ಬ್ರೇಕಿಂಗ್ ನ್ಯೂಸ್
02-08-23 11:05 pm HK News Desk ಕರ್ನಾಟಕ
ಕೊಪ್ಪಳ, ಆಗಸ್ಟ್ 2: ದೇವೇಗೌಡರು, ಎಸ್.ಆರ್ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಮಿನಿಸ್ಟರ್ ಆಗಿದ್ದವನು ನಾನು. ಆಗ ಈ ಕುಮಾರಸ್ವಾಮಿ ನನ್ನ ಪಕ್ಕ ನಿಲ್ಲೋದಕ್ಕೂ ಹೆದರುತ್ತಿದ್ದ. ಏನ್ ಮಾಡೋದು ಅವನ ಹಣೆ ಬರಹದಲ್ಲಿ ಬರೆದಿತ್ತು. ಮುಖ್ಯಮಂತ್ರಿ ಆಗಿಬಿಟ್ಟ. ಯಾರೋ ಕಟ್ಟಿದ ಪಕ್ಷದಲ್ಲಿ ಇನ್ಯಾರೋ ಪದವಿ ಪಡೆಯುತ್ತಾರೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅಸಮಾಧಾನ ಹೇಳಿಕೊಂಡಿದ್ದಾರೆ.

ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕರ ಸಭೆಯಲ್ಲಿ ಈ ಮಾತುಗಳನ್ನು ಹೇಳಿದ್ದಾರೆ. ನೀವು ಮಂತ್ರಿ ಆಗೋದು ಯಾವಾಗ ಎಂಬ ಕಾರ್ಯಕರ್ತರ ಪ್ರಶ್ನೆಗೆ ಶಾಸಕರು ಈ ರೀತಿ ಪ್ರತಿಕ್ರಿಯೆ ನೀಡಿದರು. ನೀವು ದುಃಖ ಪಡುವ ಅಗತ್ಯವಿಲ್ಲ. ಒಮ್ಮೊಮ್ಮೆ ಮಂತ್ರಿ ಆಗೋದಕ್ಕೆ ಆಗುವುದಿಲ್ಲ. ಅದಕ್ಕೆ ಹಣೆ ಬರಹವೂ ಬೇಕಾಗತ್ತೆ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದು ಎರಡು ಬಾರಿ ಸಿಎಂ ಆಗಿದ್ದಾರೆ. ಇದನ್ನು ನೋಡಿ ಕಾಂಗ್ರೆಸ್‌ನ ಹಳೆ ಮಂದಿ ಏನಂತಿರಬಹುದು? ಇದೆಲ್ಲಾ ಮನುಷ್ಯನ ಅದೃಷ್ಟ. ಹೇಳಕ್ಕೆ ಆಗೋದಿಲ್ಲ. ಎಲ್.ಕೆ.ಅಡ್ವಾಣಿ ಕಟ್ಟಿದ್ದ ಬಿಜೆಪಿಯಲ್ಲಿ ಮೋದಿ ಪ್ರಧಾನ ಮಂತ್ರಿ ಆಗ್ಬಿಟ್ಟ ಎಂದು ಕಾಂಗ್ರೆಸ್, ಬಿಜೆಪಿ ನಾಯಕರ ಬಗ್ಗೆ ಕಾಲೆಳೆದರು.
ನನ್ನ ಹಿಂದೆ ಓಡಾಡಿದವರೆಲ್ಲಾ ಮಂತ್ರಿ ಆಗಿದ್ದಾರೆ. ಅವರ ಅಪ್ಪಂದಿರ ಜತೆ ನಾನು ಕೆಲಸ ಮಾಡಿದವನು. ಇವರು, ಈಗ ನಮ್ಮ ಮುಂದೆ ಧಿಮಾಕು ಮಾಡ್ಕೊಂಡು ಓಡಾಡುತ್ತಿದ್ದಾರೆ. ದೇವೇಗೌಡರ ಕ್ಯಾಬಿನೆಟ್‌ನಲ್ಲಿ ನಾನು ಮಿನಿಸ್ಟರ್ ಆಗಿದ್ದವನು. ಈ ಕುಮಾರಸ್ವಾಮಿ ನನ್ನ ಪಕ್ಕ ನಿಲ್ಲೋದಕ್ಕೂ ಹೆದರುತ್ತಿದ್ದ. ಏನ್ ಮಾಡೊದು ಅವನ ಹಣೆ ಬರಹದಲ್ಲಿ ಬರೆದಿತ್ತು. ಮುಖ್ಯಮಂತ್ರಿ ಆಗಿಬಿಟ್ಟ ಎಂದು ಹೇಳಿದ್ದಾರೆ.
I was a minister in Deve Gowda's cabinet. This Kumaraswamy was afraid to stand beside me. Senior Congress MLA Basavaraja Rayareddy said that what he did was written on his forehead, he became the Chief Minister.The MLA responded to the activists' question when you will become a minister in a public meeting organized at Talakal village of Yalaburga taluk on Wednesday.
28-08-26 12:41 pm
HK News Staffer
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 01:19 pm
HK News Staffer
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am