ಬ್ರೇಕಿಂಗ್ ನ್ಯೂಸ್
20-11-23 07:00 pm Bangalore Correspondent ಕರ್ನಾಟಕ
ಬೆಂಗಳೂರು, ನ.20: ಕಾಂತಾರ - 2 ಚಿತ್ರ ಶೀಘ್ರದಲ್ಲೇ ಬರಲಿದೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದರು. ಚಿತ್ರದ ಕತೆಯ ಬಗ್ಗೆಯೂ ಕಾಂತಾರ ಚಿತ್ರ ಕತೆಗಿಂತಲೂ ಹಿಂದಿನದ್ದು ಎಂದು ಹೇಳಿ ಕುತೂಹಲ ಹುಟ್ಟಿಸಿದ್ದರು. ಈಗ ಆ ಕತೆ ಯಾವುದು ಎನ್ನುವ ಸಣ್ಣ ಸುಳಿವು ಹೊರ ಬಿದ್ದಿದೆ.
ತುಳುನಾಡಿನ ದೈವದ ಕಥೆಯನ್ನಿಟ್ಟುಕೊಂಡು ನಿರ್ಮಿಸಿದ್ದ ಕಾಂತಾರ ಪ್ಯಾನ್ ಇಂಡಿಯಾದಲ್ಲಿ ಹಿಟ್ ಆಗಿತ್ತು. ದೊಡ್ಡ ಯಶಸ್ಸಿನ ಬಳಿಕ ಸಿನಿಮಾದ ಎರಡನೇ ಭಾಗ ಅಂದರೆ ಪ್ರೀಕ್ವೆಲ್ ನ್ನು ತೆರೆಗೆ ತರುವುದಾಗಿ ರಿಷಬ್ ಶೆಟ್ಟಿ ಇದೇ ವರ್ಷದ ಫೆಬ್ರವರಿಯಲ್ಲಿ ಸಿನಿಮಾದ 100ನೇ ದಿನದ ಸಂಭ್ರಮಾಚರಣೆ ಸಂದರ್ಭದಲ್ಲಿ ಹೇಳಿದ್ದರು. ನೀವು ನೋಡಿರುವುದು ಸಿನಿಮಾದ 2ನೇ ಭಾಗ, ಮುಂದೆ ಬರಲಿರುವುದು ಸಿನಿಮಾದ ಮೊದಲ ಭಾಗ ಎಂದು ಹೇಳಿದ್ದು ಕುತೂಹಲಕ್ಕೀಡಾಗುವಂತೆ ಮಾಡಿತ್ತು.
ಸಿನಿಮಾದ ಚಿತ್ರೀಕರಣ ಹಾಗೂ ಸ್ಕ್ರಿಪ್ಟ್ ಬಗ್ಗೆ ರಿಷಬ್ ಸಾಕಷ್ಟು ತಯಾರಿ ನಡೆಸಿದ್ದಾರೆ. ಆದರೆ ಎರಡನೇ ಭಾಗದ ಕಥೆ ಏನು ಎನ್ನುವುದರ ಬಗ್ಗೆ ಕುತೂಹಲ ಹೆಚ್ಚಿದೆ. ಕೆಲವು ಮಾಹಿತಿ ಪ್ರಕಾರ, ʼಕಾಂತಾರ-2ʼ ನಲ್ಲಿ ಪಂಜುರ್ಲಿ ದೈವದ ಮೂಲದ ಕಥೆ ಇರಲಿದೆ ಎನ್ನಲಾಗಿದೆ. ಕ್ರಿ.ಶ. 300-400ರ ಕಾಲದ ಕಥೆ ಇರಲಿದ್ದು ಪಂಜುರ್ಲಿ ದೈವದ ಹುಟ್ಟು ಹಾಗೂ ಬೆಳೆದುಬಂದ ಆಚರಣೆ ಕುರಿತ ಕಥೆ ಇರಲಿದೆ ಎನ್ನುವ ಸುಳಿವು ಸಿಕ್ಕಿದೆ.
ʼಕಾಂತಾರʼ ಚಿತ್ರದಲ್ಲಿ ತುಳುನಾಡಿನ ಆಚರಣೆ, ಸಂಪ್ರದಾಯಗಳು ಕಾಣಿಸಿಕೊಂಡಿದ್ದವು. ಸಂಪೂರ್ಣ ಚಿತ್ರೀಕರಣ ಕುಂದಾಪುರದ ರಿಷಬ್ ಶೆಟ್ಟಿ ಊರಿನಲ್ಲೇ ನಡೆದಿತ್ತು. ಚಿತ್ರಕ್ಕೆ ಸುಮಾರು 16 ಕೋಟಿ ರೂ. ಖರ್ಚು ಆಗಿತ್ತು. ʼಕಾಂತಾರ-2ʼ ಚಿತ್ರದ ಬಜೆಟ್ ಅದಕ್ಕೂ ಹೆಚ್ಚಿನದಾಗಿರಲಿದೆ. ಇದೇ ನವೆಂಬರ್ ಅಂತ್ಯಕ್ಕೆ ಉಡುಪಿಯಲ್ಲಿ ʼಕಾಂತಾರ-2ʼ ಸಿನಿಮಾದ ಮುಹೂರ್ತ ನೆರವೇರಲಿದೆ. ಮುಂದಿನ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ ಎನ್ನುವ ಮಾಹಿತಿಯಿದೆ.
After the phenomenal success of 'Kantara', Rishab Shetty and team are all set for 'Kantara 2'. The film will be a prequel to the ever-successful first part. The film will go on the floors soon.
13-01-26 03:04 pm
Bangalore Correspondent
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
13-01-26 03:37 pm
HK News Desk
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm