ಬ್ರೇಕಿಂಗ್ ನ್ಯೂಸ್
15-11-23 11:38 am Bangalore Correspondent ಕರ್ನಾಟಕ
ಬೆಂಗಳೂರು, ನ 15: ಬಿಗ್ ಬಾಸ್ ಕನ್ನಡ ಸೀಸನ್ 10 ನಲ್ಲಿ ಸ್ಪರ್ಧಿಯಾಗಿರುವ ಆಧುನಿಕ ಕೃಷಿಕ ವರ್ತೂರು ಸಂತೋಷ್ ವಿರುದ್ಧ ಕಳೆದ ಕೆಲ ದಿನಗಳ ಹಿಂದೆ ಹುಲಿ ಉಗುರು ಧರಿಸಿದ್ದಕ್ಕೆ ದೂರು ದಾಖಲಾಗಿತ್ತು. ತೀವ್ರ ವಿಚಾರಣೆ ಬಳಿಕ ವರ್ತೂರು ಅವರಿಗೆ ಜಾಮೀನು ಸಿಕ್ಕಿದೆ.
ಇದೀಗ ಬಿಗ್ ಬಾಸ್ ನ ಮತ್ತೊಬ್ಬ ಸ್ಪರ್ಧಿ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಕಿರುತೆರೆ ನಟಿಯಾಗಿ , ಸಿನಿಮಾಗಳಲ್ಲೂ ನಟಿಸಿರುವ ತನಿಷಾ ಕುಪ್ಪಂಡ ಈ ಬಾರಿಯ ಬಿಗ್ ಬಾಸ್ ನಲ್ಲಿ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.
ಇದೀಗ ತನಿಷಾ ಅವರ ವಿರುದ್ಧ ಜಾತಿ ನಿಂದನೆ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ.ಪದ್ಮಾ ಎಂಬವರು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಎಸ್ ಸಿ ಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ.
ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಅವಹೇಳನಕಾರಿ ಪದ ಬಳಕೆ ಆರೋಪಿಸಿ ಅವರು ದೂರು ನೀಡಿದ್ದಾರೆ. ಪದಬಳಕೆ ಮಾಡಿ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.
ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕೆಂದು ಎಸ್ ಸಿ ಎಸ್ಟಿ ಕಾಯ್ದೆಡಿ ಕ್ರಮಕ್ಕೆ ಆಗ್ರಹಿಸಿ ದೂರು ದಾಖಲಾಗಿದೆ.
ಯಾವಾಗ ಪದ ಬಳಕೆ ಮಾಡಲಾಯ್ತು?
'ಇದು ಗೊಂಬೆ ಆಟವಯ್ಯ' ಎಂಬ ಟಾಸ್ಕ್‌ನಲ್ಲಿ ಸ್ಪರ್ಧಿಗಳು ತಮ್ಮ ಎದುರಾಳಿ ಸ್ಪರ್ಧಿಗಳ ಭಾವನೆಗಳನ್ನು ವ್ಯಕ್ತಪಡಿಸುವ ಹಾಗೆ ಮಾಡಬೇಕಿತ್ತು ಎಂದು ಹೇಳಲಾಗಿತ್ತು. ಆಗ ಪ್ರತಾಪ್ ಅವರು ಉಸ್ತುವಾರಿಯಾಗಿದ್ದರು. ಪ್ರತಾಪ್ ಅವರು ಎದುರಾಳಿ ತಂಡದ ತಪ್ಪುಗಳನ್ನು ಸರಿಯಾಗಿ ಮೆನ್ಶನ್ ಮಾಡಿಲ್ಲ ಅಂತ ವರ್ತೂರು ಸಂತೋಷ್, ತನಿಷಾ, ಮೈಕಲ್ ಅವರು ಆರೋಪ ಮಾಡಿದ್ದರು. ಈ ವಿಚಾರವಾಗಿ ಒಂದಷ್ಟು ಜಗಳ ನಡೆದಿದೆ.
ಇದೀಗ ಪೊಲೀಸರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವರ್ತೂರು ಸಂತೋಷ್ ನಂತರ ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ಜೈಲು ಸೇರುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ತನಿಷಾ ವಿಚಾರಣೆ ಬಳಿಕ ಬಿಗ್ ಬಾಸ್ ಸ್ಪರ್ಧಿಯನ್ನು ಪೊಲೀಸರು ಬಂಧಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಸ್ಯಾಂಡಲ್ ವುಡ್ ನಲ್ಲಿ ʼಬಾಡಿಗಾಡ್ʼ, ʼಉಂಡೆನಾಮ. ʼಪೆಂಟಗನ್ʼ ಮುಂತಾದ ಸಿನಿಮಾದಲ್ಲಿ ಅವರು ನಟಿಸಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರಗೂ ಎದುರಾಗಿತ್ತು ಸಂಕಷ್ಟ!
ಇತ್ತೀಚೆಗೆ ನಟ, ನಿರ್ದೇಶಕ ಉಪೇಂದ್ರ, ಲೈವ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಆಕ್ಷೇಪಾರ್ಹ ಪದವೊಂದನ್ನು ಬಳಕೆ ಮಾಡಿ ಸಂಕಷ್ಟಕ್ಕೆ ಸಿಲುಕಿದ್ರು. ಉಪೇಂದ್ರ ವಿರುದ್ಧ ದಲಿತಪರ ಸಂಘಟನೆಗಳು ದೂರು ನೀಡಿದ್ದವು. ಬಳಿಕ ನಟ ಉಪೇಂದ್ರ ಸೋಶಿಯಲ್ ಮೀಡಿಯಾದ ಮೂಲಕ ಕ್ಷಮೆಯನ್ನೂ ಸಹ ಕೇಳಿದ್ದರು.
FIR filed against contestant Tanisha Kuppanda under SC/ST atrocities act for allegedly using derogatory language against Bhovi community.
29-08-25 10:51 pm
HK News Desk
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
29-08-25 10:54 pm
Mangalore Correspondent
Talapady Accident, Ksrtc, Death, Mangalore: ತ...
29-08-25 09:08 pm
Mangalore, Eric Ozario, Konkani, Death: ಮಾಂಡ್...
29-08-25 08:13 pm
Mahesh Shetty Thimarodi, SIT, Mangalore: ಬೆಳ್...
29-08-25 03:48 pm
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm