ಬ್ರೇಕಿಂಗ್ ನ್ಯೂಸ್
19-08-23 07:34 pm Source: Gizbot Kannada ಡಿಜಿಟಲ್ ಟೆಕ್
ಅಮೆಜಾನ್ ಇದೀಗ ವಿಶ್ವ ಛಾಯಾಗ್ರಹಣ ದಿನದ (World Photography Day) ಸೇಲ್ ಅನ್ನು ಆಯೋಜಿಸುತ್ತಿದೆ. ಈ ಸೇಲ್ ಇಂದಿನಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 21 ರವರೆಗೆ ಮುಂದುವರಿಯುತ್ತದೆ. ಈ ಮಾರಾಟದ ಸಮಯದಲ್ಲಿ 70 ಪ್ರತಿಶತದವರೆಗೆ ವಿಶೇಷ ಕ್ಯಾಮೆರಾಗಳ ಮೇಲೆ ಡಿಸ್ಕೌಂಟ್ ನೀಡಲಿದೆ.
ಹೌದು, ಅಮೆಜಾನ್ (Amazon) ಈ ಸೇಲ್‌ನಲ್ಲಿ ಕ್ಯಾನನ್, ಸೋನಿ, ಫ್ಯೂಜಿಫಿಲ್ಮ್, ಪ್ಯಾನಾಸೋನಿಕ್, ಮತ್ತು ಗೋಪ್ರೋ ನಂತಹ ಕಂಪೆನಿಗಳ ಕ್ಯಾಮೆರಾಗಳಿಗೆ ಭರ್ಜರಿ ಆಫರ್ ನೀಡಲಾಗಿದೆ. ಈ ಕ್ಯಾಮೆರಾಗಳನ್ನು ವಿಶ್ವ ಛಾಯಾಗ್ರಹಣ ದಿನದ ಹಿನ್ನೆಲೆ ಖರೀದಿ ಮಾಡುವ ಮೂಲಕ ನಿಮ್ಮ ಸಂತೋಷವನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳಿ. ಹಾಗಿದ್ರೆ, ತಡಯಾಕೆ ಬನ್ನಿ ಈ ಕ್ಯಾಮೆರಾಗಳ ಫೀಚರ್ಸ್ ಹಾಗೂ ಬೆಲೆ ವಿವರ ನೋಡೋಣ.
ಕ್ಯಾನನ್ M50 MKII ಮಿರರ್‌ಲೆಸ್ ಕ್ಯಾಮೆರಾ: ಈ ವಿಶೇಷ ಕ್ಯಾಮೆರಾ 4K ಇಮೇಜ್ ಮತ್ತು ವಿಡಿಯೋಗೆ ಬೆಂಬಲ ನೀಡಲಿದ್ದು, ಕನೆಕ್ಟಿವಿಟಿ ವಿಚಾರದಲ್ಲಿ ವೈ-ಫೈ ಅನ್ನು ಹೊಂದಿದ್ದು, ಇದು ಡ್ಯುಯಲ್ ಪಿಕ್ಸೆಲ್ CMOS AF ತಂತ್ರಜ್ಞಾನವನ್ನು ಸಹ ಪಡೆದುಕೊಂಡಿದೆ. ಇದನ್ನು ನೀವು ಈಗ 58,990 ರೂಪಾಯಿಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದರ ಜೊತೆಗೆ ಬ್ಯಾಂಕ್ ಕೊಡುಗೆಗಳ ಮೂಲಕ 4,000 ರೂಪಾಯಿಗಳ ಹೆಚ್ಚುವರಿ ರಿಯಾಯಿತಿ ಸಹ ಲಭ್ಯ.
ಫ್ಯೂಜಿಫಿಲ್ಮ್ ಇನ್‌ಸ್ಟಾಕ್ಸ್ ಮಿನಿ 12 ಇನ್‌ಸ್ಟಂಟ್ ಕ್ಯಾಮೆರಾ: ಈ ಕ್ಯಾಮೆರಾ ರೋಮಾಂಚಕ ಪರ್ಪಲ್ ಬಣ್ಣದ ರೂಪಾಂತರದಲ್ಲಿ ಕಾಣಿಸಿಕೊಂಡಿದೆ. ಈ ಇನ್‌ಸ್ಟಂಟ್ ಕ್ಯಾಮೆರಾವು ಅಮೆಜಾನ್ ಇಂಡಿಯಾದಲ್ಲಿ ಕೇವಲ 5,999 ರೂ.ಗಳ ಬೆಲೆಯಲ್ಲಿ ಲಭ್ಯ ಇದೆ. ಈ ಫ್ಯೂಜಿಫಿಲ್ಮ್ ಇನ್‌ಸ್ಟಾಕ್ಸ್ ಮಿನಿ 12 ಇನ್‌ಸ್ಟಂಟ್ ಕ್ಯಾಮೆರಾ ಪ್ಲಾಟ್‌ಫಾರ್ಮ್‌ನಲ್ಲಿ ಸಮಾನ್ಯ ಬೆಲೆ 7,499 ರೂ.ಗಳನ್ನು ಹೊಂದಿದೆ.
ಕೊಡಾಕ್ ಇನ್‌ಸ್ಟಂಟ್ ಕ್ಯಾಮರಾ: ಕೊಡಾಕ್ ಮಿನಿ ಶಾಟ್ 3 ರೆಟ್ರೋ ಪೋಲರಾಯ್ಡ್ ಕ್ಯಾಮೆರಾವಾಗಿದ್ದು, ಇನ್‌ಬಿಲ್ಟ್ ಫೋಟೋ ಪ್ರಿಂಟರ್ ಅನ್ನು ಹೊಂದಿದೆ. ಇದು ಬಳಕೆದಾರರು ತಮ್ಮ ಚಿತ್ರಗಳನ್ನು ಪ್ರಿಂಟ್ ಮಾಡಲು ಅಥವಾ ಸೆರೆಹಿಡಿದ ನಂತರ ಅವುಗಳನ್ನು ಡಿಸ್ಕಾರ್ಟ್ ಮಾಡಲು ಅನುಮತಿಸುತ್ತದೆ. ಇದು ಬ್ಲೂಟೂತ್ ಮೂಲಕ ಬಳಕೆದಾರರ ಮೊಬೈಲ್ ಗ್ಯಾಲರಿಗಳಿಂದ ನೇರವಾಗಿ ಫೋಟೋಗಳನ್ನು ಮುದ್ರಿಸಬಹುದು. ಅಷ್ಟು ಮಾತ್ರವಲ್ಲದೆ ಆಪಲ್ ಹಾಗೂ ಆಂಡ್ರಾಯ್ಡ್‌ನ ಎಲ್ಲಾ ಡಿವೈಸ್‌ಗಳಿಗೂ ಬೆಂಬಲ ನೀಡುತ್ತದೆ. ಇದನ್ನು ನೀವು 12,999 ರೂ.ಗಳ ಬೆಲೆಗೆ ಖರೀದಿ ಮಾಡಬಹುದು.
ಗೊಪ್ರೊ ಹೀರೋ 9 ಆಕ್ಷನ್ ಕ್ಯಾಮೆರಾ ಬಂಡಲ್: ಈ ಕ್ಯಾಮೆರಾ ಕಪ್ಪು ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಇದು 5K ವಿಡಿಯೋಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಪಡೆದಿದೆ. 23.6MP ಕ್ಯಾಮೆರಾ ಸೆನ್ಸರ್ ಆಯ್ಕೆ ಪಡೆದುಕೊಂಡಿದ್ದು, ಇದು ಟಚ್ ಜೂಮ್ ಕಾರ್ಯನಿರ್ವಹಣೆಯೊಂದಿಗೆ ಡಿಯರ್ ಟಚ್ ಸ್ಕ್ರೀನ್ ಆಯ್ಕೆ ಸಹ ಪಡೆದಿದೆ. ಇದನ್ನು ನೀವೀಗ ಅಮೆಜಾನ್ ಇಂಡಿಯಾದಲ್ಲಿ 27,490ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.
ಸೋನಿ ZV1 ವ್ಲಾಗ್ ಕ್ಯಾಮೆರಾ ZV 1:ಇನ್ನು ಸೋನಿ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಸೋನಿಯ ಬ್ಲೂಟೂತ್ ವೈರ್‌ಲೆಸ್ ಶೂಟಿಂಗ್ ಗ್ರಿಪ್ ತಂತ್ರಜ್ಞಾನದೊಂದಿಗೆ ಈ ಕ್ಯಾಮೆರಾ ಕಾಣಿಸಿಕೊಂಡಿದ್ದು, ಇದು ಕಂಟೆಂಟ್ ಕ್ರಿಯೇಟರ್‌ಗಳು ಮತ್ತು ಬ್ಲಾಗರ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಕ್ಯಾಮೆರಾವು ಅಮೆಜಾನ್‌ನಲ್ಲಿ 62,990ರೂ.ಗಳ ಬೆಲೆಯಲ್ಲಿ ಲಭ್ಯ ಇದೆ. ಇದರಲ್ಲೂ ಸಹ ಬ್ಯಾಂಕ್ ಆಫರ್ ಲಭ್ಯ.
ಸೋನಿ ಅಲ್ಫಾ ILCE-7M3 ಫುಲ್-ಫ್ರೇಮ್ 24.2MP ಮಿರರ್‌ಲೆಸ್ ಕ್ಯಾಮೆರಾ: ಈ ಕ್ಯಾಮೆರಾದ ಸ್ಟ್ಯಾಂಡರ್ಡ್ ISO ಶ್ರೇಣಿ 100 ರಿಂದ 51200 ಇದ್ದು, ನೈಸರ್ಗಿಕ ಸ್ಟೆಪ್‌ಗಳಿಗಾಗಿ 14-ಬಿಟ್ RAW ಔಟ್‌ಪುಟ್ ಹಾಗೂ 5-ಆಕ್ಸಿಸ್ ಆಪ್ಟಿಕಲ್ ಇನ್-ಬಾಡಿ ಇಮೇಜ್ ಸ್ಟೆಬಿಲೈಸೇಶನ್ ಫೀಚರ್ಸ್ ಪಡೆದಿದೆ. ಇದರೊಂದಿಗೆ 4D ಫೋಕಸ್ -ವೈಡ್, ಸ್ಟೆಡ್‌ಫಾಸ್ಟ್, AF ಕಾರ್ಯಕ್ಷಮತೆ ಹೊಂದಿದ್ದು, ಇದನ್ನು ನೀವು 1,29,990ರೂ.ಗಳಿಗೆ ಖರೀದಿ ಮಾಡಬಹುದು. ಇದರ ಸಾಮಾನ್ಯ ದರ 1,67,990ರೂ.ಗಳಾಗಿದೆ.
DJI ಓಸ್ಮೋ ಆಕ್ಷನ್ 4 ಸ್ಟ್ಯಾಂಡರ್ಡ್ ಕಾಂಬೊ: 1/1.3-ಇಂಚಿನ ಸೆನ್ಸರ್ ಆಯ್ಕೆಯೊಂದಿದೆ 10-ಬಿಟ್ ಮತ್ತು ಡಿ-ಲಾಗ್ ಎಂ ಬಣ್ಣದ ಕಾರ್ಯಕ್ಷಮತೆ, ತಡೆರಹಿತ ಪೋಸ್ಟ್-ಪ್ರೊಡಕ್ಷನ್‌ನೊಂದಿಗೆ ಅತ್ಯುತ್ತಮ ಅನುಭವ ಪಡೆದುಕೊಳ್ಳಬಹುದು. ಇದರೊಂದಿಗೆ ಈ ಕ್ಯಾಮೆರಾವನ್ನು ಎಂತಹ ತಾಪಮಾನದಲ್ಲಾದರೂ ಬಳಕೆ ಮಾಡಬಹುದಾಗಿದೆ. ಇನ್ನು 44,999ರೂ.ಗಳ ಸಾಮಾನ್ಯ ಬೆಲೆ ಹೊಂದಿರುವ ಈ ಕ್ಯಾಮೆರಾ ಈಗ 38,990ರೂ.ಗಳ ಡಿಸ್ಕೌಂಟ್ ಬೆಲೆಗೆ ಲಭ್ಯ.
ಬ್ಯಾಂಕ್ ಆಫರ್: ಈ ವಿಶೇಷ ಕ್ಯಾಮೆರಾಗಳ ಮೇಲೆ ಅಮೆಜಾನ್ ಬ್ಯಾಂಕ್ ಆಫರ್ ಅನ್ನೂ ಸಹ ನೀಡಿದೆ. ಅಂದರೆ HDFC ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ EMI ವಹಿವಾಟುಗಳ ಮೂಲಕ ಖರೀದಿ ಮಾಡುವ ಗ್ರಾಹಕರಿಗೆ 4,000 ರೂ.ಗಳ ವರೆಗೆ ತ್ವರಿತ ರಿಯಾಯಿತಿಯನ್ನು ನೀಡಲಾಗುತ್ತದೆ. ಅಷ್ಟು ಮಾತ್ರವಲ್ಲದೆ 12 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಆಯ್ಕೆಯನ್ನು ನೀಡಲಾಗಿದೆ.
World Photography Day Huge Discount on these Cameras on Amazon.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 11:27 am
Mangalore Correspondent
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm