ಬ್ರೇಕಿಂಗ್ ನ್ಯೂಸ್
27-07-22 01:13 pm HK News Desk ಕರ್ನಾಟಕ
ಧಾರವಾಡ, ಜುಲೈ 27: ಸರ್ಕಾರದ ಹದ್ದಿನ ಕಣ್ಣು ಎಲ್ಲಿದೆ?. ಸರ್ಕಾರದ ಬಿಗಿಯಾದ ಕ್ರಮ ಇಲ್ಲ. ಇದೇ ಕಾರಣಕ್ಕೆ ಇದೆಲ್ಲ ಆಗುತ್ತಿದೆ. ಮೋದಿ ಮತ್ತು ಯೋಗಿ ಮಾದರಿಯಲ್ಲಿ ಗಟ್ಸ್ ಇಲ್ಲ. ಆ ಧೈರ್ಯ, ಮಾನಸಿಕತೆ ಇವರಿಗೆ ಇಲ್ಲ. ಆ ನೈತಿಕತೆಯೂ ಇವರಿಗೆ ಇಲ್ಲ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ಕ್ರೌರ್ಯ ಹದ್ದುಬಸ್ತಿನಲ್ಲಿಡೋ ಕಾರ್ಯ ಸರ್ಕಾರ ಕೂಡಲೇ ಮಾಡಬೇಕು. ಇಲ್ಲದೇ ಹೋದಲ್ಲಿ ಇನ್ನೂ ಸಾಕಷ್ಟು ಹಿಂದೂಗಳ ಬಲಿಯಾಗತ್ತೇ ಅನಿಸುತ್ತಿದೆ. ಸರ್ಕಾರ ಈ ವಿಷಯದಲ್ಲಿ ವಿಫಲ ಆಗುತ್ತಿದೆ. ಕೊಲೆ, ಹಲ್ಲೆ, ಗಲಾಟೆಯಾದಾಗ ಉಗ್ರವಾದ ಹೇಳಿಕೆಗಳು ಬರುತ್ತವೆ. ಆದರೆ ಮುಂದೆ ಏನು ಎಂದು ಪ್ರಶ್ನಿಸಿದರು.

ಇನ್ನುವರೆಗೆ ಯಾವುದೇ ರೀತಿಯ ಕಠಿಣ ಪ್ರಕ್ರಿಯೆ ನಡೆದಿಲ್ಲ. ಇದೇ ಕಾರಣಕ್ಕೆ ಪ್ರವೀಣ್ ಹತ್ಯೆ ಆಗಿದೆ. ಇದು ಕಾನೂನು, ಸರ್ಕಾರದ ವೈಫಲ್ಯ. ಬಿಜೆಪಿಗೆ ಹಿಂದೂಗಳ ಸುರಕ್ಷತೆ ಕಾಳಜಿಯಿದ್ದಲ್ಲಿ ಎಸ್‍ಡಿಪಿಐ, ಪಿಎಫ್‍ಐ ಬ್ಯಾನ್ ಮಾಡಬೇಕು. ಹತ್ಯೆ ಹಿಂದೆ ಕೇರಳದ ಮೂಲ ಅಂತಾ ಹೇಳುತ್ತಿದ್ದಾರೆ. ವಾರದ ಹಿಂದೆ ನಡೆದ ಹತ್ಯೆಗೆ ಸೇಡಿಗೆ ಮಾಡಿದ್ದಾರೆ ಅಂತಾನೂ ಹೇಳುತ್ತಿದ್ದಾರೆ. ಮುಸ್ಲಿಮರು ಮಾಡಿರೋ ಲಕ್ಷಾಂತರ ಕೊಲೆಗಳಿಗೆ ನಾವು ತಿರುಗಿ ಬಿದ್ರೆ ದೇಶದಲ್ಲಿ ಒಬ್ಬನೂ ಮುಸ್ಲಿಂ ಇರಬಾರದು. ಆದರೆ ಆ ಮಾನಸಿಕತೆ ಇರಬಾರದು ಎಂದು ವಾಗ್ದಾಳಿ ನಡೆಸಿದರು.

ಕೊಲೆಗೆ ಕೊಲೆಯೇ ಉತ್ತರ ಅಲ್ಲ. ನ್ಯಾಯಕ್ಕೆ ನ್ಯಾಯಾಲಯ ಇದೆ. ಪೊಲೀಸ್ ಠಾಣೆ ಇದೆ. ಸಂವಿಧಾನಬದ್ಧವಾದ ಹೋರಾಟಕ್ಕೆ ಅವಕಾಶ ಇದೆ. ಮುಲ್ಲಾ ಮೌಲ್ವಿಗಳು ಎಸ್‍ಡಿಪಿಐ, ಪಿಎಫ್‍ಐ ಹದ್ದುಬಸ್ತಿನಲ್ಲಿಡಬೇಕು. ಶಾಂತಿ-ಸೌಹಾರ್ದತೆ ಬೇಕಾದರೆ ಹದ್ದುಬಸ್ತಿನಲ್ಲಿಡಿ. ಇಲ್ಲದೇ ಹೋದಲ್ಲಿ ಹಿಂದೂ ಸಮಾಜ ತಿರುಗಿ ಬೀಳುತ್ತೆ. ಸ್ವಯಂ ರಕ್ಷಣೆಗೆ ಹಿಂದೂ ಸಮಾಜ ಸಿದ್ಧವಾಗಬೇಕಿದೆ. ಇಲ್ಲದೇ ಹೋದಲ್ಲಿ ಸರ್ಕಾರ, ಬಿಜೆಪಿ, ಕಾನೂನು ಏನೂ ಮಾಡಲು ಆಗುವುದಿಲ್ಲ ಎಂದು ಮುತಾಲಿಕ್ ಗರಂ ಆದರು.
ಮುಸ್ಲಿಂ ವೋಟ್‍ಗಾಗಿ ಸ್ವಲ್ಪ ಅಲ್ಲಾಡ್ತಾ ಇದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯ ಭದ್ರಕೋಟೆ. ಶಿವಮೊಗ್ಗ ಬಿಜೆಪಿಯ ಭದ್ರ ಕೋಟೆ. ಅವರ ಭದ್ರಕೋಟೆಯಲ್ಲೇ ಹೊಕ್ಕು ಹೊಡಿತಾ ಇದ್ದಾರೆ. ಹಾಗಾದರೆ ಭದ್ರಕೋಟೆ ಛಿದ್ರವಾಗುತ್ತಿದೆಯಲ್ಲ?. ಹಿಂದೂಗಳ ಕೊಲೆಮಾಡಿದರೂ ಏನೂ ಮಾಡಲು ಆಗೋದಿಲ್ಲ ಎಂಬ ಸಂದೇಶ ಕೊಡುತ್ತಿದ್ದಾರೆ ಎಂದು ಹೇಳಿದರು.

ಎಸ್‍ಡಿಪಿಐ, ಪಿಎಫ್‍ಐ ಬ್ಯಾನ್ ಮಾಡಬೇಕು. ಇಲ್ಲವೇ ಸಿಎಂ ರಾಜೀನಾಮೆ ಕೊಡಬೇಕು. ಇನ್ನೂ ಅದೆಷ್ಟು ಬಲಿ ಕೊಡಬೇಕು ಮಾಡಿದ್ದೀರಿ. ಇದಕ್ಕೆ ಬಿಜೆಪಿಯೇ ಕಾರಣ. ಬ್ಯಾನ್ ಮಾಡದೇ ಇದ್ದುದ್ದಕ್ಕೆ ಈ ಕೊಲೆ ಅಗಿದೆ ಎಂದು ಸಿಡಿಮಿಡಿಗೊಂಡರು.
Bellare Praveen Murder, Pramod Muthalik has slammed Karnataka govt stating that they don't have power like Modi or Yogi. The government should ban SDPI PFI immediately or let CM resign from his post he slammed.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 03:28 pm
HK News Desk
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm