ಬ್ರೇಕಿಂಗ್ ನ್ಯೂಸ್
26-06-23 10:29 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 26: ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ರಾಜ್ಯ ಬಿಜೆಪಿ ಒಡೆದ ಮನೆಯಾಗಿದೆ. ಚುನಾವಣೆ ಸೋಲನ್ನು ಅರಗಿಸಿಕೊಳ್ಳಲಾಗದೆ ನಾಯಕರು ಲಂಗು ಲಗಾಮಿಲ್ಲದೆ, ಒಬ್ಬರಿಗೊಬ್ಬರು ದೂಷಣೆ. ಕಚ್ಚಾಟದಲ್ಲಿ ತೊಡಗಿದ್ದಾರೆ. ಇದರಿಂದಾಗಿ ರಾಜ್ಯ ಬಿಜೆಪಿ ಅನ್ನೋದು ಮನೆಯೊಂದು, ಮೂರು ಬಾಗಿಲು ಅನ್ನುವಂತಾಗಿದೆ.
ಅತ್ತ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಮೈಸೂರು ಸಂಸದ ಪ್ರತಾಪಸಿಂಹ, ಪಕ್ಷದ ಮುಂಚೂಣಿ ನಾಯಕರು ಕಾಂಗ್ರೆಸ್ ನಾಯಕರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಪಕ್ಷವನ್ನು ಸೋಲಿಸಿದರು. ರಾಜ್ಯದಲ್ಲಿ ಅಡ್ಜಸ್ಟ್ ಮೆಂಟ್ ರಾಜಕಾರಣ ನಡೀತಿದೆ ಎಂದು ದೂರಿದ್ದರು. ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರನ್ನು ಗುರಿಯಾಗಿಟ್ಟು ಈ ರೀತಿ ಹೇಳಿಕೆ ನೀಡಿದ್ದರು. ಬಿಎಲ್ ಸಂತೋಷ್ ಬಣದಲ್ಲಿ ಗುರುತಿಸಿರುವ ಪ್ರತಾಪಸಿಂಹ, ಈ ರೀತಿ ಬಹಿರಂಗ ಹೇಳಿಕೆ ನೀಡಿದ್ದು, ಉತ್ತರ ಕರ್ನಾಟಕದ ಯಡಿಯೂರಪ್ಪ ಪರ ಇರುವ ನಾಯಕರನ್ನು ಕೆರಳಿಸಿತ್ತು.
ಇತ್ತ ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ವಿಪಕ್ಷ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡೋದರಲ್ಲೂ ಕೇಂದ್ರ ನಾಯಕರು ಸೋತಿದ್ದು ಸೂಕ್ತ ನಾಯಕರ ಆಯ್ಕೆಗಾಗಿ ತಿಣುಕಾಡುತ್ತಿದೆ. ಇದೇ ವೇಳೆ, ದಿನದಿಂದ ದಿನಕ್ಕೆ ಪಕ್ಷದ ನಾಯಕರ ಕಚ್ಚಾಟ ಹೆಚ್ಚುತ್ತಿದ್ದು, ಆಂತರಿಕ ಕಲಹದಿಂದಾಗಿ ಇಡೀ ಬಿಜೆಪಿ ಎನ್ನುವ ಮನೆಯೇ ಒಳಬೇಗುದಿಯಿಂದ ಕುದಿಯತೊಡಗಿದೆ. ಉತ್ತರ ಕರ್ನಾಟಕದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್, ಬೊಮ್ಮಾಯಿ ಮತ್ತು ಮುರುಗೇಶ್ ನಿರಾಣಿಯನ್ನು ಗುರಿಯಾಗಿಸಿ ಗೋಲು ಹೊಡೆಯುತ್ತಲೇ ಇದ್ದಾರೆ. ಬೆಳಗಾವಿ, ಬಾಗಲಕೋಟದಲ್ಲಿ ಬೊಮ್ಮಾಯಿ, ನಿರಾಣಿ ಕೂಡ ಬಹಿರಂಗವಾಗಿಯೇ ಯತ್ನಾಳ್ ಅವರಿಗೆ ಟಾಂಗ್ ಇಟ್ಟಿದ್ದಾರೆ.
ಇವೆಲ್ಲದರ ಮಧ್ಯೆ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ, ಪಕ್ಷದ ಸೋಲಿಗೆ ಬಾಂಬೆ ಬಾಯ್ಸ್ ಕಾರಣ ಎಂದು ಬಾಂಬ್ ಸಿಡಿಸಿದ್ದಾರೆ. ಆಪರೇಶನ್ ಕಮಲದ ಮೂಲಕ ಕಾಂಗ್ರೆಸಿಗರನ್ನು ಪಕ್ಷಕ್ಕೆ ಕರೆಸಿಕೊಂಡಿದ್ದೇ ಬಿಜೆಪಿ ಸೋಲಿಗೆ ಕಾರಣ. ಕಾಂಗ್ರೆಸ್ ನಾಯಕರ ಗಾಳಿಯಿಂದಾಗಿ ಪಕ್ಷದಲ್ಲಿ ಶಿಸ್ತು ಮಾಯವಾಗಿದೆ ಎಂದು ಕಾಂಗ್ರೆಸಿನಿಂದ ಪಕ್ಷಕ್ಕೆ ಬಂದವರ ಹೆಸರೇಳದೆ ಚುಚ್ಚಿದ್ದಾರೆ. ಆಮೂಲಕ ಕಳೆದ ಬಾರಿ ಬಿಜೆಪಿ ಅಧಿಕಾರಕ್ಕೇರಲು ಕಾರಣವಾಗಿದ್ದ 15 ಮಂದಿಯ ಬಗ್ಗೆ ನೇರಾನೇರ ವಾಗ್ದಾಳಿ ನಡೆಸಿದ್ದಾರೆ. ಈಶ್ವರಪ್ಪ ಮಾತು ಪಕ್ಷದಲ್ಲಿ ಬಿರುಗಾಳಿ ಎಬ್ಬಿಸುವ ಸೂಚನೆ ನೀಡಿದ್ದು, ಕಚ್ಚಾಟ ಅತಿರೇಕಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯ ಬಿಜೆಪಿಯಲ್ಲೀಗ ಯಡಿಯೂರಪ್ಪ ಮತ್ತು ಸಂತೋಷ್ ಪರವಾಗಿರುವ ಅನ್ನುವ ಎರಡು ಬಣಗಳಿವೆ. ಇದರ ನಡುವೆ, ಯಾವದಕ್ಕೂ ಇಲ್ಲದ ತಟಸ್ಥರಾಗಿರುವ, ಪಕ್ಷದ ಸೂಚನೆಯನ್ನು ಪಾಲಿಸುವ ನಿಷ್ಠಾವಂತರ ಬಣವೂ ಇದೆ. ಹೀಗಾಗಿ ಒಂದೇ ಮನೆಯಲ್ಲಿ ಮೂರು ಬಾಗಿಲು ಟಿಸಿಲೊಡೆದಿದ್ದು, ನಾಯಕರ ಕಚ್ಚಾಟಕ್ಕೆ ವೇದಿಕೆ ಒದಗಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್, ದೆಹಲಿಯಲ್ಲಿ ಕುಳಿತ ಬಿ.ಎಲ್. ಸಂತೋಷ್ ಬೆರಳಲ್ಲಿ ಅಲ್ಲಾಡುತ್ತಿರುವ ಮನುಷ್ಯ. ಅಧ್ಯಕ್ಷರ ಅಧಿಕಾರಾವಧಿ ಮುಗಿದು ಮತ್ತೊಂದು ವರ್ಷ ಮುಗಿಯುತ್ತ ಬಂದರೂ, ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡರೂ, ರಾಜ್ಯದೆಲ್ಲೆಡೆ ನಾಯಕರು, ಕಾರ್ಯಕರ್ತರು ಕಚ್ಚಾಟದಲ್ಲಿ ತೊಡಗಿದರೂ ಮತ್ತೊಬ್ಬ ರಾಜ್ಯಾಧ್ಯಕ್ಷನನ್ನು ನೇಮಕ ಮಾಡುವಲ್ಲಿ ಕೇಂದ್ರ ನಾಯಕರು ಸೋತಿದ್ದಾರೆ. ಇದರಿಂದಾಗಿ ಅಧಿಕಾರ ಕಳಕೊಂಡ ಒಂದೂವರೆ ತಿಂಗಳಲ್ಲೇ ಬಿಜೆಪಿ ನಾಯಕರಲ್ಲೇ ಕಚ್ಚಾಟ ಉಂಟಾಗಿರುವುದು ನೋಡಿದರೆ, ಇಡೀ ಪಕ್ಷವೇ ಹರಿದು ಹಂಚಿಹೋಗುವ ಹಂತಕ್ಕೆ ಬಂದಿದ್ಯಾ ಅನ್ನುವ ಅನುಮಾನ ಉಂಟಾಗಿದೆ.
One upmanship in Karnataka BJP out in open as Yatnal, Bommai, Murugesh Nirani, Eshwarappa fight over ‘adjustment politics’. When BJP MLA Basanagouda Patil Yatnal asked former chief minister Basavaraj Bommai not to entertain Congress leaders and their ‘cries’ to be rescued, the gloves were officially off and the infighting within the Bharatiya Janata Party (BJP) in Karnataka spilled out into the open.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
09-09-25 10:47 pm
Mangalore Correspondent
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm