ಬ್ರೇಕಿಂಗ್ ನ್ಯೂಸ್
10-04-23 12:47 pm HK News Desk ಕರ್ನಾಟಕ
ವಿಜಯನಗರ, ಎ.10: ಮನುಷ್ಯ ಸತ್ತಾಗ ಸಂಬಂಧಿಕರು, ಸ್ನೇಹಿತರು ಅಂತಿಮ ಗೌರವ ಸಲ್ಲಿಸುವುದು ನಡೆದುಕೊಂಡು ಬಂದ ವಾಡಿಕೆ. ಆದರೆ ಇಲ್ಲೊಂದು ಮಂಗ ತನಗೆ ಅನ್ನ ಹಾಕುತ್ತಿದ್ದ ವ್ಯಕ್ತಿ ಸತ್ತಾಗ ಅಂತಿಮ ದರ್ಶನಕ್ಕೆ ಬಂದಿದ್ದಲ್ಲದೆ, ಆತನ ತಲೆಗೆ ಮುತ್ತುಕೊಟ್ಟು ವಿದಾಯ ಹೇಳಿದ್ದು ನೋಡಿದವರನ್ನು ಬೆರಗಾಗಿಸಿದೆ.
ವಿಜಯನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಹೊಟೆಲ್ ಉದ್ಯಮಿ ಶವಕ್ಕೆ ಮಂಗ ಮುತ್ತು ಕೊಟ್ಟು ನಮನ ಸಲ್ಲಿಸಿ ತನಗೆ ಅನ್ನ ಕೊಟ್ಟವರ ಋಣ ತೀರಿಸಿದೆ. ಹಗರಿಬೊಮ್ಮನಹಳ್ಳಿ ಪಟ್ಟಣದ ಹೊಟೇಲ್ ಉದ್ಯಮಿ ಪರಶುರಾಮ ಪೋಮುಸಾ ಹಬೀಬ್ ಸಾವಜಿ ಎಂಬ ವೃದ್ಧ ವ್ಯಕ್ತಿ ಏಪ್ರಿಲ್ 3 ರಂದು ಇಹಲೋಕ ತ್ಯಜಿಸಿದ್ದರು. ಸಾವಜಿ ಸಣ್ಣಂದಿನಿಂದಲೂ ಪ್ರಾಣಿ - ಪಕ್ಷಿ ಪ್ರಿಯರಾಗಿದ್ದರು. ತಮ್ಮ ಜೀವನದುದ್ದಕ್ಕೂ ಪ್ರಾಣಿ ಪಕ್ಷಿಗಳಿಗೆ ಕೈಲಾದ ನೆರವು ನೀಡುತ್ತಿದ್ದರು. ಅದರಲ್ಲೂ ಈ ಕೋತಿಗೆ ನಿತ್ಯವೂ ಹೊಟೇಲಿನಿಂದ ಹಣ್ಣು, ರೊಟ್ಟಿ ನೀಡಿ ಆರೈಕೆ ಮಾಡುತ್ತಿದ್ದರು. ಮನೆಯ ಬಳಿ ಬರುತ್ತಿದ್ದ ಕೋತಿ ಕಿಟಕಿ ಬಳಿ ಬಂದು ಈ ಅಜ್ಜನನ್ನು ನೋಡುತ್ತಿತ್ತು. ಇದನ್ನು ಗಮನಿಸಿದ ಅಜ್ಜ ಮನೆಯವರಿಗೆ ಹೇಳಿ ಅದಕ್ಕೆ ಆಹಾರ ಕೊಡಿಸುತ್ತಿದ್ದರು.
ಅಜ್ಜನ ಸೂಚನೆಯಂತೆ ಮನೆಯವರು ಕೋತಿಗೆ ನಿತ್ಯವೂ ಆಹಾರ ನೀಡುತ್ತಿದ್ದರು. ಅದನ್ನು ತಿಂದ ಕೋತಿ ಸಂತೃಪ್ತಿಯಿಂದ ಮರಳುತ್ತಿತ್ತು. ಆದರೆ ಇಂದು ಅಜ್ಜ ಇಹಲೋಕ ತ್ಯಜಿಸಿದ್ದನ್ನು ತಿಳಿದ ಮಂಗ ತನ್ನ ಆಪತ್ಬಾಂಧವ ಆಗಲಿದ್ದಾನೆಂದು ಮರುಗಿದೆ. ಅಲ್ಲದೆ, ನಿತ್ಯ ತನಗೆ ಆಹಾರ ಹಾಕುತ್ತಿದ್ದ ಅಜ್ಜನ ಹಣೆಗೆ ಮುತ್ತು ಕೊಟ್ಟು ವಿದಾಯ ಹೇಳಿದ್ದು ಮಂಗನಿಗೂ ದುಃಖ, ಸಂತಸದ ಭಾವನೆ ಇದೆಯೆಂಬುದನ್ನು ಸಾರಿದೆ.
ಗೌರವ ಸಲ್ಲಿಸಿದ ಬಳಿಕ ಬಂದಷ್ಟೇ ವೇಗವಾಗಿ ಮಂಗ ಅಲ್ಲಿಂದ ತೆರಳಿದ್ದೂ ಆಗಿದೆ. ಈ ಮೂಲಕ ಅನ್ನ ಕೊಟ್ಟವರನ್ನು ಮುಪ್ಪಿನ ವರೆಗೂ ನೆನೆಯಬೇಕು ಎಂಬ ಸಂದೇಶವನ್ನು ಕೋತಿ ಸಾರಿದೆ. ಇದರ ವಿಡಿಯೋ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು ಜನರ ಗಮನ ಸೆಳೆದಿದೆ.
Monkey kisses forehead of dead man during the last rites who feed it with rice, shocks people in Vijayanagara.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm