ಬ್ರೇಕಿಂಗ್ ನ್ಯೂಸ್
08-10-20 04:02 pm Mysore Correspondent ಕರ್ನಾಟಕ
ಮೈಸೂರು, ಅಕ್ಟೋಬರ್ 08: 1960ರ ವೇಳೆಗೆ ಆಹಾರಕ್ಕಾಗಿ ನಮ್ಮ ದೇಶ ಇತರರ ಬಳಿ ಭಿಕ್ಷೆ ಬೇಡುವ ಸ್ಥಿತಿ ಇತ್ತು. ಈಗ ಇಡೀ ಜಗತ್ತಿಗೆ ಆಹಾರ ಪೂರೈಸುವ ಶಕ್ತಿ ಹೊಂದಿದ್ದೇವೆ. ಆದರೆ, ಕಾಂಗ್ರೆಸ್‌ನವರು ಮಾತ್ರ ರೈತರ ಹಾದಿ ತಪ್ಪಿಸಿ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
‘ಇದೇ ವಿಚಾರವನ್ನು ಹಿಂದೆ ಕಾಂಗ್ರೆಸ್ ತಮ್ಮ ಪ್ರಣಾಳಿಕೆಯಲ್ಲಿ ಅಳವಡಿಸಿತ್ತು. ಈಗ ಮಾತ್ರ ಟೀಕಿಸುತ್ತಿದ್ದಾರೆ. ಕಾಂಗ್ರೆಸ್ ದ್ವಂದ್ವದ ಬಗ್ಗೆ ಮತ್ತು ಮಸೂದೆಯ ಲಾಭದ ಬಗ್ಗೆ ಪ್ರತಿ ರೈತನ ಮನೆಗೆ ತೆರಳಿ ಹೇಳುತ್ತೇವೆ. ಕೃಷಿ ಮಸೂದೆಗಳ ಉದ್ದೇಶ ತಿಳಿಸಿಕೊಡಲಿದ್ದೇವೆ. ರೈತ ಮುಖಂಡರು ಚರ್ಚೆಗೆ ಬಂದರೂ ಸಿದ್ಧ ಎಂದು ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿದ್ದ ವೇಳೆ 49 ಕಾರ್ಪೊರೇಟ್ ಕಂಪನಿಗಳಿಗೆ ಪರವಾನಗಿ ಕೊಟ್ಟಿದ್ದರು. ವಿವಿಧ ಸ್ವರೂಪದಲ್ಲಿ ಲಾಭ ಮಾಡಿಕೊಟ್ಟಿದ್ದರು. ಈಗ ನಮ್ಮ ನಿಲುವನ್ನು ಪ್ರಶ್ನಿಸುತ್ತಿದ್ದಾರೆ. ಕೊಳಕಿನಲ್ಲಿ ಮಲಗಿದ ಕೋಣನಿಗೆ ಒಂದು ಏಟು ಬಿದ್ದರೆ ಎಲ್ಲೋ ಪೆಟ್ಟು ಬಿದ್ದ ರೀತಿ ಕೇಳುತ್ತದೆ. ಎರಡು ಮತ್ತು ಮೂರನೇ ಏಟು ಬಿದ್ದಾಗ ಚೂರು ಎಚ್ಚರ ಆಗುತ್ತದೆ. ನಾಲ್ಕನೇ ಏಟು ಬಿದ್ದಾಗ ತನಗೇ ಪೆಟ್ಟು ಬಿದ್ದಿರುವುದೆಂದು ಅರಿವಿಗೆ ಬರುತ್ತದೆ. ಕಾಂಗ್ರೆಸ್‌ನವರಿಗೆ ಈಗ ನಾಲ್ಕನೇ ಏಟು ಬಿದ್ದಿದೆ. ಈಗಷ್ಟೇ ಎಚ್ಚೆತ್ತುಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಹಿಂದೆ ನಮಗೆ ಬೇಕಾದಷ್ಟು ಆಹಾರ ದೇಶದಲ್ಲಿ ಸಿಗುತ್ತಿರಲಿಲ್ಲ. ಇಷ್ಟಾದರೂ ಕಾಂಗ್ರೆಸ್‌ನವರು ಪರ್ಯಾಯ ಹುಡುಕಲಿಲ್ಲ. ಕಾನೂನಿನ ಅಂಶಕ್ಕೆ ತಿದ್ದುಪಡಿಯನ್ನೂ ತಂದಿರಲಿಲ್ಲ. 1990ರ ಉದಾರೀಕರಣ ಜಾರಿಗೆ ತಂದಾಗಲೂ ರೈತರಿಗೆ ನೆರವು ಸಿಗಲಿಲ್ಲ. ಈಗ ಕೃಷಿ ಮಸೂದೆಗಳನ್ನು ಪರಿವರ್ತಿಸಿ, ರೈತರಿಗೆ ಸ್ವಾಭಿಮಾನ ನೀಡುವ ಮಸೂದೆ ತಂದಿದ್ದೇವೆ ಎಂದು ಕೃಷಿ ಮಸೂದೆಗಳ ಪರವಾಗಿ ಬ್ಯಾಟಿಂಗ್ ಮಾಡಿದರು.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm