ಬ್ರೇಕಿಂಗ್ ನ್ಯೂಸ್
11-02-23 07:45 pm HK News Desk ಕರ್ನಾಟಕ
ತುಮಕೂರು, ಫೆ.11: ಜಿಲ್ಲೆಯ ಚಿಕ್ಕನಾಯಕನಳ್ಳಿ ತಾಲೂಕಿನ ಹುಳಿಯಾರ್ ಗೇಟ್ ಬಳಿ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನವದಂಪತಿ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ.
12 ಗಂಟೆ ಸುಮಾರಿಗೆ ನಡೆದಿರುವ ಅಪಘಾತದಲ್ಲಿ ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವ ಜೋಡಿಯಾದ ರಘು(35), ಅನುಷಾ (28) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರೂ ಟೆಕ್ಕಿಗಳಾಗಿದ್ದರು.
ಅನುಷಾ ಮತ್ತು ರಘು ಅವರು ಚಿಕ್ಕನಾಯಕನಹಳ್ಳಿ ತಾಲೂಕಿನ ತಿಗಳನಹಳ್ಳಿಯಿಂದ ಬಳ್ಳಾರಿ ಕಡೆಗೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಹ್ಯೂಂಡೈ ಕ್ರೆಟಾ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹುಳಿಯಾರ್ ಗೇಟ್ ಬಳಿ ಲಾರಿಯೊಂದು ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಘು ಎದುರಿನ ಸೀಟಿನಲ್ಲಿದ್ದರೆ ಅನುಷಾ ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ಇಬ್ಬರೂ ಸ್ಥಳದಲ್ಲೇ ಅಸು ನೀಗಿದ್ದಾರೆ. ಅಪಘಾತದಲ್ಲಿ ಭಾಗಿಯಾದ ಲಾರಿ ರಸ್ತೆ ಬಿಟ್ಟು ಹೊರಗೆ ಹೋಗಿ ಮರಕ್ಕೆ ಡಿಕ್ಕಿಯಾಗಿ ನಿಂತಿದೆ.
ಇಬ್ಬರೂ ಟೆಕ್ಕಿಗಳಾಗಿದ್ದರು;
ಹಾಸನ ಜಿಲ್ಲೆ ಅರಸಿಕೆರೆ ಮೂಲದ ರಘು ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನ ತಿಗಳನಹಳ್ಳಿ ಮೂಲದ ಅನುಷಾ ಅವರಿಗೆ ಒಂದೂವರೆ ತಿಂಗಳ ಹಿಂದಷ್ಟೆ ಮದುವೆಯಾಗಿತ್ತು.
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿದ್ದ ಅವರು ಸಂಬಂಧಿಕರ ಮದುವೆಗೆಂದು ಕಾರಿನಲ್ಲಿ ತೆರಳುತ್ತಿದ್ದರು. ದಂಪತಿ.
Tumkur accident, newly married couple die on spot after truck rams car. The deceased have been identified as Raghu and Anusha. Both were techies working in Bangalore. They were on their way to attend a wedding function during which the ghastly accident took place.
22-06-26 08:18 pm
HK News Staffer
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
Cross Voting Row, Vijayendra: ಅಡ್ಡ ಮತದಾನ ; ಧರ...
21-06-26 02:18 pm
ಧರ್ಮಸ್ಥಳ ಮೇಲಾಣೆ ಅಡ್ಡ ಮತದಾನ ಮಾಡಿಲ್ಲ, ಮೋದಿ ಬಂದಿ...
20-06-26 06:40 pm
23-06-26 12:21 pm
HK News Staffer
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
23-06-26 11:49 am
HK News Staffer
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
Yekkur, Mangalore Accident:ಎಕ್ಕೂರು ಹೆದ್ದಾರಿಯಲ...
21-06-26 01:13 pm
ಮೈಸೂರು ದಸರಾಗೆ ಕಂಬಳ ; ತಯಾರಿ ನಡೆಸಲು ಶಾಸಕ ಅಶೋಕ್...
20-06-26 10:25 pm
23-06-26 12:57 pm
HK News Staffer
ಅಕ್ರಮ ಪೊಲೀಸ್ ಕ್ಲಿಯರೆನ್ಸ್ ; ಮೂರೇ ದಿನದಲ್ಲಿ ಸಿಸಿ...
22-06-26 10:21 pm
ಉಡುಪಿಯಲ್ಲಿ ಮಕ್ಕಳಿಲ್ಲದ ದಂಪತಿಗೆ ಮಗು ಮಾರಾಟ; ವೈದ್...
22-06-26 08:01 pm
ಹಂದಿ ಜ್ವರಕ್ಕೆ ಕಾರವಾರದ ವ್ಯಕ್ತಿ ಮಂಗಳೂರಿನಲ್ಲಿ ಬಲ...
22-06-26 07:58 pm
Brahmarakootlu toll fight: ಟೋಲ್ ತಪ್ಪಿಸಲು ಬ್ರಹ...
22-06-26 12:53 pm