ಬ್ರೇಕಿಂಗ್ ನ್ಯೂಸ್
31-05-22 02:50 pm Bengalore Correspondent ಕರ್ನಾಟಕ
ಬೆಂಗಳೂರು, ಮೇ 31: ರೈತ ಸಂಘದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಕಿತ್ತು ಹಾಕಲಾಗಿದೆ. ಶಿವಮೊಗ್ಗದಲ್ಲಿ ನಡೆದ ರೈತ ಸಂಘದ ತುರ್ತು ಸಭೆಯಲ್ಲಿ ಕೋಡಿಹಳ್ಳಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾ ಮಾಡಿದ್ದಲ್ಲದೆ, ಎಚ್.ಆರ್. ಬಸವರಾಜು ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಕಳೆದ ವರ್ಷ ಸಾರಿಗೆ ನೌಕರರು ತಮ್ಮ ವೇತನಕ್ಕಾಗಿ ರಾಜ್ಯಾದ್ಯಂತ ಪ್ರತಿಭಟನೆ ಕೈಗೊಂಡಿದ್ದಾಗ ಅದರ ನೇತೃತ್ವವನ್ನು ಕೋಡಿಹಳ್ಳಿ ಚಂದ್ರಶೇಖರ್ ವಹಿಸಿದ್ದರು. ಸತತವಾಗಿ ಮೂರ್ನಾಲ್ಕು ದಿನ ಸಾರಿಗೆ ಮುಷ್ಕರ ನಡೆದಾಗ, ರಾಜ್ಯ ಸರಕಾರ ತೀವ್ರ ಇಕ್ಕಟ್ಟಿಗೆ ಸಿಲುಕಿತ್ತು. ಈ ಸಂದರ್ಭದಲ್ಲಿ ಸರಕಾರದ ಕಡೆಯಿಂದ 35 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದು ಸಾರಿಗೆ ಮುಷ್ಕರವನ್ನು ಹಿಂತೆಗಯಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದರಲ್ಲಿ ಭಾರೀ ಪ್ರಮಾಣದ ಲಂಚವನ್ನು ಕೋಡಿಹಳ್ಳಿ ಚಂದ್ರಶೇಖರ್ ಪಡೆದಿದ್ದರು ಅನ್ನೋ ಆರೋಪ ಇತ್ತೀಚೆಗೆ ಕೇಳಿಬಂದಿತ್ತು.



ನಾಲ್ಕು ದಿನಗಳ ಹಿಂದೆ ಕೋಡಿಹಳ್ಳಿ, ತನ್ನ ವಿರುದ್ಧದ ಆರೋಪದ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಲು ಮುಂದಾಗಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರು ಅಡ್ಡಹಾಕಿದ್ದರು. ಕೋಡಿಹಳ್ಳಿ ಚಂದ್ರಶೇಖರ್ ಬೆಂಬಲಿಗರ ಮೇಲೆ ಮಸಿ ಎರಚಿ ಹೈಡ್ರಾಮಾ ನಡೆಸಿದ್ದರು. ಘಟನೆ ಸಂಬಂಧಿಸಿ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದರು. ಆನಂತರ, ಇದೇ ವಿಚಾರದಲ್ಲಿ ರೈತ ಸಂಘದ ಮುಖಂಡರು ಬೆಂಗಳೂರಿನ ಗಾಂಧಿ ಭವನದಲ್ಲಿ ಸೋಮವಾರ ಸಭೆ ಏರ್ಪಡಿಸಿದ್ದರು. ಸಭೆಗೆ ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಟಿಕಾಯತ್ ಆಗಮಿಸಿದ್ದಾಗಲೂ ಕೆಲವು ಕಾರ್ಯಕರ್ತರು ಮೋದಿ ಮೋದಿ ಹೆಸರು ಕೂಗುತ್ತಾ ಟಿಕಾಯತ್ ಮೇಲೆ ಮಸಿ ಎರಚಿದ್ದರು.

ಇದೀಗ ಕೋಡಿಹಳ್ಳಿ ಚಂದ್ರಶೇಖರ್ 35 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆಂಬ ಆರೋಪವನ್ನು ರೈತ ಸಂಘದ ಸದಸ್ಯರು ಗಂಭೀರವಾಗಿ ಪರಿಗಣಿಸಿದ್ದು, ಅವರನ್ನು ರೈತ ಸಂಘದಿಂದ ವಜಾ ಮಾಡಿದ್ದಲ್ಲದೆ, ಅವರ ಫೋಟೋವನ್ನು ರೈತರ ಸಭೆಗಳಲ್ಲಿ ಬಳಸಬಾರದೆಂದು ನಿರ್ಧರಿಸಿದ್ದಾರೆ. ನಂಜುಂಡಸ್ವಾಮಿ ಇನ್ನಿತರ ಹಳೆ ಮುಖಂಡರ ಚಿತ್ರಗಳನ್ನು ಮಾತ್ರ ಬಳಸುವಂತೆ ಸೂಚಿಸಲಾಗಿದೆ.
Kodihalli Chandrashekar scam in protest, suspended from farmers association. Condemning the alleged dealings by farmers’ leader Kodihalli Chandrashekar in the name of farmers, a faction of the Karnataka Rajya Raitha Sangha (KRRS) led by Badagalapura Nagendra staged a demonstration in Mysuru on Saturday seeking a probe into the reported dealings by Mr. Chandashekar as brought out in a sting operation by a television channel.
21-06-26 02:18 pm
HK News Staffer
ಧರ್ಮಸ್ಥಳ ಮೇಲಾಣೆ ಅಡ್ಡ ಮತದಾನ ಮಾಡಿಲ್ಲ, ಮೋದಿ ಬಂದಿ...
20-06-26 06:40 pm
ಬಿಡದಿ ಟೌನ್ ಶಿಪ್ ನೆಪದಲ್ಲಿ 750 ರೈತ ಕುಟುಂಬಗಳು ಬೀ...
20-06-26 01:33 pm
ಪರಿಷತ್ತಿಗೆ ಅಡ್ಡ ಮತದಾನ ಮಾಡ್ತಾರೆಂದು ಮೊದಲೇ ಗೊತ್ತ...
19-06-26 04:18 pm
ರೈ ಅವರೇ ಧನ ಸಹಾಯ ಮಾಡಿ ಬುರುಡೆ ಗ್ಯಾಂಗ್ ನಡೆಸುತ್ತ...
18-06-26 09:57 pm
18-06-26 07:17 pm
HK News Staffer
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
21-06-26 08:59 pm
HK News Staffer
Yekkur, Mangalore Accident:ಎಕ್ಕೂರು ಹೆದ್ದಾರಿಯಲ...
21-06-26 01:13 pm
ಮೈಸೂರು ದಸರಾಗೆ ಕಂಬಳ ; ತಯಾರಿ ನಡೆಸಲು ಶಾಸಕ ಅಶೋಕ್...
20-06-26 10:25 pm
ಹಳೆ ಬಂದರು - ಲಕ್ಷದ್ವೀಪ ನಡುವೆ ಬಹುನಿರೀಕ್ಷಿತ ಜೆಟ್...
20-06-26 04:21 pm
ಕರಾವಳಿಯಲ್ಲೇ ಕ್ಯಾಬಿನೆಟ್ ಸಭೆ ; ಪ್ರವಾಸೋದ್ಯಮ ಅಭಿ...
19-06-26 09:05 pm
20-06-26 09:13 pm
HK News Staffer
ಸೂಲಿಬೆಲೆಯಲ್ಲಿ ಭೀಕರ ಅಪಘಾತ ; ಬಿಎಂಟಿಸಿ ಬಸ್ ಡ್ರೈ...
20-06-26 04:43 pm
ಬೆಂಗಳೂರಿನಲ್ಲಿ ಕಳ್ಳ ಪೊಲೀಸ್ ; ಕೇರಳದ ಉದ್ಯಮಿಗಳನ್ನ...
19-06-26 09:07 pm
ಮೊಬೈಲ್ ಕದ್ದು ಓಡುತ್ತಿದ್ದಾಗಲೇ ಕುಸಿದು ಬಿದ್ದು ಕಳ್...
19-06-26 08:30 pm
ಕೋಡಿ ಬೀಚ್ನಲ್ಲಿ ಬೆಂಗಳೂರು ಮೂಲದ ಯುವಕ ಸಮುದ್ರ ಪಾಲ...
19-06-26 05:47 pm