ಬ್ರೇಕಿಂಗ್ ನ್ಯೂಸ್
27-05-22 11:43 am Bengalore Correspondent ಕರ್ನಾಟಕ
ಬೆಂಗಳೂರು, ಮೇ 27: ಇತ್ತೀಚೆಗೆ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ಯಾರಿಗೂ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಪೊಲೀಸರು ಶಿವನಸಮುದ್ರ ಬಳಿಯ ಮಾರಮ್ಮ ದೇವಿಗೆ ಹರಕೆ ಹೊತ್ತಿದ್ದ ವಿಚಾರ ಈಗ ಬಯಲಾಗಿದೆ!
ಆರೋಪಿ ನಾಗೇಶ್ ಘಟನೆ ನಡೆದು 20 ದಿನ ಕಳೆದರೂ, ಸುಳಿವೇ ಸಿಗದ ಕಾರಣ ಪೊಲೀಸರು ಬಹಳಷ್ಟು ಕಂಗೆಟ್ಟು ಹೋಗಿದ್ದರು. ಉತ್ತರ ಭಾರತದ ವಾರಣಾಸಿ, ಡೆಹ್ರಾಡೂನ್ ಹೀಗೆ ಹಲವಾರು ಪ್ರವಾಸಿ ಕೇಂದ್ರ, ಪುಣ್ಯಕ್ಷೇತ್ರಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ದೇಶಾದ್ಯಂತ ಹುಡುಕಾಟ ನಡೆಸಿದರೂ ಎಲ್ಲಿಯೂ ಕೂಡ ಸಣ್ಣ ಸುಳಿವೂ ಸಿಕ್ಕಿರಲಿಲ್ಲ.
ಕೊನೆಗೆ, ಆತ ಹೆಚ್ಚು ದೇವಸ್ಥಾನಗಳಿಗೆ ಸುತ್ತಾಟ ಮಾಡುತ್ತಿದ್ದ ಎಂಬ ಮಾಹಿತಿಯಿಂದಾಗಿ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೂ ಬಂದು ಹೋಗಿದ್ದರು. ಮಂಡ್ಯ ಜಿಲ್ಲೆಯ ಶಿವನಸಮುದ್ರ ಬಳಿಯ ಮಾರಮ್ಮ ದೇವಸ್ಥಾನಕ್ಕೂ ತೆರಳಿದ್ದರು. ಅಲ್ಲಿಗೆ ತೆರಳಿದ್ದಾಗ ಪೊಲೀಸರು ಆರೋಪಿ ಬೇಗ ನಮ್ಮ ಕೈಗೆ ಸಿಗಲಿ ಎಂದು ಕೈಮುಗಿದು ಹರಕೆ ಪೂಜೆಯನ್ನೂ ಹೊತ್ತಿದ್ದರು. ಆರೋಪಿ ಒಂದೆರಡು ದಿನದಲ್ಲಿ ಕೈಗೆ ಸಿಕ್ಕರೆ ವಿಶೇಷ ಪೂಜೆ ಹರಕೆ ನೀಡುತ್ತೇವೆಂದು ಕಾಮಾಕ್ಷಿಪಾಳ್ಯ ಪೊಲೀಸರು ಮಾರಮ್ಮ ದೇವಿಗೆ ಹರಕೆ ಹೊತ್ತಿದ್ದರಂತೆ.
ಹರಕೆ ಹೊತ್ತುಕೊಂಡು ಹಿಂತಿರುಗಿದ ಎರಡೇ ದಿನದಲ್ಲಿ ಪೊಲೀಸರಿಗೆ ಆರೋಪಿ ಬಗ್ಗೆ ಮಾಹಿತಿ ಸಿಕ್ಕಿತ್ತು. ತಮಿಳುನಾಡಿನ ತಿರುವಣ್ಣಾಮಲೈ ಆಶ್ರಮವೊಂದರಲ್ಲಿ ನಾಗೇಶ್ ತಲೆಮರೆಸಿಕೊಂಡು ಇದ್ದಾನೆ ಎಂಬ ಮಾಹಿತಿ ಆಧರಿಸಿ ಅಲ್ಲಿಗೆ ತೆರಳಿದ್ದರು. ಆರೋಪಿ ಖಚಿತ ಆಗುತ್ತಲೇ ಅದೇ ದಿನ ರಾತ್ರಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು. ಹೀಗಾಗಿ ಮಾರಮ್ಮ ದೇವಿ ಪೊಲೀಸರಿಗೂ ಕೃಪೆ ತೋರಿದ್ದಾಳೆ ಎಂಬ ಮಾತು ಇಲಾಖೆಯ ಒಳಗಿಂದ ಕೇಳಿಬರುತ್ತಿದೆ. ಹರಕೆ ಹೊತ್ತಿದ್ದ ಪೊಲೀಸರು ಗುರುವಾರ ಸಂಜೆ ಶಿವನಸಮುದ್ರ ಬಳಿಯ ಮಾರಮ್ಮ ಗುಡಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Acid attack in Bangalore, police had made vow at temple to show the accused soon.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 07:01 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm