ಬ್ರೇಕಿಂಗ್ ನ್ಯೂಸ್
05-09-22 03:58 pm HK News Desk ಕರ್ನಾಟಕ
ಚಿಕ್ಕಮಗಳೂರು, ಸೆ.5 : ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು, ಹಾಸನ, ಚಾಮರಾಜನಗರ ಜಿಲ್ಲೆಗಳ ಆಸುಪಾಸಿನಲ್ಲಿ ಭಾರೀ ಮಳೆ ಸುರಿದಿದೆ. ಆಗಿಂದಾಗ್ಗೆ ದಿಢೀರ್ ಮಳೆಯಾಗಿದ್ದರಿಂದ ಕೆರೆ, ಕಟ್ಟೆ, ಹೊಳೆಗಳು ತುಂಬಿ ಹರಿದಿವೆ. ಯಾವತ್ತೂ ತುಂಬಿರದ ಕಾಲುವೆಗಳು ನೀರು ತುಂಬಿ ಕೋಡಿ ಹರಿದಿದೆ. ತುಮಕೂರಿನಲ್ಲಿ ಎತ್ತಿನಹೊಳೆ ಯೋಜನೆಗೆಂದು ನಿರ್ಮಿಸಿದ್ದ ಕಾಲುವೆ ಒಡೆದು ನೀರು ಹೊಲಕ್ಕೆ ನುಗ್ಗಿದೆ.
ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದಲ್ಲೇ ದಾಖಲೆಯ ಮಳೆಯಾಗಿದ್ದು ಜನರು ಬೆಚ್ಚಿ ಬಿದ್ದಿದ್ದಾರೆ. ಸೋಮವಾರ ಬೆಳಗ್ಗೆ ಕೇವಲ ಒಂದು ಗಂಟೆಯಲ್ಲಿ 200 ಮಿಲಿ ಮೀಟರ್ ಮಳೆಯಾಗಿದ್ದು ರಕ್ಕಸ ಮಳೆಗೆ ಕಾಫಿನಾಡಿನ ಜನ ಭಯಕ್ಕೆ ಒಳಗಾಗಿದ್ದಾರೆ. ರಸ್ತೆಯಲ್ಲಿ ನದಿಯಂತೆ ನೀರು ಪ್ರವಾಹದ ರೀತಿ ಹರಿದಿದ್ದು ಜನರು ಕಾಫಿ ಗಿಡಗಳು ಕೊಚ್ಚಿ ಹೋಗಿವೆ.
ಒಂದೇ ಗಂಟೆಯಲ್ಲಿ ದಾಖಲೆ ಮಳೆ !
ಚಿಕ್ಕಮಗಳೂರು ತಾಲೂಕಿನ ಸಾರಗೋಡು, ಹುಯಿಗೆರೆ ಆಸುಪಾಸಿನಲ್ಲಿ ಒಂದೇ ಗಂಟೆಯಲ್ಲಿ 200 ಮಿಲಿಮೀಟರ್ ಗೂ ಅಧಿಕ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ರಸ್ತೆ ಮೇಲೆ ನದಿಯಂತೆ ಮಳೆ ನೀರು ಹರಿದಿದೆ. ಹಲವೆಡೆ ಮನೆಗಳಿಗೂ ನೀರು ನುಗ್ಗಿದ್ದು, ಕಾಂಪೌಂಡ್ ಗೋಡೆ ಕುಸಿದು ಬಿದ್ದಿವೆ. ದಾಖಲೆ ಪ್ರಮಾಣದ ಮಳೆ ಕಂಡು ಕಾಫಿ ನಾಡಿಗರು ಕಂಗಾಲಾಗಿದ್ದಾರೆ.
ವಾಣಿ ವಿಲಾಸ ಸಾಗರದಲ್ಲಿ ಕಮಿಷನರ್ ಶಶಿಕುಮಾರ್ ಸಂಭ್ರಮ !
ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರದ ಅಣೆಕಟ್ಟು 89 ವರ್ಷಗಳ ನಂತರ ಇದೇ ಮೊದಲ ಬಾರಿಗೆ ತುಂಬಿದ್ದು ಆಸುಪಾಸಿನ ಗುಡ್ಡ, ಹೊಲಗಳಲ್ಲಿ ನೀರು ಹರಿದಿದೆ. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಚಿತ್ರದುರ್ಗ ಜಿಲ್ಲೆಯವರಾಗಿದ್ದು ಅಣೆಕಟ್ಟು ಕೋಡಿ ಹರಿದ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿ ತೀರ್ಥಸ್ನಾನ ಮಾಡಿದ್ದಾರೆ. ವೇದಾವತಿ ನದಿ ತುಂಬಿ ಹರಿದಿರುವುದು ಸ್ವಾತಂತ್ರ್ಯದ ಬಳಿಕ ಇದೇ ಮೊದಲು. 1934 ರಲ್ಲಿ ಈ ಅಣೆಕಟ್ಟು ಕೊನೆಯ ಬಾರಿಗೆ ತುಂಬಿತ್ತು. ಬ್ರಿಟಿಷರ ಕಾಲದಲ್ಲಿ ಮೈಸೂರಿನ ಒಡೆಯರು 1907 ರಲ್ಲಿ ಈ ನದಿಗೆ ಅಣೆಕಟ್ಟು ನಿರ್ಮಿಸಿದ್ದರು ಎಂದು ಶಶಿಕುಮಾರ್, ತೀರ್ಥ ಸ್ನಾನದ ಸಂಭ್ರಮದಲ್ಲಿ ವಿಡಿಯೋ ಮಾಡಿ ತನ್ನ ಫೇಸ್‌ಬುಕ್ ಪೇಜ್ ನಲ್ಲಿ ಹಾಕ್ಕೊಂಡಿದ್ದಾರೆ. ಶಶಿಕುಮಾರ್ ತಮ್ಮ ಕುಟುಂಬ ಸದಸ್ಯರ ಜೊತೆಗೆ ಅಣೆಕಟ್ಟು ಕೋಡಿ ಹರಿದಿರುವುದನ್ನು ನೋಡಿ ಸಂಭ್ರಮಿಸಿದ್ದಾರೆ.
ಕೋಡಿ ಹರಿದ ಹೊಯ್ಸಳರ ಚಿಕ್ಕ ದೇವನೂರು ಕೆರೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿನಾಡಿನ ಜನರು ಕಂಡು ಕೇಳರಿಯದ ರೀತಿ ಮಳೆಯಾಗಿದ್ದು 30 ವರ್ಷಗಳ ಬಳಿಕ ಹೊಯ್ಸಳರ ಕಾಲದ ಚಿಕ್ಕ ದೇವನೂರು ಕೆರೆ ಇದೇ ಮೊದಲ ಬಾರಿಗೆ ತುಂಬಿ ಹರಿದಿದೆ. ಕಡೂರು ತಾಲೂಕಿನ ಚಿಕ್ಕದೇವನೂರು ಗ್ರಾಮದ ಅತಿ ದೊಡ್ಡ ಕೆರೆಯಾಗಿದ್ದು ಕೋಡಿ ಬಿದ್ದು ಚಿಕ್ಕದೇವನೂರು ಗ್ರಾಮ ಜಲಾವೃತಗೊಂಡಿದೆ.
ಗ್ರಾಮದ ರಸ್ತೆಗಳೆಲ್ಲ ನದಿಯಂತಾಗಿ ಜನರು ಪರದಾಟ ಅನುಭವಿಸಿದ್ದಾರೆ. ಕಳೆದ ರಾತ್ರಿಯಿಂದ ಭಾರೀ ಪ್ರಮಾಣದ ಮಳೆ ಸುರಿಯುತ್ತಿದ್ದು 30 ವರ್ಷಗಳ ಬಳಿಕ ಭಾರಿ ಪ್ರಮಾಣದ ನೀರು ಕಂಡು ಜನರು ಆಶ್ಚರ್ಯಗೊಂಡಿದ್ದಾರೆ. ಹೊಲ, ಗದ್ದೆ, ರಸ್ತೆ ಮೇಲೆ ಧುಮ್ಮಿಕ್ಕಿ ಹರಿಯುತ್ತಿರುವ ಜಲ ಪ್ರವಾಹವೇ ಎದುರಾಗಿದೆ.
Chickmagalur flooded with rainwater houses merged with water Heavy rains create havoc Surprisingly chitradurga Dam is flooded with water and videos have gone viral where people are rejoicing.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm