ಬ್ರೇಕಿಂಗ್ ನ್ಯೂಸ್
28-05-23 06:35 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 28: ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಕ್ಯಾತೆ ಶುರುವಾಗಿದ್ದು ಇದೀಗ ಸಾರಿಗೆ ಖಾತೆ ನೀಡಿದ್ದಕ್ಕೆ ರಾಮಲಿಂಗರೆಡ್ಡಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಇದೀಗ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಏರಿರುವ ಕಾಂಗ್ರೆಸ್ ಎದುರು ಸಾಲು ಸಾಲು ಸಂಕಷ್ಟಗಳು ಇದ್ದು ಅದರಲ್ಲಿ ಖಾತೆ ಹಂಚಿಕೆ ಕೂಡ ಒಂದು. ಪ್ರತಿಯೊಬ್ಬರಿಗೂ ತಮ್ಮಿಷ್ಟದ ಖಾತೆಯೇ ಸಿಗಬೇಕು ಎಂದರೆ ಹೇಗೆ? ಹೀಗಾಗಿ ಸಚಿವರಿಗೆ ಖಾತೆ ಹಂಚಿಕೆ ಮಾಡುವವರಿಗೂ ಸಂಕಷ್ಟ.
ಇದೀಗ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ ರಾಮಲಿಂಗಾ ರೆಡ್ಡಿಗೆ ಸಾರಿಗೆ ಇಲಾಖೆ ಜವಾಬ್ದಾರಿ ವಹಿಸಿದ್ದು ಇದರಿಂದ ಅಸಮಾಧಾನಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದು ಅವರ ನಿವಾಸಕ್ಕೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ನೀಡಿದ್ದಾರೆ.
ಸದಾಶಿವ ನಗರ ನಿವಾಸದಿಂದ ಲಕ್ಕಸಂದ್ರದಲ್ಲಿರುವ ಸಚಿವ ರಾಮಲಿಂಗಾರೆಡ್ಡಿ ನಿವಾಸಕ್ಕೆ ಭೇಟಿಗೆಂದು ತೆರಳಿದ ಡಿಕೆಶಿ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದಕ್ಕೂ ಮೊದಲು ರಾಮಲಿಂಗ ರೆಡ್ಡಿ ನಿವಾಸದಲ್ಲಿ ಡಿಕೆ ಸುರೇಶ್ ಬೆಳಗ್ಗೆ 11 ಗಂಟೆಯಿಂದಲೂ ಮಾತುಕತೆ ನಡೆಸುತ್ತಿದ್ದಾರೆ. ಆದರೆ ಡಿಕೆ ಸುರೇಶ್ ಮನವೊಲಿಕೆಗೂ ಬಗ್ಗದ ಕಾರಣ ಸ್ವತಃ ಡಿಕೆಶಿವಕುಮಾರ್ ಬಂದಿದ್ದು ಖಾತೆಯನ್ನು ಒಪ್ಪಿಕೊಳ್ಳಲು ಮನವಿ ಮಾಡಿದ್ದಾರೆ.
ಆದರೆ ರಾಮಲಿಂಗಾ ರೆಡ್ಡಿ ಮಾತ್ರ “ಸಾರಿಗೆ ಆದರೆ ಬೇಡವೇ ಬೇಡ, ಸಚಿವ ಸ್ಥಾನವೇ ಬೇಡ” ಎಂದು ಡಿಕೆ ಶಿವಕುಮಾರ್ ಎದುರು ಪುನರುಚ್ಚರಿಸಿದ್ದಾರೆ.
ನೂತನ ಸಚಿವ ರಾಮಲಿಂಗಾ ರೆಡ್ಡಿ ಮಾತಿನ ಪ್ರಕಾರ ಸಿಎಂ ಬಿಟ್ಟರೆ ಕ್ಯಾಬಿನೆಟ್ನಲ್ಲಿರುವ ಹಿರಿಯ ತಾನು. ತನಗೆ ಸಾರಿಗೆ ಇಲಾಖೆಯಂತ ಸಣ್ಣ ಖಾತೆಯನ್ನು ನೀಡುವುದು ಬೇಡ. ಕೃಷ್ಣಭೈರೇಗೌಡಗೆ ಕಂದಾಯ ಕೊಟ್ಟಿದ್ದೀರಿ. ಅಂತಹ ಪ್ರಮುಖ ಖಾತೆಯನ್ನೇ ತನಗೆ ನೀಡಬಹುದಿತ್ತು. ಸಾರಿಗೆ ಇಲಾಖೆಯನ್ನು ತಾನು ಹಿಂದೆ ನಾಲ್ಕೂವರೆ ವರ್ಷ ನಿಭಾಯಿಸಿದ್ದೇನೆ. ತನಗಿಂತ ಕಿರಿಯರಿಗೆಲ್ಲ ಪ್ರಮುಖ ಖಾತೆಗಳನ್ನು ನೀಡಿದ್ದು ತನಗೆ ಮಾಡಿರೋ ಅವಮಾನ. ಅವಮಾನ ಮಾಡಿಕೊಂಡು ಖಾತೆ ನಿಭಾಯಿಸುವುದಕ್ಕಿಂತ ಸಚಿವ ಸ್ಥಾನವೇ ಬೇಡ. ಇದೇ ವಾದವನ್ನು ರಾಮಲಿಂಗಾ ರೆಡ್ಡಿ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಎದುರು ಮುಂದಿಟ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Ramalinga Reddy to resign from cabinet post of Congres, says disappointed to be minister for transport, DK Shivakumar convinces reddy. Says i am a Senior political after Cm Siddaramaiah i should have got prominent post in the cabinet as minister. MLAs younger than me have got efficient post he added.
28-08-26 12:41 pm
HK News Staffer
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 02:11 pm
HK News Staffer
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
28-08-26 06:22 pm
HK News Staffer
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm