ಬ್ರೇಕಿಂಗ್ ನ್ಯೂಸ್
18-08-22 10:34 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 18: ಹಿಜಾಬ್ ವಿವಾದದ ಬಳಿಕ ಶಾಲೆ, ಕಾಲೇಜಿನಲ್ಲಿ ಮತೀಯ ದ್ವೇಷದ ವಾತಾವರಣ ಕಿಡಿ ಹೊತ್ತಿಕೊಳ್ಳುವಂತಾಗಿದೆ. ಇದೀಗ ಗಣೇಶನ ಹಬ್ಬ ಹತ್ತಿರ ಬರುತ್ತಿದ್ದಂತೆ, ವಕ್ಫ್ ಬೋರ್ಡ್ ಸದಸ್ಯರು ಸರಕಾರಕ್ಕೆ ಹೊಸ ಅಹವಾಲು ಮುಂದಿಟ್ಟಿದ್ದಾರೆ. ಶಾಲೆಗಳಲ್ಲಿ ಗಣೇಶನ ಹಬ್ಬಕ್ಕೆ ಅವಕಾಶ ಕೊಟ್ಟರೆ, ಈದ್ ಮಿಲಾದ್ ನಡೆಸುವುದಕ್ಕೂ ಅವಕಾಶ ನೀಡಬೇಕು ಎಂದು ಶಿಕ್ಷಣ ಸಚಿವರಿಗೆ ಮನವಿ ನೀಡಿದ್ದಾರೆ.
ಈದ್ ಮಿಲಾದ್ ಹಬ್ಬವನ್ನೂ ಶಾಲೆಗಳಲ್ಲಿ ಆಚರಿಸಲು ಮತ್ತು ನಮಾಜ್ ನಡೆಸುವುದಕ್ಕೆ ಅವಕಾಶ ನೀಡಬೇಕು ಎಂದು ವಕ್ಫ್ ಮಂಡಳಿ ಸದಸ್ಯರು ಅಹವಾಲು ಮುಂದಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್, ಯಾವುದೇ ಧಾರ್ಮಿಕ ಆಚರಣೆಗೂ ಶಾಲೆಗಳಲ್ಲಿ ಅವಕಾಶ ಇಲ್ಲ ಎಂದಿದ್ದಾರೆ. ಗಣೇಶನ ಹಬ್ಬ ನಡೆಸುವುದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗಣೇಶನ ಹಬ್ಬವನ್ನು ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೂ ಮೊದಲೇ ಶಾಲೆಗಳಲ್ಲಿ ಆಚರಿಸುತ್ತಾ ಬರಲಾಗಿತ್ತು. ಕೆಲವು ಶಾಲೆಗಳಲ್ಲಿ ಗಣೇಶನ ಮೂರ್ತಿ ಇಟ್ಟು ಪೂಜಿಸುತ್ತಿದ್ದರು. ನಮ್ಮ ಸರಕಾರ ಬಂದ ಬಳಿಕ ಗಣೇಶನ ಹಬ್ಬ ಆಚರಿಸಿದ್ದಲ್ಲ ಎಂದು ಹೇಳಿದ್ದಾರೆ.
ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಹದಿ, ಶಾಲೆಗಳಲ್ಲಿ ಶುಕ್ರವಾರದ ನಮಾಜ್ ಮಾಡುವುದಕ್ಕೆ ಪ್ರತ್ಯೇಕ ಕೊಠಡಿ ಮಾಡಿಕೊಡಬೇಕು ಎಂಬ ಅಹವಾಲನ್ನೂ ಸರಕಾರದ ಮುಂದಿಟ್ಟಿದ್ದಾರೆ. ಶಾಲೆಗಳಲ್ಲಿ ಎಲ್ಲ ಮತ, ಧರ್ಮದವರೂ ಇದ್ದಾರೆ. ಎಲ್ಲರಿಗೂ ಸಮಾನ ಅವಕಾಶ ಕೊಡಬೇಕು. ಅವರಿಗೊಂದು ನ್ಯಾಯ, ಇವರಿಗೊಂದು ನ್ಯಾಯ ಅನ್ನುವಂತಾಗಬಾರದು. ಅವರಿಗೆ ಅನುಮತಿ ನೀಡಿದರೆ, ನಮಗೂ ನಮಾಜ್ ಮಾಡುವುದಕ್ಕೆ ಅವಕಾಶ ನೀಡಬೇಕು ಎಂದು ಶಾಫಿ ಹೇಳಿದ್ದಾರೆ.
ಹಿಜಾಬ್ ವಿವಾದ ಸಂದರ್ಭದಲ್ಲೂ ಈ ಬಗ್ಗೆ ನಾವು ಹೇಳಿದ್ದೆವು. ಒಂದು ಸಮುದಾಯವನ್ನು ಗುರಿ ಮಾಡಿಕೊಂಡು ಇಂತಹ ಕಾನೂನು ತರುತ್ತಿದ್ದಾರೆಂದು. ಈಗಲೂ ಅದನ್ನೇ ಹೇಳುತ್ತೇವೆ. ಗಣೇಶನ ಹಬ್ಬ ಆಚರಿಸುವುದಾದರೆ, ನಮಗೆ ನಮಾಜ್ ಮಾಡುವುದಕ್ಕೆ ಪ್ರತ್ಯೇಕ ಕೊಠಡಿ ಕೊಡಬೇಕೆಂದು ಕೇಳುತ್ತೇವೆ ಎಂದಿದ್ದಾರೆ.
On Wednesday, Nagesh's statement about Ganesha being worshipped in schools and colleges went viral on social media. The minister said at a press conference in Bengaluru, “We have given the freedom to schools and colleges to place (Ganesha) as they were practising earlier. It’s a practice of uniting society.”
28-08-25 02:41 pm
HK News Desk
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 02:51 pm
Mangalore Correspondent
SIT, Sujata Bhat, Dharmasthala Case: ಕೇಸ್ ಹಿಂ...
28-08-25 11:27 am
Pastor John Shamine, Madan Bugadi, IHRACSJC:...
27-08-25 11:02 pm
FIR, Chinnayya, Dharmasthala, Mahesh Thimarod...
27-08-25 09:19 pm
Praveen Nettaru, NIA, Mangalore: ಪ್ರವೀಣ್ ನೆಟ್...
27-08-25 08:46 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm