ಬ್ರೇಕಿಂಗ್ ನ್ಯೂಸ್
11-07-23 07:30 pm Source: Gizbot Kannada ಡಿಜಿಟಲ್ ಟೆಕ್
ಸ್ಮಾರ್ಟ್‌ವಾಚ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ನಾಯ್ಸ್ ಕಂಪೆನಿ ಹೊಸ ನಾಯ್ಸ್‌ಫಿಟ್ ಟ್ವಿಸ್ಟ್ ಪ್ರೊ ಸ್ಮಾರ್ಟ್‌ವಾಚ್ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ವಾಚ್ ಬಳಕೆದಾರರಿಗೆ ಹಲವು ಅನುಕೂಲಕರ ಹೆಲ್ತ್‌ಫೀಚರ್ಸ್ ಹಾಗೂ ನವೀನ ಮಾದರಿಯ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್ IP68 ರೇಟಿಂಗ್ ಹೊಂದಿದ್ದು, ದೂಳು ಮತ್ತು ನೀರಿನಿಂದ ರಕ್ಷಣೆ ನೀಡಲಿದೆ.
ಹೌದು, ನಾಯ್ಸ್‌ಫಿಟ್ ಟ್ವಿಸ್ಟ್ ಪ್ರೊ ಸ್ಮಾರ್ಟ್‌ವಾಚ್ ಐದು ವಿಭಿನ್ನ ಬಣ್ಣಗಳ ಮೂಲಕ ಬಿಡುಗಡೆಯಾಗಿದೆ. ಇನ್ನು ಸ್ಮಾರ್ಟ್‌ವಾಚ್ ವಸಿಲಿಕೋನ್ ಮತ್ತು ಲೆದರ್ ಸ್ಟ್ರಾಪ್ ಆಯ್ಕೆಗಳಲ್ಲಿ ಬರಲಿದೆ. ಇದು 'ಟ್ರೂ ಸಿಂಕ್' ಟೆಕ್ನಾಲಜಿಯಿಂದ ನಡೆಸಲ್ಪಡುವ ಬ್ಲೂಟೂತ್ ಕರೆಯನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ನಾಯ್ಸ್‌ಫಿಟ್ ಟ್ವಿಸ್ಟ್ ಪ್ರೊ ಸ್ಮಾರ್ಟ್‌ವಾಚ್ ಫೀಚರ್ಸ್
ನಾಯ್ಸ್‌ಫಿಟ್ ಟ್ವಿಸ್ಟ್ ಪ್ರೊ ಸ್ಮಾರ್ಟ್ ವಾಚ್ 1.4 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ವೃತ್ತಾಕಾರದ ಡಯಲ್ ಅನ್ನು ಹೊಂದಿದ್ದು, 240x240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಈ ಸ್ಮಾರ್ಟ್ ವಾಚ್ ಮೆಟಾಲಿಕ್ ಡಯಲ್ ಅನ್ನು ಪಡೆದುಕೊಂಡಿದೆ. ಇದಲ್ಲದೆ ಸ್ಮಾರ್ಟ್‌ವಾಚ್ ಸಿಲಿಕೋನ್ ಮತ್ತು ಲೆದರ್ ಸ್ಟ್ರಾಪ್ ಆಯ್ಕೆಗಳಲ್ಲಿ ಬರಲಿದೆ. ಇನ್ನು ಸ್ಮಾರ್ಟ್‌ವಾಚ್ ಎರಡು ಫಿಸಿಕಲ್ ಸೈಡ್ ಬಟನ್‌ಗಳನ್ನು ಹೊಂದಿದೆ.
ಇದು 'ಟ್ರೂ ಸಿಂಕ್' ತಂತ್ರಜ್ಞಾನದಿಂದ ನಡೆಸಲ್ಪಡುವ ಬ್ಲೂಟೂತ್ ಕರೆಯನ್ನು ಬೆಂಬಲಿಸುತ್ತದೆ. ಇದರಿಂದ ಬಳಕೆದಾರರು ವಾಚ್‌ನಿಂದ ನೇರವಾಗಿ ಫೋನ್ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ ಹೆಚ್ಚುವರಿಯಾಗಿ, ಸ್ಮಾರ್ಟ್ ವಾಚ್ ಬ್ಲೂಟೂತ್ 5.3 ಕನೆಕ್ಟಿವಿಟಿಯನ್ನು ನೀಡಲಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್ 100ಕ್ಕೂ ಹೆಚ್ಚು ಕಸ್ಟಮೈಸ್ಡ್ ವಾಚ್‌ಫೇಸ್‌ಗಳನ್ನು ಒಳಗೊಂಡಿದೆ. ಅಲ್ಲದೆ ರನ್ನಿಂಗ್, ಸೈಕ್ಲಿಂಗ್ ಮತ್ತು ಟ್ರೆಕ್ಕಿಂಗ್ ಸೇರಿದಂತೆ 120 ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದೆ.
ಇನ್ನು ಈ ಸ್ಮಾರ್ಟ್‌ವಾಚ್ ಹೆಲ್ತ್ ಫೀಚರ್ಸ್‌ಗಳಿಗೆ ಕೂಡ ಸಾಕಷ್ಟು ಅವಕಾಶವನ್ನು ನೀಡಿದೆ. ಇದರಲ್ಲಿ ಆರೋಗ್ಯ ಮೇಲ್ವಿಚಾರಣಾ ಸೆನ್ಸಾರ್‌ಗಳಾದ SpO2 ಮಾನಿಟರಿಂಗ್ ಸೆನ್ಸಾರ್, ಹಾರ್ಟ್‌ಬೀಟ್ ಟ್ರ್ಯಾಕಿಂಗ್ ಮತ್ತು ಸ್ಲಿಪ್ ಮಾನಿಟರಿಂಗ್ ಸೆನ್ಸಾರ್‌ಗಳನ್ನು ಸಹ ಹೊಂದಿದೆ. ಈ ಸ್ಮಾರ್ಟ್ ವಾಚ್ ನೀರು ಮತ್ತು ಧೂಳಿನಿಂದ ರಕ್ಷಣೆ ಪಡೆಯುವುದಕ್ಕಾಗಿ IP68 ರೇಟಿಂಗ್ ಅನ್ನು ಪಡೆದಿದೆ.
ನಾಯ್ಸ್‌ಫಿಟ್ ಟ್ವಿಸ್ಟ್ ಪ್ರೊ ಸ್ಮಾರ್ಟ್‌ವಾಚ್ 300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ ಒಂದು ವಾರದವರೆಗಿನ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಅಷ್ಟೇ ಅಲ್ಲದೆ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 25 ದಿನಗಳವರೆಗೆ ಬ್ಯಾಟರಿ ಬ್ಯಾಕ್‌ಅಪ್ ನೀಡಲಿದೆ ಎಂದು ಹೇಳಲಾಗಿದೆ. ಆದರೆ ಈ ಸ್ಮಾರ್ಟ್‌ವಾಚ್ ಸಂಪೂರ್ಣವಾಗಿ ಚಾರ್ಜ್ ಆಗಲು ಸುಮಾರು ಎರಡು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.
ಇದಲ್ಲದೆ, ಸ್ಮಾರ್ಟ್‌ವಾಚ್ ಬಳಕೆದಾರರು ನಾಯ್ಸ್‌ಫಿಟ್ ಅಪ್ಲಿಕೇಶನ್ ಮೂಲಕ ತಮ್ಮ ಚಟುವಟಿಕೆಗಳು, ರೆಕಾರ್ಡ್ ಡೇಟಾವನ್ನು ಟ್ರ್ಯಾಕ್ ಮಾಡಬಹುದು. ಇದಲ್ಲದೆ ಈ ಸ್ಮಾರ್ಟ್‌ವಾಚ್‌ನಲ್ಲಿ 'ಫೈಂಡ್ ಮೈ ಡಿವೈಸ್', ಕ್ಯಾಮೆರಾ ಶಟರ್, ವರ್ಲ್ಡ್ ಕ್ಲಾಕ್, ರಿಮೋಟ್ ಮ್ಯೂಸಿಕ್ ಕಂಟ್ರೋಲ್, ರಿಸ್ಟ್ ಅವೇಕ್ ನಂತಹ ಫೀಚರ್ಸ್‌ಗಳನ್ನು ಸಹ ಒದಗಿಸಲಾಗಿದೆ.
ಭಾರತದಲ್ಲಿ ನಾಯ್ಸ್‌ಫಿಟ್ ಟ್ವಿಸ್ಟ್ ಪ್ರೊ ಸ್ಮಾರ್ಟ್‌ವಾಚ್ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ನಾಯ್ಸ್‌ಫಿಟ್ ಟ್ವಿಸ್ಟ್ ಪ್ರೊ ಸ್ಮಾರ್ಟ್‌ವಾಚ್ 2,199ರೂ.ಬೆಲೆಯನ್ನು ಪಡೆದುಕೊಂಡಿದೆ. ಸದ್ಯ ಈ ಸ್ಮಾರ್ಟ್‌ವಾಚ್ ನಾಯ್ಸ್‌ಫಿಟ್ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಲೈವ್ ಆಗಿದೆ. ಇನ್ನು ಈ ಸ್ಮಾರ್ಟ್‌ವಾಚ್ ಕ್ಲಾಸಿಕ್ ಬ್ಲ್ಯಾಕ್, ಕ್ಲಾಸಿಕ್ ಬ್ಲೂ, ಕ್ಲಾಸಿಕ್ ಬ್ರೌನ್, ಜೆಟ್ ಬ್ಲ್ಯಾಕ್ ಮತ್ತು ಮೆಟಲ್ ಬ್ಲೂ ಕಲರ್ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.
Noisefit Twist pro Smartwatch Launched in India Price and Features Details.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm