ಬ್ರೇಕಿಂಗ್ ನ್ಯೂಸ್
01-06-22 01:12 pm HK News Desk ಕರ್ನಾಟಕ
ಮಡಿಕೇರಿ, ಜೂನ್ 1 : ಕಾಡಾನೆ ಹಿಡಿಯಲೆಂದು ಅರಣ್ಯಾಧಿಕಾರಿಗಳು ಅರಿವಳಿಕೆ ಇಂಜೆಕ್ಷನ್ ಕೊಟ್ಟಿದ್ದು ಓವರ್ ಡೋಸ್ ಆಗಿ 16 ವರ್ಷದ ಹೆಣ್ಣಾನೆ ದುರಂತ ಸಾವು ಕಂಡ ಘಟನೆ ಇಲ್ಲಿನ ಚೆಯ್ಯಂಬಾಣೆ ಅರಣ್ಯ ವಲಯದಲ್ಲಿ ನಡೆದಿದೆ.
ಚೆಯ್ಯಂಡಾಣೆ ಸಮೀಪದ ಮರಂದೋಡು ಎಂಬಲ್ಲಿ ಘಟನೆ ನಡೆದಿದ್ದು ಕಾಡಾನೆ ಸಾವಿಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರಂದೋಡು ಗ್ರಾಮದ ವಿಜಯ್ ನಂಜಪ್ಪ ಅವರ ಕಾಫಿ ತೋಟದಲ್ಲಿ ಕಾಡಾನೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗಿತ್ತು.
ದಾಂಧಲೆ ಮಾಡುತ್ತಿದ್ದ ಕಾಡಾನೆಗಳನ್ನು ಸೆರೆಹಿಡಿಯಲು ಸರ್ಕಾರದ ಅನುಮತಿ ಪಡೆದು ಮೂರು ಸಾಕಾನೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಲಾಗಿತ್ತು. ಅತ್ತಿತ್ತ ಓಡುತ್ತಿದ್ದ ಆನೆಗೆ ಮೂರು ಸಾಕಾನೆಗಳ ಮೂಲಕ ಅರಿವಳಿಕೆ ಇಂಜೆಕ್ಷನ್ ನೀಡಿದ್ದು ಸ್ವಲ್ಪ ದೂರಕ್ಕೆ ಓಡಿ ಪ್ರಜ್ಞೆ ತಪ್ಪಿ ಬಿದ್ದಿತ್ತು. ಬಳಿಕ ಹಗ್ಗದಿಂದ ಕಟ್ಟಿ ಆನೆಯನ್ನು ಎತ್ತಿ ಲಾರಿಗೆ ಹಾಕಲು ಯತ್ನಿಸುತ್ತಿದ್ದಾಗ ಕುಸಿದು ಬಿದ್ದಿದೆ. ಸ್ಥಳದಲ್ಲಿದ್ದ ವೈದ್ಯರು ಚಿಕಿತ್ಸೆ ನೀಡಲು ಪರದಾಡಿದರೂ, ಸಾಧ್ಯವಾಗಲಿಲ್ಲ. ಅರಿವಳಿಕೆ ಚುಚ್ಚುಮದ್ದು ಓವರ್ ಡೋಸ್ ಆಗಿ ಹೃದಯಾಘಾತ ಆಗಿದೆ ಎನ್ನಲಾಗುತ್ತಿದೆ. ಆನೆಗೆ ಹೈಡೋಸ್ ಕೊಟ್ಟು ಅರಣ್ಯ ಇಲಾಖೆ ಅಧಿಕಾರಿಗಳೇ ಸಾಯಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಾಡಾನೆ ಹಾವಳಿ ಹೆಚ್ಚಿದ್ದರಿಂದ ಒಂದು ವಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ನಡೆಸುತ್ತಿದ್ದರು. ಈ ಕುರಿತು ಮಾಧ್ಯಮಕ್ಕೆ ಮಾತನಾಡಿದ ಡಿಎಫ್‌ಓ ಚಕ್ರಪಾಣಿ, ಆರಂಭದಲ್ಲಿ ಕಾಡಾನೆ ಸೆರೆಗಾಗಿ ಅರಿವಳಿಕೆ ನೀಡಲಾಗಿತ್ತು. ಆಬಳಿಕವೂ ಆನೆ ಓಡಾಡುತ್ತಿತ್ತು, ಆದರೆ ಅದನ್ನು ಹಿಡಿದು ತರುವ ಸಂದರ್ಭ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಓವರ್ ಡೋಸ್ ಆಗಿದೆಯಾ ಅನ್ನೋದೂ ತಿಳಿದುಬರುತ್ತದೆ ಎಂದು ಹೇಳಿದರು.
A wild elephant was killed during a capture mission undertaken by the forest department. The incident was reported at Marandoda village limits in Virajpet taluk of Kodagu. The dead elephant is a female, aged approximately 35 years. The elephant capture mission started at Marandoda near Cheyandane on Tuesday morning. Five tamed elephants alongside the forest staff took to the capture mission and the identified 35-year-old female elephant was separated from the herd and was tranquilized by veterinary Doctor Ramesh.
09-04-26 09:30 pm
HK News Staffer
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಾಗಿದೆ ಎಂಬ ವದಂತಿಗೆ...
08-04-26 09:35 pm
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
09-04-26 11:03 pm
HK News Staffer
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
09-04-26 09:16 pm
HK News Staffer
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm