ಬ್ರೇಕಿಂಗ್ ನ್ಯೂಸ್
17-03-23 01:50 pm HK News Desk ಕರ್ನಾಟಕ
ಮೈಸೂರು, ಮಾ.17 : ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ದುಬಾರಿ ಟೋಲ್ ಸಂಗ್ರಹ ವಿರೋಧಿಸಿ ಬಿಜೆಪಿ ಸರ್ಕಾರದ ವಿರುದ್ಧ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬೀದಿಗಿಳಿದಿದ್ದು ರೈತರ ಜೊತೆಗೆ ಹೋರಾಟಕ್ಕೆ ಧುಮುಕಿದ್ದಾರೆ.
ಮೈಸೂರಿನ ಕೆಂಪೇಗೌಡ ವೃತ್ತದಲ್ಲಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದು ನೂರಾರು ಜನ ಪಾಲ್ಗೊಂಡಿದ್ದಾರೆ. ದುಬಾರಿ ಟೋಲ್ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಎಂಎಲ್ಸಿ ವಿಶ್ವನಾಥ್ ಸಾಥ್ ನೀಡಿದ್ದಾರೆ. ಹೆದ್ದಾರಿ ಪಕ್ಕ ಕುಳಿತು ಶಾಂತಿಯುತ ಪ್ರತಿಭಟನೆಗೆ ಕೈಜೋಡಿಸಿದ್ದಾರೆ. ಕೈಗೆ ಕಪ್ಪು ಪಟ್ಟಿ ಧರಿಸಿ, ಘೋಷಣಾ ಫಲಕಗಳನ್ನು ಹಿಡಿದು ಅವರ ಜೊತೆಗೆ ಬೆಂಬಲಿಗರು ಕುಳಿತುಕೊಂಡಿದ್ದಾರೆ.

ದಶಪಥ ಎಕ್ಸ್ಪ್ರೆಸ್ ಹೈವೇ ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹ ಮಾಡಬಾರದು ಎಂದು ರೈತರು, ಸ್ಥಳೀಯರು ಆಕ್ಷೇಪ ತೆಗೆದಿದ್ದಾರೆ. ಕಾಂಗ್ರೆಸ್, ಎಪಿಪಿ, ಜೆಡಿಎಸ್, ಕನ್ನಡ ಪರ ಹೋರಾಟಗಾರರು, ರೈತ ಸಂಘದ ಮುಖಂಡರು ಭಾಗಿಯಾಗಿದ್ದಾರೆ.
ಯಾರೂ ಕೈಯಿಂದ ಹಣ ಹಾಕಿಲ್ಲ, ಜನರ ದುಡ್ಡಲ್ಲಿ ರಸ್ತೆ ಮಾಡಿದ್ದಾರೆ
ಮೈಸೂರು - ಬೆಂಗಳೂರು ದಶಪಥ ಹೆದ್ದಾರಿಯ ಟೋಲ್ ಸಂಗ್ರಹ ವಿರೋಧಿಸಿ ಮೈಸೂರಿನ ಮಣಿಪಾಲ್ ಆಸ್ಪತ್ರೆಯ ರಿಂಗ್ ರಸ್ತೆಯಲ್ಲೂ ಪ್ರತಿಭಟನೆ ನಡೆದಿದೆ. ದಶಪಥ ರಸ್ತೆ ಇನ್ನೂ ಸರಿಯಾಗಿ ಆಗಿಲ್ಲ. ಪರಿಪೂರ್ಣವಾಗಿ ರಸ್ತೆ ಸಂಚಾರಕ್ಕೆ ಯೋಗ್ಯವಾದ ನಂತರ ಟೋಲ್ ಸಂಗ್ರಹಿಸಬೇಕು. ಯಾವ ವ್ಯಕ್ತಿಯೂ ಸಹ ತಮ್ಮ ಕೈನಿಂದ ಏನು ದುಡ್ಡು ತಂದು ಹಾಕಿಲ್ಲ. ಇದು ಸಾರ್ವಜನಿಕರ ಮತ್ತು ಮತದಾರರ ಹಕ್ಕು ಮತ್ತು ಅವರ ಹಣ. ಎಷ್ಟೋ ಜನರ ಜಮೀನನ್ನ ಖರೀದಿಸಿ ಈ ದಶಪಥ ರಸ್ತೆಯನ್ನು ಮಾಡಿದ್ದಾರೆ. ಇದರಿಂದ ರೈತ ತನ್ನ ಸಂಪಾದನೆಯನ್ನು ಕಳೆದುಕೊಂಡಿದ್ದಾನೆ, ಅನ್ನ ಕಳೆದುಕೊಂಡಿದ್ದಾನೆ. ಈ ನಿಟ್ಟಿನಲ್ಲಿ ಜನರ ಪರವಾಗಿ ನಾವು ಮಾತನಾಡಬೇಕೆ ಹೊರತು ವಸೂಲಿ ಮಾಡುವುದು ತಪ್ಪು ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ಹೇಳಿಕೆ ನೀಡಿದ್ದಾರೆ.
Bjp MLC H.D. Deve Gowda has lashed out at the BJP government over the high toll collection on the Bengaluru-Mysuru Highway. Vishwanath has taken to the streets and joined the farmers in their struggle. Hundreds of people participated in a peaceful protest at Kempegowda Circle in Mysuru. MLC Vishwanath has joined the farmers' protest against the high toll. They sat on the side of the highway and joined the peaceful protest.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
13-11-25 01:44 pm
HK Staffer
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm