುತ್ತೇವೆ ಎಂದು ಮಾಹಿತಿ ನೀಡಿ, ಕರೆದುಕೊಂಡು ಹೋಗಿದ್ದಾರೆ. ಮನೋರಂಜನ್ ಮತ್ತು ನನ್ನ ಮಗ ರೂಮ್ಮೇಟ್ಗಳು ಆಗಿದ್ದರಿಂದ ಇಬ್ಬರ ಸಮಕ್ಷಮ ವಿಚಾರಣೆ ಮಾಡಲಿದ್ದಾರೆ. ಮತ್ತೆ ಎರಡು ದಿನದಲ್ಲಿ ವಾಪಸ್ ಕಳುಹಿಸಲಿದ್ದಾರೆ. ಬಂದ ನಂತರ ಇಬ್ಬರು ಸೇರಿ ಸಮಗ್ರ ಮಾಹಿತಿ ನೀಡುತ್ತೇವೆ‘‘ ಎಂದು ಸಾಯಿಕೃಷ್ಣ ತಂದೆಯಾಗಿರುವ ನಿವೃತ್ತ ಡಿವೈಎಸ್ಪಿ ವಿಠಲ್ ಜಗಲಿ ತಿಳಿಸಿದರು.
ಈ ಬಗ್ಗೆ ಸಾಯಿಕೃಷ್ಣ ಸಹೋದರಿ ಮಾತನಾಡಿದ್ದು, ''ದೆಹಲಿಯಿಂದ ಇಲ್ಲಿಗೆ ಪೊಲೀಸರು ಆಗಮಿಸಿದ್ದರು. ಕೆಲ ಸಮಯ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಪೊಲೀಸರು ಕೇಳಿದ ಪ್ರಶ್ನೆಗೆ ಸಾಯಿಕೃಷ್ಣ ಸರಿಯಾಗಿ ಮಾಹಿತಿ ನೀಡಿದ. ಆದರೆ, ಹೆಚ್ಚಿನ ಮಾಹಿತಿ ಅವಶ್ಯಕತೆ ಇರುವುದರಿಂದ ಸಾಯಿಕೃಷ್ಣನನ್ನು ದೆಹಲಿಗೆ ಕರೆದುಕೊಂಡು ಹೋಗಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದರು. ನಾವು ಕರೆದುಕೊಂಡು ಹೋಗುವಂತೆ ಹೇಳಿದೆವು. ಸಾಯಿಕೃಷ್ಣ ಮತ್ತು ಮನೋರಂಜನ್ ಸೇರಿ ಒಟ್ಟು ಮೂವರು ಓದುವಾಗ ರೂಮೆಟ್ ಆಗಿದ್ದರು. ಇಲ್ಲಿಗೆ ಯಾವತ್ತೂ ಆತ ಬಂದಿಲ್ಲ. ನನ್ನ ತಮ್ಮ ದ್ವಿತೀಯ ಪಿಯುಸಿಯನ್ನು ಬಾಗಲಕೋಟೆಯಲ್ಲಿ ಮುಗಿಸಿದ. ಬಳಿಕ ಇಂಜಿನಿಯರಿಂಗ್ ಅನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದ. ಕೆಲವು ದಿನ ಖಾಸಗಿ ಕಂಪನಿಯೊಂದರಲ್ಲಿ ವರ್ಕ್ ಫ್ರಂ ಹೋಮ್ ಕೆಲಸ ಮಾಡಿದ. ಬಳಿಕ ಕೆಲಸ ಬಿಟ್ಟು ಇದೀಗ ತನ್ನದೇ ಆದ ಆ್ಯಪ್ವೊಂದನ್ನು ಅಭಿವೃದ್ಧಿಪಡಿಸುತ್ತಿದ್ದಾನೆ. ಸದ್ಯ ಕೇಳಿ ಬರುತ್ತಿರುವ ಮನೋರಂಜನ್ ಪ್ರಕರಣಕ್ಕೂ ನಮ್ಮ ಸಹೋದರನಿಗೂ ಯಾವುದೇ ರೀತಿಯ ಸಂಬಂಧ ಇಲ್ಲ. ರೂಮೆಟ್ ಆಗಿದ್ದರಿಂದ ಆತನನ್ನು ಕರೆದುಕೊಂಡು ಹೋಗಿದ್ದಾರೆ. ಪೊಲೀಸರ ಯಾವುದೇ ವಿಚಾರಣೆಗೂ ಸಿದ್ಧ. ತಪ್ಪು ಮಾಡಿಲ್ಲ ಎಂದರೆ ಹೆದರುವುದು ಏತಕ್ಕೆ'' ಎಂದು ಪ್ರಶ್ನಿಸಿದರು.
Delhi Police has detained two more people for questioning in the massive Parliament security breach case. One of them is identified as Sai Krishna, son of retired Deputy Superintendent of Police from Karnataka’s Bagalkote.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm