ಬ್ರೇಕಿಂಗ್ ನ್ಯೂಸ್
25-03-23 07:40 pm HK News Desk ಕರ್ನಾಟಕ
ದಾವಣಗೆರೆ, ಮಾ.25: ಬೆಣ್ಣೆನಗರಿ ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಸಮಾರೋಪ ಸಮಾರಂಭ ನಡೆಯುತ್ತಿದೆ. ಹೀಗಾಗಿ, ಪ್ರಧಾನಿ ಮೋದಿಯವರು ಬೆಣ್ಣೆನಗರಿ ದಾವಣಗೆರೆಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಸಮಾವೇಶದ ಬಳಿ ಮೋದಿ ಅವರು ತೆರೆದ ವಾಹನದಲ್ಲಿ ವೇದಿಕೆಗೆ ಆಗಮಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ಕಾರ್ಯಕರ್ತರು ಹಾಗೂ ಜನರು ಹತ್ತಿರದಿಂದಲೇ ಕಣ್ತುಂಬಿ ಕೊಂಡರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪೆಂಡಾಲ್ ಒಳಗೆ ಜನರ ಮಧ್ಯದಲ್ಲಿ ರೋಡ್ ಶೋ ನಡೆಸಿದ್ದು ವಿಶೇಷವಾಗಿತ್ತು. ಜನರತ್ತ ಕೈ ಬೀಸಿದಾಗ ನೆರೆದಿದ್ದ ಅಪಾರ ಜನಸ್ತೋಮ ಮೋದಿ ಮೋದಿ ಎಂದು ಕೆಂಪು ಶಾಲು ತಿರುಗಿಸುತ್ತಾ ಘೋಷಣೆ ಕೂಗಿದರು, ಶಿಳ್ಳು,ಕೇಕೆ ಮುಗಿಲು ಮುಟ್ಟಿತ್ತು. ಹಿನ್ನೆಲೆಯಲ್ಲಿ ಡಿಜೆಯಲ್ಲಿ ಕೇಳಿ ಬರುತ್ತಿದ್ದ ಬಿಜೆಪಿ ಹಾಡು ಜನರನ್ನು ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡಿತು.
ನಗರದ ಮಧ್ಯದಲ್ಲಿ ಹಾದು ಹೋಗುವ ಪೂನಾ-ಬೆಂಗಳೂರು ರಸ್ತೆಯ ನಗರದ ಅಂಚಿನ ಜಿಎಂಐಟಿ ಕಾಲೇಜು ಹಿಂಭಾಗದಲ್ಲಿ 400 ಎಕರೆಯಲ್ಲಿ ಸಮಾವೇಶ ನಡೆಯುತ್ತಿದೆ. ರಾಜ್ಯದ ನಾಲ್ಕು ದಿಕ್ಕುಗಳಿಂದ ಲಕ್ಷಾಂತರ ಮಂದಿ ಭಾಗಿಯಾಗಿದ್ದರು. ದಾವಣಗೆರೆಯ ಪ್ರಮುಖ ರಸ್ತೆ, ವೃತ್ತಗಳಲ್ಲಿ ಮೋದಿ ಅವರ ಫ್ಲೆಕ್ಸ್, ಬಿಜೆಪಿ ಬಾವುಟ, ಬಂಟಿಂಗ್ಸ್ ಕಟ್ಟಿ ಇಡೀ ಊರನ್ನೇ ಕೇಸರಿಮಯವಾಗಿಸಲಾಗಿತ್ತು.
ಮೊದಲ ಬಾರಿ ಶಾಮಿಯಾನದಲ್ಲಿ ರೋಡ್ ಶೋ ;
ದಾವಣಗೆರೆ ರ‍್ಯಾಲಿಗಳ ಊರು, ಅದೃಷ್ಟದ ಜತೆ ಬಿಜೆಪಿಯ ನೆಲೆಗೆ ಹೆಸರಾದ ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಶನಿವಾರ ರ‍್ಯಾಲಿ ನಡೆಸಿದರು. ಮೊಟ್ಟ ಮೊದಲ ಬಾರಿಗೆ ಮೋದಿ ಅವರು ಶಾಮಿಯಾನದಲ್ಲೇ ರೋಡ್ ಶೋ ನಡೆಸಿದರು. ಭಾಗವಹಿಸುವ ಜನರು ಅತ್ಯಂತ ಸಮೀಪದಿಂದಲೇ ಮೋದಿ ಅವರನ್ನು ನೋಡಿ ಸಂತಸಪಟ್ಟರು.
ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಣೆಯಾದ ನಂತರ ನರೇಂದ್ರ ಮೋದಿ ಅವರು 2014 ರ ಲೋಕಸಭೆ ಚುನಾವಣೆಗೂ ಮುನ್ನ ದಾವಣಗೆರೆಯಲ್ಲಿಯೇ ಚುನಾವಣೆ ರ‍್ಯಾಲಿ ಆರಂಭಿಸಿದ್ದರು. ಆ ನಂತರ 2019 ರ ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಇಲ್ಲಿ ಆಯೋಜಿಸಿದ್ದ ರೈತ ಸಮಾವೇಶವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದರು.
ಬಿಎಸ್ ಯಡಿಯೂರಪ್ಪ ಮಾತನಾಡಿ, ಒಂದು ಕ್ಷೇತ್ರವನ್ನು ಹುಡುಕಿಕೊಳ್ಳಲು ಕಷ್ಟಪಡುತ್ತಿರುವ ವಿರೋಧ ಪಕ್ಷದ ನಾಯಕರು ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದಾರೆ. ಮುಂದಿನ ಎರಡು ತಿಂಗಳು ಬಿಜೆಪಿ ಗೆಲುವಿಗಾಗಿ ಕಾರ್ಯಕರ್ತರು ಶ್ರಮಿಸಿ ಎಂದು ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಇಡೀ ವಿಶ್ವವೇ ಮೋದಿ ಅವರನ್ನು ಹೊಗಳುತ್ತಿದೆ. ಆದರೆ, ವಿರೋಧ ಪಕ್ಷದ ರಾಹುಲ್ ಗಾಂಧಿ ಅವರು ವಿದೇಶದಲ್ಲಿ ಮೋದಿ ಅವರ ವಿರುದ್ಧ ಮಾತನಾಡಿ ಅಪಮಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಇಂತಹ ವಿರೋಧ ಪಕ್ಷಕ್ಕೆ ಮುಂದೆ ಅಧಿಕಾರಕ್ಕೆ ಬರಲು ಬಿಡಬಾರದು ಎಂದರು.
ಸಿದ್ದರಾಮಯ್ಯ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ;
ಸಭೆ ನಡೆಯುತ್ತಿರುವ ಕ್ಷೇತ್ರದ ಪಕ್ಕದಲ್ಲೇ ತುಂಗಾಭದ್ರ ನದಿ ಹರಿಯುತ್ತಿದೆ. ದಾವಣಗೆರೆಯಲ್ಲಿ ನಾಲ್ಕು ಸಮಾವೇಶವನ್ನು ಸಂಗಮವನ್ನು ದರ್ಶನ ಮಾಡುವ ಪುಣ್ಯ ಸಿಕ್ಕಿದೆ. ಮುಂದಿನ ಮೂರು ತಿಂಗಳು ಪ್ರತಿಯೊಂದು ಬೂತ್ನಲ್ಲೂ ಇದೇ ಹುಮ್ಮಸಿನಲ್ಲಿ ಪಕ್ಷದ ಪರ ಪ್ರಚಾರ ಮಾಡಿ ಎಂದರು. ನಾನು ಕರ್ನಾಟಕ ವಿಡಿಯೋ ಒಂದನ್ನು ನೋಡಿದೆ ಕಾಂಗ್ರೆಸ್ ಮಾಜಿ ಸಿಎಂ ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ಈ ರೀತಿ ಆದರೆ ಸಾಮಾನ್ಯರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು. ಆದರೆ ನಮ್ಮಲ್ಲಿ ಎಲ್ಲಾ ನಾಯಕರು, ಕಾರ್ಯಕರ್ತರು ಸಮಾನ. ಪಕ್ಷದ ಕಾರ್ಯಕರ್ತರು ಸಹೋದರರು ಇದ್ದಂತೆ ಎಂದು ಹೇಳಿದರು.
ಬೆಂಗಳೂರಿಗೆ ಮೆಟ್ರೋ, ತುಮಕೂರಿನಲ್ಲಿ ಹೆಲಿಕಾಪ್ಟರ್ ಕಂಪನಿ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ, ಮೈಸೂರಿಗೆ ದಶಪಥ ರಸ್ತೆ ಸಿಕ್ಕಿದೆ. ಹುಬ್ಬಳ್ಳಿಯಲ್ಲಿ ಅತಿ ದೊಡ್ಡ ರೈಲ್ವೆ ಪ್ಲಾಟ್ ಪಾರ್ಮ್ ಸಿಕ್ಕಿದೆ. ಜಲ ಜೀವನ ಮಿಶನ್ ಯೋಜನೆ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್-ಜೆಡಿಎಸ್ ವಿರುದ್ಧವೂ ಮೋದಿ ವಾಗ್ದಾಳಿ ;
ಕರ್ನಾಟಕದಲ್ಲಿ ಸ್ವಾರ್ಥ, ಅವಕಾಶವಾದಿ ಮೈತ್ರಿ ಸರ್ಕಾರವನ್ನು ನೋಡಿದ್ದೀರಿ. ಇಂತಹ ಸರ್ಕಾರದಿಂದ ಕರ್ನಾಟಕ್ಕೆ ನಷ್ಟ ಆಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಎಂಟಿಎಂ ಆಗಲಿದೆ. ಆದ್ದರಿಂದ ರಾಜ್ಯ ಬಿಜೆಪಿಯ ಸಂಪೂರ್ಣ ಬಹುಮತದ ಸರ್ಕಾರದ ಅಗತ್ಯವಿದೆ. ಕರ್ನಾಟದ ಸ್ಥಿರ ಅಭಿವೃದ್ಧಿಗೆ ಬಹುಮತದ ಸರ್ಕಾರ ಅಗತ್ಯವಿದೆ, ಆ ಮೂಲಕ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದರು. ಕರ್ನಾಟಕದ ಜನರಿಗೆ ಸೇವೆ ಮಾಡಲು ನೀವು ನಮಗೆ ಕರ್ನಾಟಕದಲ್ಲಿ ಬಹುಮತದ ಬಿಜೆಪಿ ಸರ್ಕಾರವನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
Davanagere, Karnataka awaits the thrilling welcome for PM Modi! pic.twitter.com/ONfTtK8Aqd
— Bhagwanth Khuba (@bhagwantkhuba) March 25, 2023
Prime Minister Narendra Modi on Saturday addressed a public rally in Karnataka’s Davanagere as part of his visit to the poll-bound state today. “Karnataka has decided to bring back the double engine government in the state,” PM Modi said while addressing the public rally titled ‘Vijaya Sankalp Yatre Maha Sangama’ in Davanagere.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm