ಬ್ರೇಕಿಂಗ್ ನ್ಯೂಸ್
07-08-23 07:57 pm Source: Gizbot Kannada ಡಿಜಿಟಲ್ ಟೆಕ್
ಭಾರತದಲ್ಲಿ ಈಗಾಗಲೇ ಸಾಕಷ್ಟು ಫೋನ್‌ಗಳು ಒಂದಲ್ಲಾ ಒಂದು ವಿಶೇಷತೆಯೊಂದಿಗೆ ಜನಪ್ರಿಯತೆ ಗಳಿಸಿಕೊಳ್ಳುತ್ತಿವೆ. ಈ ನಡುವೆ ಐಕ್ಯೂನ ಫೋನ್‌ಗಳು ಸಹ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಈ ನಡುವೆ ಕೆಲವೇ ದಿನಗಳಲ್ಲಿ ಐಕ್ಯೂ Z7 ಪ್ರೊ 5G ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ. ಆದರೆ, ಈ ಫೋನ್ ಬಿಡುಗಡೆ ಆಗುವ ಮುನ್ನವೇ ತನ್ನ ನೋಟದಿಂದ ಗಮನ ಸೆಳೆದಿದೆ.
ಹೌದು, ಐಕ್ಯೂ (iQoo) ಶೀಘ್ರದಲ್ಲೇ ಭಾರತದಲ್ಲಿ ಐಕ್ಯೂ Z7 ಪ್ರೊ 5G ಅನ್ನು ಲಾಂಚ್ ಮಾಡಲಿದೆ. ಕಂಪೆನಿಯು Z ಸರಣಿಯಲ್ಲಿ ತರಲಾಗುತ್ತಿರುವ ಹೊಸ ಸ್ಮಾರ್ಟ್‌ಫೋನ್‌ನ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಐಕ್ಯೂ ಇಂಡಿಯಾದ ಸಿಇಒ ನಿಪುನ್ ಮರಿಯಾ ಮುಂಬರುವ ಈ ಡಿವೈಸ್ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಹಾಗಿದ್ರೆ, ಲೀಕ್ ಮಾಹಿತಿ ಪ್ರಕಾರ ಏನೆಲ್ಲಾ ಫಿಚರ್ಸ್ ಹೊಂದಿರಲಿದೆ, ಶೈಲಿ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.
ಐಕ್ಯೂ ಭಾರತದಲ್ಲಿ ಐಕ್ಯೂ Z7 ಪ್ರೊ 5G (iQoo Z7 Pro 5G) ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಅದರಲ್ಲೂ ಮುಂದಿನ ವಾರ ಕಂಪೆನಿಯು ಹೊಸ 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಬಹುದು ಎಂದು ತಿಳಿದುಬಂದಿದೆ. ಯಾಕೆಂದರೆ ಈ ಫೋನ್ ನ ಟೀಸರ್ ಅನ್ನು ಆನ್‌ಲೈನ್ ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ನಲ್ಲಿ ಬಿಡುಗಡೆ ಮಾಡಿದ್ದು, ನೋಟಿಫೈ ಆಯ್ಕೆ ನೀಡಲಾಗಿದೆ.
ಅಮೆಜಾನ್‌ನಲ್ಲಿ ಬಿಡುಗಡೆಯಾದ ಟೀಸರ್‌ನಲ್ಲಿ ಐಕ್ಯೂ Z7 ಪ್ರೊ 5G ನೋಟಿಫೈ ಮಿ ಬಟನ್ ಎಂಬ ಬಟನ್ ಆಯ್ಕೆ ನೀಡಲಾಗಿದೆ. ಅಂದರೆ, ನೀವು ಈ ಫೋನ್ ಖರೀದಿಸಲು ಆಸಕ್ತಿ ಹೊಂದಿದ್ದರೆ ಈ ಬಟನ್ ಒತ್ತುವ ಮೂಲಕ ಈ ಫೋನ್ ಯಾವಾಗ ಲಾಂಚ್ ಆಗುತ್ತವೆ ಹಾಗೂ ಯಾವಾಗ ಮಾರಾಟಕ್ಕೆ ಲಭ್ಯ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಪ್ರಮುಖ ವಿಷಯ ಏನೆಂದರೆ ಐಕ್ಯೂ ಈ ಹೊಸ ಸ್ಮಾರ್ಟ್‌ಫೋನ್ ಆಗಿರುವ ಐಕ್ಯೂ Z7 ಪ್ರೊ 5G ಅನ್ನು ಕಂಪನಿಯ Z ಸರಣಿಯ ಅಡಿಯಲ್ಲಿ ಲಾಂಚ್ ಮಾಡುತ್ತಿದೆ.
ಆದಾಗ್ಯೂ ಐಕ್ಯೂ ಇಂಡಿಯಾ ಸಿಇಒ
ನಿಪುನ್ ಮರಿಯಾ ಅವರು ತಮ್ಮ
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್
ಎಕ್ಸ್‌ನಲ್ಲಿ ಮುಂಬರುವ ಡಿವೈಸ್ ಬಗ್ಗೆ
ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆಯೇ
ಹೊರತು ಇದರ ಬಗ್ಗೆ ಯಾವುದೇ
ಕೊಂಚವೂ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಆದರೂ ಸಹ ಕೆಲವು ವರದಿಗಳ ಪ್ರಕಾರ ಈ
ಫೋನ್ ಈ ರೀತಿಯ ಫೀಚರ್ಸ್
ಹೊಂದಿರಲಿದೆ ಎನ್ನಲಾಗಿದೆ.
ಈ ಸ್ಮಾರ್ಟ್‌ಫೋನ್ ಬಾಗಿದ ಅಂದರೆ ಕರ್ವ್ಡ್ ಡಿಸ್‌ಪ್ಲೇಯೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಜೊತೆಗೆ ಫೋನ್‌ನಲ್ಲಿ ಪಂಚ್ ಹೋಲ್ ಕ್ಯಾಮೆರಾ ಆಯ್ಕೆ ಸಹ ಇದೆ ಎನ್ನಲಾಗಿದೆ. ಈ ಫೋನ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ರೆಸಲ್ಯೂಶನ್ ಆಯ್ಕೆಯ ಅಮೋಲೆಡ್ ಡಿಸ್‌ಪ್ಲೇ ಹೊಂದಿರಬಹುದು ಎಂದು ಊಹಿಸಲಾಗಿದ್ದು, ಇದರೊಂದಿಗೆ 120Hz ರಿಫ್ರೆಶ್ ರೇಟ್ ಇರಲಿದೆ ಎಂದೂ ಸಹ ವರದಿಯಾಗಿದೆ.
ಉಳಿದಂತೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಚಿಪ್‌ಸೆಟ್ ಪ್ರೊಸೆಸರ್ ಬಲ ಪಡೆದುಕೊಂಡಿರಲಿದೆ ಎನ್ನಲಾಗಿದ್ದು, 8GB + 128GB ಹಾಗೂ 12GB + 256GB ಇಂಟರ್ ಸ್ಟೋರೇಜ್‌ನ ವೇರಿಯಂಟ್‌ಗಳಲ್ಲಿ ಈ ಫೋನ್ ಲಭ್ಯ ಇರಲಿದೆ ಎಂದು ಹೇಳಲಾಗುತ್ತಿದೆ. ಉಳಿದಂತೆ ಬೆಲೆ ಹಾಗೂ ಕ್ಯಾಮೆರಾ ರಚನೆ ಮತ್ತು ಬ್ಯಾಟರಿ ಸಾಮರ್ಥ್ಯದ ಬಗ್ಗೆ ಯಾವುದೇ ಲೀಕ್ ವಿವರ ತಿಳಿದುಬಂದಿಲ್ಲ.
ಐಕ್ಯೂ ನಿಯೋ 7 ಪ್ರೊ ಲಾಂಚ್: ಈ ನಡುವೆ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಐಜ್ಯೂ ನಿಯೋ 7 ಪ್ರೊ ( iQoo Neo 7 Pro ) ಸ್ಮಾರ್ಟ್ ಫೋನ್ ಅನ್ನು ಸಹ ಲಾಂಚ್ ಮಾಡಲಾಗಿದೆ. ಈ ಫೋನ್‌ನ ಆರಂಭಿಕ ಬೆಲೆ 34,999 ರೂ.ಗಳಾಗಿದೆ. ಈ ಮೂಲಕ ಈ ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8+ ಜನ್ 1 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ.
ಉಳಿದಂತೆ ಈ ಫೋನ್ ಡ್ಯುಯಲ್ ಸಿಮ್ ಬೆಂಬಲದೊಂದಿಗೆ ಕಾಣಿಸಿಕೊಂಡಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾದೊಂದಿಗೆ f/2.45 ದ್ಯುತಿರಂಧ್ರದೊಂದಿಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಈ ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದೆ.
iQoo Z7 Pro 5G Smartphone will be Launched in India Soon Details.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 11:27 am
Mangalore Correspondent
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm