ಬ್ರೇಕಿಂಗ್ ನ್ಯೂಸ್
27-11-23 05:37 pm Bangalore Correspondent ಕರ್ನಾಟಕ
ಬೆಂಗಳೂರು, ನ 27: ಬ್ಯಾಂಕ್ ಸಾಲ ಯೋಜನೆಗಳ ಮೂಲಕ ಉದ್ಯಮಿಗಳನ್ನು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಯೂಸುಫ್ ಎಂಬಾತನಾಗಿದ್ದು, ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾಯಿಸಲಾಗಿದೆ. ಯೂಸುಫ್ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಂದಿಗಿಗೆ ನಂಟು, ರಾಜಕೀಯ ಚಟುವಟಿಕೆಗಳಿಗಾಗಿ ಉನ್ನತ ಬಿಜೆಪಿ ನಾಯಕರೊಂದಿಗೆ ಸಂಪರ್ಕ ಹೊಂದಿರುವುದಾಗಿ ಹೇಳುವ ಮೂಲಕ ವ್ಯಕ್ತಿಗಳನ್ನು ವಂಚಿಸಿದ್ದಾನೆ. ವಂಚನೆಗೆ ಸಂಬಂಧಿಸಿದಂತೆ ಈತನ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಇತ್ತೀಚೆಗೆ ಬ್ಯಾಂಕ್ ಸಾಲಕ್ಕೆ ಅನುಕೂಲ ಮಾಡಿಕೊಡುವ ನೆಪದಲ್ಲಿ ಹೋಟೆಲ್ ಉದ್ಯಮಿ ಶಾಜಿ ಕೃಷ್ಣನ್ ಎನ್ನುವವರಿಂದ ದಾಖಲೆಗಳನ್ನು ಪಡೆದುಕೊಂಡಿದ್ದ. ರಾಷ್ಟ್ರೀಕೃತ ಬ್ಯಾಂಕ್‌ನಿಂದ ಸಾಲ ಪಡೆದಿರುವ ಅನಿಸಿಕೆಯಿಂದ ಕೃಷ್ಣನ್, ಯೂಸುಫ್ ಅವರೊಂದಿಗೆ ಬ್ಯಾಂಕ್‌ಗೆ ತೆರಳಿ ಅಗತ್ಯ ಅರ್ಜಿಗಳಿಗೆ ಸಹಿ ಹಾಕಿದ್ದರು. ಆದರೆ, ಆರೋಪಿ 2.5 ಕೋಟಿ ರೂ. ಸಾಲ ಪಡೆದು ವಂಚನೆ ಮಾಡಿದ್ದು, ನಿಗದಿತ ಅವಧಿಯೊಳಗೆ ಮರುಪಾವತಿ ಮಾಡುವ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗಿರುವು ನಂತರ ತಿಳಿದುಬಂದಿದೆ. ಕೃಷ್ಣನ್ ಇತರೆ ವ್ಯವಹಾರಕ್ಕಾಗಿ ಬ್ಯಾಂಕ್ ಗೆ ಭೇಟಿ ನೀಡಿದಾಗ ವಂಚನೆ ಬೆಳಕಿಗೆ ಬಂದಿದೆ.
ಕೃಷ್ಣನ್ ಅವರ ದೂರಿನ ಆಧಾರದ ಮೇಲೆ ವಂಚನೆ ಪ್ರಕರಣವನ್ನು ದಾಖಲಿಸಲಾಗಿದ್ದು, ಯೂಸುಫ್‌ನನ್ನು ಬಂಧಿಸಲಾಗಿದೆ. ಆರೋಪಿ ಉದ್ಯಮಿಗಳೊಂದಿಗೆ ಸ್ನೇಹ ಬೆಳೆಸಿದ್ದು, ರಾಜಕೀಯ ಮುಖಂಡರು ಮತ್ತು ಬ್ಯಾಂಕ್ ಮ್ಯಾನೇಜರ್‌ಗಳೊಂದಿಗೆ ಸಂಪರ್ಕ ಹೊಂದಿದ್ದೇನೆ ಎಂದು ಹೇಳಿರುವುದು ತನಿಖೆಯಿಂದ ತಿಳಿದುಬಂದಿದೆ. ಸಚಿವರು ಮತ್ತು ಅಧಿಕಾರಿಗಳಿಗೆ ಪಾವತಿ ಮೂಲಕ ಸರ್ಕಾರಕ್ಕೆ ಸಂಬಂಧಿಸಿದ ಉದ್ಯಮದ ಕೆಲಸಕ್ಕೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿ ಉದ್ಯಮಿಗಳಿಂದ ಹಣ ಪಡೆದಿದ್ದ ಎನ್ನಲಾಗಿದೆ.
Man cheats businessman of 2.5 crores in the name of BJP president Vijayendra in Bangalore.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
10-11-25 11:07 pm
HK News Desk
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ; ಮೂವರು ಶ...
09-11-25 07:49 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm