ಬ್ರೇಕಿಂಗ್ ನ್ಯೂಸ್
30-08-22 09:23 pm HK News Desk ಕರ್ನಾಟಕ
ಬಳ್ಳಾರಿ, ಆಗಸ್ಟ್ 30 : ಸಚಿವ ಆನಂದ್ ಸಿಂಗ್ ತಮ್ಮನ್ನು ಬೆಂಕಿ ಹಚ್ಚಿ ಸುಡುವುದಾಗಿ ಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಿದ ಕುಟುಂಬವೊಂದು ತಾವೇ ಪೆಟ್ರೋಲ್ ಸುರಿದು ಸಾಮೂಹಿಕ ಆತ್ಮಹತ್ಯೆಗೆ ಮುಂದಾದ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಹೊಸಪೇಟೆಯ 6ನೇ ವಾರ್ಡ್ ನಿವಾಸಿ ಡಿ.ಪೋಲಪ್ಪ ಮತ್ತು ಒಂಬತ್ತು ಜನರಿದ್ದ ಕುಟುಂಬದ ಸದಸ್ಯರು ವಿಜಯನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ತಾವೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಪ್ರತಿಭಟನೆ ನಡೆಸಿದರು. ಒಂದೇ ಕುಟುಂಬದ 9 ಜನರು ಪೆಟ್ರೋಲ್ ಸುರಿದುಕೊಂಡು ಪ್ರತಿಭಟನೆಗೆ ಮುಂದಾಗಿದ್ದು ಪೊಲೀಸರು ಒಂದು ಕ್ಷಣ ಆತಂಕಕ್ಕೆ ಈಡಾಗಿದ್ದರು.



ಸಚಿವ ಆನಂದ್ ಸಿಂಗ್ ಅವರು ಬೆಂಕಿ ಹಾಕಿ ನಿಮ್ಮ ಮನೆ ಸುಡ್ತೀನಿ ಅಂತ ಬೆದರಿಸಿದ್ದಾರೆ. ಹೀಗಾಗಿ ನಾವೇ ಪೆಟ್ರೋಲ್ ಸುರಿದುಕೊಂಡಿದ್ದೇವೆ. ಸಚಿವ ಆನಂದ್ ಸಿಂಗ್ ಬಂದು ಬೆಂಕಿ ಹಚ್ಚಲಿ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿ.ಪೋಲಪ್ಪ ಹೊಸಪೇಟೆಯ 6ನೇ ವಾರ್ಡಿನ ಸುಣ್ಣದ ಬಟ್ಟಿ ಪ್ರದೇಶದ ನಿವಾಸಿಯಾಗಿದ್ದಾರೆ. ನೀವಿರೋದು ನಮ್ಮ ಜಾಗ. ಕೂಡಲೇ ಖಾಲಿ ಮಾಡಬೇಕು, ಇಲ್ಲವಾದಲ್ಲಿ ಬೆಂಕಿ ಹಚ್ಚಿ ಸುಡ್ತೀನಿ ಅಂತ ಆನಂದ್ ಸಿಂಗ್ ಬೆದರಿಕೆ ಒಡ್ಡಿದ್ದಾರೆಂದು ಪೋಲಪ್ಪ ಆರೋಪಿಸಿದ್ದಾರೆ. ಮಡಿವಾಳ ಸಮಾಜಕ್ಕೆ ಸೇರಿದ ಭೂಮಿ ಒತ್ತವರಿ ಮಾಡಿರುವ ಆರೋಪ ಪೋಲಪ್ಪ ಅವರ ಮೇಲಿದೆ. ಜಾಗ ತೆರವು ಮಾಡುವಂತೆ ಪೋಲಪ್ಪ ಅವರ ಮೇಲೆ ಒತ್ತಡ ಹಾಕಲಾಗಿದೆ. ಹೀಗಾಗಿ ಪೋಲಪ್ಪ ತಮ್ಮ ಕುಟುಂಬವನ್ನು ಕರ್ಕೊಂಡು ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪೊಲೀಸರು ಬಳಿಕ ಆತ್ಮಹತ್ಯೆಗೆ ಯತ್ನಿಸಿದವರನ್ನು ಆಸ್ಪತ್ರೆಗೆ ದಾಖಲಿಸಿ ವಿಚಾರಣೆ ನಡೆಸಿದ್ದಾರೆ.
#Breakingnews: #Karnataka Minisger #AnandSingh threatens family of setting them on fire, family of 9 pour petrol try to commit *suicide on themselves in #Bellari pic.twitter.com/51IlD6V3PP
— Headline Karnataka (@hknewsonline) August 30, 2022
Minister AnandSingh threatens family of setting them on fire, family of 9 pour petrol try to commit suicide in Bellari.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm