ಬ್ರೇಕಿಂಗ್ ನ್ಯೂಸ್
18-06-23 07:56 pm HK News Desk ಕರ್ನಾಟಕ
ಕಲಬುರ್ಗಿ, ಜೂನ್ 18: ಚಿಂಚೋಳಿ ತಾಲೂಕಿನ ಕುಂಚಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪೋಚಾವರಂ ಗ್ರಾಮದಲ್ಲಿ ತಂದೆ ತನ್ನ ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.
ಕುಂಚಾವರಂ ಗ್ರಾಮದ ಹಣಮಂತ ಸಂಜಪ್ಪ (36), ಅಕ್ಷತಾ (6), ಓಂಕಾರ (9) ಮೃತಪಟ್ಟರು.
ಹಣಮಂತ ತೆಲಂಗಾಣ ರಾಜ್ಯದ ಹೈದರಾಬಾದ್ ಗೆ ಕೂಲಿ ಕೆಲಸಕ್ಕೆ ಹೋಗಿದ್ದನು. ಶನಿವಾರ ತನ್ನ ಮಕ್ಕಳನ್ನು ಕರೆದುಕೊಂಡು ಬಂದು ತನ್ನ ಅಣ್ಣ ಗೋಪಾಲ ಇವರಿಗೆ ಪೋನ ಮಾಡಿ ‘ನಾನು ಮತ್ತು ನನ್ನ ಮಕ್ಕಳು ಬಾವಿಗೆ ಬಿದ್ದು ಸಾಯುತ್ತಿದ್ದೇವೆ’ ಎಂದು ಹೇಳಿದ್ದಾನೆ. ಗಾಬರಿಗೊಂಡ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಪೊಲೀಸರು ಎಲ್ಲಾ ಕಡೆ ಹುಡುಕಾಟ ಮಾಡಿದ್ದಾರೆ. ಆದರೆ ಎಲ್ಲಿಯೂ ಪತ್ತೆಯಾಗಲಿಲ್ಲ. ಇಂದು ಭಾನುವಾರ ಪೊಚಾವರಂ ಗ್ರಾಮದ ಬಾವಿಯ ಬಳಿ ಚಪ್ಪಲಿ ಕಂಡು ಬಂದವು. ಬಾವಿಯಲ್ಲಿ ಪಾತಾಳಗರಡಿ ಹಾಕಿ ಹುಡುಕಿದಾಗ ಹಣಮಂತ ಶವ ಪತ್ತೆಯಾಗಿದೆ. ಜೊತೆಗೆ ಬೆನ್ನಿಗೆ ಇಬ್ಬರು ಮಕ್ಕಳ ಶವ ಕಾಣಿಸಿಕೊಂಡಿವೆ.
ಪತ್ನಿ ಮಕ್ಕಳೊಂದಿಗೆ ಹೈದ್ರಾಬಾದನಲ್ಲಿ ವಾಸಿಸುತ್ತಿದ್ದ ಹಣಮಂತ ನಿನ್ನೆ ಮಕ್ಕಳೊಂದಿಗೆ ಹೈದ್ರಾಬಾದನಿಂದ ಸ್ವಗ್ರಾಮಕ್ಕೆ ಬಂದಿದ್ದನು. ಗದೂರದ ಊರಿಗೆ ದುಡಿಯಲು ಹೋಗಿ ವಾಪಸ್ ಬಂದಿದ್ದರೂ ಆತನ ಮುಖದಲ್ಲಿ ಸಂತಸ ಇರಲಿಲ್ಲ. ನಿನ್ನೆಯಿಂದ ಸದಾ ಚಿಂತನೆಯಲ್ಲೇ ಮುಳುಗಿದ್ದ ಹಣಮಂತ ಇಂದು ಮಧ್ಯಾಹ್ನ ವೇಳೆ ಮಕ್ಕಳನ್ನು ತನ್ನೊಂದಿಗೆ ಕರೆದೊಕೊಂಡು ಹೋಗಿ, ಇಬ್ಬರಿಗೂ ಮೊದಲು ಹಗ್ಗ ಕಟ್ಟಿದ್ದಾನೆ. ಈ ವೇಳೆ ಅಪ್ಪ ಏನು ಮಾಡುತ್ತಿದ್ದಾನೆ ನಂತರ, ಇಬ್ಬರಿಗೂ ಕಟ್ಟಿದ್ದ ಹಗ್ಗವನ್ನು ತಾನೂ ಕಟ್ಟಿಕೊಂಡು ಬಾಯಿಗೆ ಜಿಗಿದಿದ್ದಾನೆ.
Chincholi Kalaburagi, Father jumps into well with his two children, commits suicide on fathers day.
14-01-26 03:34 pm
Bangalore Correspondent
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
14-01-26 10:08 pm
HK News Desk
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
14-01-26 03:15 pm
Mangalore Correspondent
ಕುಂದಾಪುರ -ತಲಪಾಡಿ, ಸುರತ್ಕಲ್- ಬಿ.ಸಿ.ರೋಡ್ ಹೆದ್ದಾ...
13-01-26 10:30 pm
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
14-01-26 09:49 pm
Bangalore Correspondent
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm