ಬ್ರೇಕಿಂಗ್ ನ್ಯೂಸ್
27-08-23 07:32 pm HK News Desk ಕರ್ನಾಟಕ
ಹಾಸನ, ಆಗಸ್ಟ್ 27: ``ಶೆಟ್ಟರ್ ಮತ್ತೆ ಬಿಜೆಪಿಗೆ ಮರಳುವ ಸೂಚನೆ ಇಲ್ಲ. ಬಿಜೆಪಿಯವರು ಅವರಿಗೆ ಮಾಡಿರುವಷ್ಟು ಅವಮಾನ ಬೇರೆ ಯಾರಿಗೂ ಮಾಡಿಲ್ಲ''
ಇದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ ಕೇಂದ್ರದಿಂದ ಅಮಿತ್ ಶಾ ಫೋನ್ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಸಹಕಾರ ಸಚಿವ ಕೆಎನ್ ರಾಜಣ್ಣ ನೀಡಿದ ಪ್ರತಿಕ್ರಿಯೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಎನ್ನುವುದು ನಿಂತ ನೀರಲ್ಲ. ಸದಾ ಚಲನ ಶೀಲ, ಯಾವ ಸಮಯದಲ್ಲಿ ಯಾರು ಏನು ಬೇಕಾದರೂ ಆಗಬಹುದು. ಅದರಂತೆ ಶೆಟ್ಟರ್ ಮತ್ತೆ ಬಿಜೆಪಿಗೆ ಮರಳುವ ಸೂಚನೆ ಇಲ್ಲ. ಬಿಜೆಪಿಯವರು ಅವರಿಗೆ ಮಾಡಿರುವಷ್ಟು ಅವಮಾನ ಬೇರೆ ಯಾರಿಗೂ ಮಾಡಿಲ್ಲ ಎಂದರು.
ಯಾವುದೇ ಕಾರಣಕ್ಕೂ ಅವರು ವಾಪಸ್ ಹೋಗುವುದಿಲ್ಲ. ಸಾಧ್ಯವಿಲ್ಲ ಅನ್ನೋದು ನನ್ನ ಧೃಡವಾದ ಮಾತು. ನಾವು 135 ಜನ ಶಾಸಕರಿದ್ದೀವಿ, ಎಲ್ಲರೂ ಕೂಡ ಗಟ್ಟಿಯಾಗಿ ಇದ್ದೀವಿ. ಯಾರೂ ಹೋಗೋದು ಇಲ್ಲಾ, ಇನ್ನೂ ಬರೋರು ಇದ್ದಾರೆ ಅಷ್ಟೆ ಎಂದು ಟಾಂಗ್ ನೀಡಿದರು. ಅಧಿಕಾರದಲ್ಲಿರುವಾಗ ಹೋಗಲು ಶಾಸಕರು ಏನು ದಡ್ಡರಾ! ಕಾಂಗ್ರೆಸ್‌ನಲ್ಲಿ ಎಲ್ಲಾ ಹಿರಿಯರೇ ಇದ್ದಾರೆ. ಮಂತ್ರಿಯಾಗುವ ಅರ್ಹತೆ ಕೂಡ ಇದೆ ಇರುವವರೂ ಇದ್ದಾರೆ. ಸೀನಿಯರ್ ಲೀಡರ್ಸ್ ಯಾವಾ ಗಲೂ ತಪ್ಪು ನಿರ್ಧಾರ ಮಾಡಲ್ಲ. ಕಾಂಗ್ರೆಸ್ ಗಟ್ಟಿ ಬಂಡೆಯಾಗಿದೆ, ಕಾಂಗ್ರೆಸ್‌ನಿಂದ ಹೋಗುವವರು ಯಾರೂ ಇರುವುದಿಲ್ಲ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಪಕ್ಷಕ್ಕೆ ಬೇರೆ ಪಕ್ಷದ ಶಾಸಕರು ಸೇರ್ಪಡೆ ವಿಚಾರವಾಗಿ ಮತನಾಡಿ, ಅದೆಲ್ಲಾ ಕಟ್ಕಂಡು ಏನಪ್ಪಾ, ನಾನೇ ದಳಕ್ಕೆ ಹೋಗ್ತಿದ್ದೀನಿ, ನಾನೇ ದಳಕ್ಕೆ ಹೋಗ್ತಿದ್ದೀನಿ ಅಂತ ಹೇಳಿದ್ದೀನಿ ನಿನ್ಯಾರು ಬರೆಯದೇ ಇಲ್ವಲ್ಲಾ ಎಂದು ಎಂದು ಮಾರ್ಮಿಕವಾಗಿ ನುಡಿದರು.
The way BJP has insulted Jagadish shettar no one has ever insulted slams K.N. Rajanna.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
04-09-25 11:07 pm
Mangalore Correspondent
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm