ಬ್ರೇಕಿಂಗ್ ನ್ಯೂಸ್
25-09-23 03:22 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.25: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರುಪಾಯಿ ಪಡೆದು ಪಂಗನಾಮ ಹಾಕಿದ್ದ ಚೈತ್ರಾ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿದೆ. ಬಂಧನದ ವೇಳೆ ಹೈಡ್ರಾಮಾ ಮಾಡಿದ್ದ ಚೈತ್ರಾ ಜೈಲಿನಲ್ಲಿ ಕಣ್ಣೀರು ಹಾಕಲು ಶುರು ಮಾಡಿದ್ದಾಳೆ.
ಶನಿವಾರ ಸಂಜೆ ಪರಪ್ಪನ ಅಗ್ರಹಾರ ಜೈಲು ಪ್ರವೇಶಿಸಿದ ಚೈತ್ರಾ ಮತ್ತು ಇತರ ಐದು ಮಂದಿಯನ್ನು ಹೊಸ ಪ್ರತ್ಯೇಕ ಸೆಲ್ ನಲ್ಲಿ ಇರಿಸಲಾಗಿದೆ. ಅವರನ್ನು 10 ದಿನಗಳ ಕಾಲ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಿದ್ದಾರೆ ಎನ್ನಲಾಗಿದೆ. ಮೊದಲ ದಿನ ರಾತ್ರಿಯಲ್ಲಿ ಜೈಲು ಸಿಬ್ಬಂದಿ ಕೊಟ್ಟ ಚಪಾತಿ, ಅನ್ನ ಸಾಂಬಾರ್ ಸೇವಿಸಿದ್ದ ಚೈತ್ರಾ ಇಡೀ ರಾತ್ರಿ ನಿದ್ರೆ ಇಲ್ಲದೆ ಕಣ್ಣೀರು ಹಾಕಿದ್ದಳು ಎಂದು ಜೈಲಿನ ಸಿಬಂದಿ ತಿಳಿಸಿದ್ದಾರೆ.
ನಿದ್ದೆ ಇಲ್ಲದೆ ರಾತ್ರಿ ಕಳೆದ ಚೈತ್ರಾ, ಭಾನುವಾರ ಬೆಳಗ್ಗೆ ಜೈಲು ಸಿಬ್ಬಂದಿ ಕೊಟ್ಟ ಪಲಾವ್ ಸೇವಿಸಿದ್ದಾಳೆ. ಆಕೆಗೆ ಜೈಲಿನಲ್ಲಿ ವಿಚಾರಣಾಧೀನ ಕೈದಿ ಸಂಖ್ಯೆಯನ್ನು ನೀಡಿದ್ದು, ಅದರಂತೆ 9,737 ಯುಟಿಪಿ ನಂಬರ್ ನೀಡಲಾಗಿದೆ. ಉಳಿದಂತೆ ಈಕೆ ಜೊತೆ ಜೈಲು ಸೇರಿದ ಮೋಹನ್‌ಗೆ 9,738, ರಮೇಶ್‌ಗೆ 9,739, ಚೆನ್ನಾ ನಾಯಕ್‌ಗೆ 9,740, ಧನರಾಜ್‌ಗೆ 9,741 ರಂತೆ ಕೈದಿ ಸಂಖ್ಯೆ ನೀಡಲಾಗಿದೆ.
ಒಂದು ರಾತ್ರಿ ಪರಪ್ಪನ ಅಗ್ರಹಾರದ ಸಾಮಾನ್ಯ ಜೈಲಿನಲ್ಲಿ ವಾಸ್ತವ್ಯ ಹೂಡಿದ್ದ ಚೈತ್ರಾ ಅಂಡ್ ಗ್ಯಾಂಗ್ ಭಾನುವಾರ ಹೊಸ ಬಂಧೀಖಾನೆಯ ಕ್ವಾರಂಟೈನ್ ಸೆಲ್‌ಗೆ ಶಿಫ್ಟ್ ಆಗಿದ್ದಾರೆ. ಒಂಬತ್ತು ದಿನಗಳ ಬಳಿಕ ಹಳೆ ಬಂಧಿಖಾನೆಗೆ ಎಲ್ಲರನ್ನೂ ಶಿಫ್ಟ್ ಮಾಡಲಿದ್ದಾರೆ. ಉಳಿದ ಆರೋಪಿಗಳು ಚೈತ್ರಾಳ ಮೇಲೆಯೇ ಬೊಟ್ಟು ಮಾಡಿದ್ದು ಆಕೆ ಹೇಳಿದಂತೆ ಮಾಡಿದ್ದೇವೆ ಎನ್ನುವುದು ಸಾಕ್ಷ್ಯ ಸಹಿತ ಸಿಕ್ಕಿಬಿದ್ದಂತಾಗಿದೆ.
Chaitra Kundapur in Bangalore Jail, Hindu Fire band busts in tears spending night.
30-08-25 04:51 pm
Bangalore Correspondent
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
30-08-25 06:44 pm
HK News Desk
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
30-08-25 11:08 pm
Mangalore Correspondent
2002ರ ಉಳ್ಳಾಲದ ಚಾರಿತ್ರಿಕ ನಾಗಮಂಡಲದ ರೂವಾರಿ, ಧಾರ್...
30-08-25 11:01 pm
Mangalore, Ganesh Chaturthi, Catholic: ಸಂಘನಿಕ...
30-08-25 10:10 pm
ಕೊಲ್ಲೂರು ; ನದಿಯಲ್ಲಿ ಕೊಚ್ಚಿ ಹೋಗಿದ್ದ ಬೆಂಗಳೂರಿನ...
30-08-25 09:16 pm
Talapady Accident, Mangalore, Ksrtc Bus: ತಲಪಾ...
30-08-25 04:23 pm
30-08-25 03:22 pm
Mangalore Correspondent
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm