ಬ್ರೇಕಿಂಗ್ ನ್ಯೂಸ್
16-04-21 05:58 pm Headline Karnataka News Network ಡಿಜಿಟಲ್ ಟೆಕ್
ಮಂಗಳೂರು, ಎ.16: ಶುಕ್ರವಾರ ಸಂಜೆಯ ಹೊತ್ತಿಗೆ ವಾಟ್ಸಪ್ ಜಾಲತಾಣದಲ್ಲಿ ವಿಶೇಷ ಅತಿಥಿಯ ಆಗಮನವಾಗಿತ್ತು. ಪಿಂಕ್ ಬಣ್ಣದ ಸಿಂಬಲ್ ಜೊತೆಗೆ ಪಿಂಕ್ ವಾಟ್ಸಪ್, ನ್ಯೂ ವರ್ಶನ್ ಹೆಸರಿನಲ್ಲಿ ಲಿಂಕ್ ಒಂದು ಹರಿದಾಡಿತ್ತು. ಲಿಂಕ್ ಒತ್ತಿದ ಅದೆಷ್ಟೋ ಮಂದಿ ಲಿಂಕಾಸುರನ ಹೊಸ ಅವತಾರ ಕಂಡು ಬೆಚ್ಚಿ ಬಿದ್ದಿದ್ದರು.
ಆ ಲಿಂಕ್ ಒತ್ತಿದ ಕೂಡಲೇ ತನ್ನಷ್ಟಕ್ಕೇ ಅವರ ಹೆಸರಲ್ಲಿ ಅದೇ ಲಿಂಕ್ ಫಾರ್ವರ್ಡ್ ಆಗ್ತಾ ಇತ್ತು. ಯಾರ ಜೊತೆಗೆಲ್ಲಾ ವಾಟ್ಸಪ್ ಕನೆಕ್ಷನ್ ಇಟ್ಟುಕೊಂಡಿದ್ದಾರೋ ಅವರೆಲ್ಲರಿಗೂ ಲಿಂಕ್ ತನ್ನಿಂದ ತಾನೇ ಹೋಗ್ತಾ ಇತ್ತು. ಪಿಂಕ್ ಹೆಸರಲ್ಲಿ ಯಾರೋ ಮಾಂತ್ರಿಕ ಲಿಂಕ್ ಬಿಟ್ಟು ಯಾಮಾರಿಸಿದ್ದಾರೆ.
ಬೇರೇನೂ ಹಾನಿ ಇಲ್ಲದಿದ್ದರೂ, ಈ ಲಿಂಕ್ ತನ್ನಿಂದ ತಾನೇ ಒತ್ತಿದ ವ್ಯಕ್ತಿ ಎಷ್ಟು ಗ್ರೂಪ್ ಗಳಲ್ಲಿ ಸದಸ್ಯರಾಗಿದ್ದಾರೆ ಮತ್ತು ಅವರ ಜೊತೆ ವೈಯಕ್ತಿಕವಾಗಿ ಯಾರೆಲ್ಲ ಲಿಂಕ್ ಹೊಂದಿದ್ದಾರೆ ಅವೆರಲ್ಲರಿಗೂ ಈ ಲಿಂಕ್ ಹೋಗ್ತಾ ಇತ್ತು. ಹೊಸ ವರ್ಷನ್ ಏನೋ ಇರಬೇಕು ಎಂದು ಹೊಸ ವ್ಯಕ್ತಿ ಅದನ್ನು ಒತ್ತಿದ ಕೂಡಲೇ ಅದು ಮತ್ತೆ ಎಲ್ಲರ ಜೊತೆಗೂ ಹಂಚಿಕೆ ಆಗ್ತಾ ಇತ್ತು. ಇದು ಹೊಸ ರೀತಿಯ ವೈರಸ್ ಆಗಿದ್ದು ವಾಟ್ಸಪಲ್ಲಿ ಕುಟ್ಟುತ್ತಾ ಇರುವ ಶೂರರೆಲ್ಲಾ ಈ ಲಿಂಕಾಸುರನ ಕೂಪಕ್ಕೆ ಸಿಲುಕಿ ಕೆಲಕಾಲ ಒದ್ದಾಡಿದ್ದಾರೆ.

ಕೆಲವರಂತೂ ಈ ಲಿಂಕ್ ವೈರಸ್ ಅನ್ನೋದು ಗೊತ್ತಾಗುತ್ತಲೇ ಮತ್ತೆ ಡಿಲೀಟ್ ಬಟನ್ ಒತ್ತಲು ಆರಂಭಿಸಿದ್ದಾರೆ. ಆದರೆ, ಒಮ್ಮೆ ಒತ್ತಿದರೆ ಮುಗೀತು ಕ್ಷಣಾರ್ಧದಲ್ಲಿ ಸಾವಿರಾರು ಮಂದಿಗೆ ಲಿಂಕ್ ಹಂಚಿಕೆಯಾಗಿರುತ್ತೆ. ಸಾವಿರಾರು ಮಂದಿ ಈ ಲಿಂಕ್ ಕೂಪಕ್ಕೆ ಒದ್ದಾಡುವಂತಾಗಿದೆ. ಮೀಡಿಯಾ ಮಂದಿಯೂ ಇದರಿಂದ ಹೊರತಾಗಿಲ್ಲ.
ಈ ಬಗ್ಗೆ ಗೂಗಲಲ್ಲಿ ಕೇಳಿ ನೋಡಿದರೆ, ಪಿಂಕ್ ವಾಟ್ಸಪ್ ಅನ್ನೋ ಕಾನ್ಸಪ್ಟ್ ಇದೆಯಂತೆ. ಒಂದೇ ಮೊಬೈಲಲ್ಲಿ ಎರಡು ರೀತಿಯಲ್ಲಿ ವಾಟ್ಸಪ್ ಬಳಕೆಗೆ ಅನುವು ಮಾಡುವ ಏಪ್ ಅದು. ಒಂದೇ ನಂಬರಿನಲ್ಲಿ ಎರಡು ಬಗೆಯಲ್ಲಿ ವಾಟ್ಸಪ್ ಬಳಕೆ ಮಾಡಿಕೊಳ್ಳಲು ಪಿಂಕ್ ವಾಟ್ಸಪ್ ಬಳಕೆ ಮಾಡಬಹುದು ಎಂದಿದೆ. ಆದರೆ, ಈ ಪಿಂಕ್ ವಾಟ್ಸಪ್ ಹೆಸರಲ್ಲಿ ಯಾರೋ ಕಿಡಿಗೇಡಿಗಳು ಈ ರೀತಿಯ ವೈರಸ್ ಲಿಂಕನ್ನೇ ತೆರೆದು ಹರಿಯಬಿಟ್ಟಿದ್ದಾರೆ.
A link by name Pink Whatsapp is being circulated on WhatsApp groups be alert before you press the link this can cause virus to your phone.
09-09-26 10:52 am
HK News Staffer
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
ಐಪಿಎಸ್ ಅಧಿಕಾರಿಗಳ ಭರ್ಜರಿ ವರ್ಗಾವಣೆ: ಮಂಗಳೂರು ಡಿಸ...
07-09-26 01:33 pm
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
09-09-26 02:03 pm
HK News Staffer
ಮಂಗಳೂರು ರೈಲ್ವೇ ಆಡಳಿತಾತ್ಮಕ ವರ್ಗಾವಣೆ ಪ್ರಕ್ರಿಯೆ...
08-09-26 05:20 pm
ದಕ್ಷಿಣ ಕನ್ನಡದಲ್ಲಿ ದಿಢೀರ್ ಲೋಕಾಯುಕ್ತ ದಾಳಿ: ಬಂಟ್...
08-09-26 03:50 pm
Mangalore Jail Raid: ಮಂಗಳೂರು ಜೈಲಿಗೆ ತಡರಾತ್ರಿ...
08-09-26 09:50 am
ಪುತ್ತೂರು ಮಹಾಲಿಂಗೇಶ್ವರನ ಹೆಸರಲ್ಲಿ ಅವ್ಯವಹಾರ ; ಸಣ...
08-09-26 08:27 am
09-09-26 12:16 pm
HK News Staffer
ಸೌದಿ ಅರೇಬಿಯಾದಲ್ಲಿ ಕುತ್ತಾರಿನ ಯುವಕ ದಿಢೀರ್ ಸಾವು...
08-09-26 09:19 pm
ಮಂಗಳೂರು ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ; ಪೊಲೀಸ...
08-09-26 08:45 pm
ಪುತ್ತೂರು ಜನಸೇವಾ ಕೇಂದ್ರ ಗಲಾಟೆ ಪ್ರಕರಣ: ಪೊಲೀಸರ ಕ...
08-09-26 02:26 pm
ಅಪಘಾತದಲ್ಲಿ ಗಾಯಗೊಂಡ ಚಿರತೆಯನ್ನು ರಕ್ಷಣೆ ಮಾಡಲು ಹೋ...
08-09-26 01:11 pm