ಬ್ರೇಕಿಂಗ್ ನ್ಯೂಸ್
23-06-23 08:18 pm Source: Gizbot ಡಿಜಿಟಲ್ ಟೆಕ್
ಸ್ಮಾರ್ಟ್‌ವಾಚ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಫೈರ್‌ಬೋಲ್ಟ್ ಹೊಸ ಸ್ಮಾರ್ಟ್‌ವಾಚ್ ಪರಿಚಯಿಸಿದೆ. ವಿಭಿನ್ನ ಶ್ರೇಣಿಯ ಸ್ಮಾರ್ಟ್‌ವಾಚ್‌ಗಳಿಂದಲೇ ಗಮನಸೆಳೆದಿರುವ ಫೈರ್‌ಬೋಲ್ಟ್ ಇದೀಗ ಫೈರ್‌ಬೋಲ್ಟ್ ಅಪೊಲೊ 2 ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಒಳಗೊಂಡಿದೆ.
ಹೌದು, ಫೈರ್‌ಬೋಲ್ಟ್ ಅಪೊಲೊ 2 ಸ್ಮಾರ್ಟ್‌ವಾಚ್ ಭಾರತಕ್ಕೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ವಾಚ್ ಮೆಟಲ್ ಬಾಡಿಯನ್ನು ಹೊಂದಿದ್ದು, ಸಿಲಿಕಾನ್ ಪಟ್ಟಿಗಳಿಂದ ತಯಾರಿಸಲಾಗಿದೆ. ಇನ್ನು ಸ್ಮಾರ್ಟ್‌ವಾಚ್ 7ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇದು 110ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಫೈರ್‌ಬೋಲ್ಟ್ ಅಪೊಲೊ 2 ಸ್ಮಾರ್ಟ್‌ವಾಚ್ ಫೀಚರ್ಸ್ ವಿವರ: ಫೈರ್‌ಬೋಲ್ಟ್ ಅಪೊಲೊ 2 ಸ್ಮಾರ್ಟ್‌ವಾಚ್ 1.43 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಅಮೋಲೆಡ್ ಡಿಸ್‌ಪ್ಲೇ ಆಗಿದ್ದು 466 x 466 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ನೀಡಲಿದೆ. ಸ್ಮಾರ್ಟ್‌ವಾಚ್ ಸ್ಕ್ರೀನ್ ವೃತ್ತಾಕಾರದ ಪ್ಯಾನಲ್ ಆಗಿದ್ದು, ಪಟ್ಟಿಗಳನ್ನು ಸಿಲಿಕಾನ್‌ನಿಂದ ತಯಾರಿಸಲಾಗಿದೆ.
ಈ ಸ್ಮಾರ್ಟ್‌ವಾಚ್‌ನ ಮೇನ್ ಹೈಲೈಟ್ ಅಂದರೆ ಬ್ಲೂಟೂತ್ ಕಾಲಿಂಗ್ ಫೀಚರ್ಸ್. ಇದರಿಂದ ಸ್ಮಾರ್ಟ್‌ಫೋನ್ ಕರೆಗಳನ್ನು ವಾಚ್ ಮೂಲಕವೇ ಸ್ವೀಕರಿಸಬಹುದಾಗಿದೆ. ಇದಕ್ಕಾಗಿ ಸ್ಮಾರ್ಟ್‌ವಾಚ್‌ನಲ್ಲಿ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ಅಳವಡಿಸಲಾಗಿದೆ. ಇದಲ್ಲದೆ, ಸ್ಮಾರ್ಟ್‌ವಾಚ್ ಹೆಲ್ತ್‌ಗೆ ಸಂಬಂಧಿಸಿದ ವಿವಿದ ಸೆನ್ಸಾರ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಪ್ರಮುಖವಾಗಿ ಹೃದಯ ಬಡಿತ ಮತ್ತು SpO2 ಸೆನ್ಸಾರ್ ಹಾಗೂ ಸ್ತ್ರೀಯರ ಆರೋಗ್ಯವನ್ನು ಟ್ರ್ಯಾಕ್ ಮಾಡುವ ಸೆನ್ಸಾರ್ ನೀಡಲಾಗಿದೆ.
ಫೈರ್‌ಬೋಲ್ಟ್ ಅಪೊಲೊ 2 ಸ್ಮಾರ್ಟ್‌ವಾಚ್‌ನಲ್ಲಿ 110ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳಿಗೆ ಬೆಂಬಲವನ್ನು ನೀಡಲಾಗಿದೆ. ಇದು IP67 ರೇಟಿಂಗ್ ಹೊಂದಿರುವುದರಿಂದ ನೀರು ಮತ್ತು ಧೂಳಿನಿಂದ ರಕ್ಷಣೆ ಪಡೆಯಲಿದೆ. ಜೊತೆಗೆ ಸ್ಮಾರ್ಟ್‌ವಾಚ್‌ನಲ್ಲಿ ಕಸ್ಟಮೈಸ್‌ಮಾಡಬಹುದಾದ ವಾಚ್‌ಫೇಸ್‌ಗಳು, AI ವಾಯ್ಸ್ ಅಸಿಸ್ಟೆಂಟ್, ಸ್ಮಾರ್ಟ್ ನೋಟಿಫಿಕೇಶನ್ ಮತ್ತು ಗೇಮ್‌ಗಳನ್ನು ಸಹ ನೀಡಲಾಗಿದೆ.
ಇನ್ನು ಬ್ಯಾಟರಿ ಬ್ಯಾಕ್‌ಅಪ್ ವಿಚಾರಕ್ಕೆ ಬಂದರೆ ಈ ಸ್ಮಾರ್ಟ್‌ವಾಚ್ ಎಲ್ಲರಗಿಂತ ಭಿನ್ನವಾಗಿದೆ. ಏಕೆಂದರೆ ಈ ಸ್ಮಾರ್ಟ್‌ವಾಚ್‌ನಲ್ಲಿ ನಿಮಗೆ ಬರೋಬ್ಬರಿ 7 ದಿನಗಳ ಬ್ಯಾಟರಿ ಬಾಳಿಕೆ ಸಿಗಲಿದೆ. ಸದ್ಯ ಈ ಸ್ಮಾರ್ಟ್‌ವಾಚ್ ಭಾರತದಲ್ಲಿ ಗಾಢ ಬೂದು, ಬೂದು ಮತ್ತು ಗುಲಾಬಿ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದನ್ನು ನೀವು ಫ್ಲಿಪ್‌ಕಾರ್ಟ್.ಕಾಮ್‌ನಲ್ಲಿ ಪರಿಚಯಾತ್ಮಕ ಬೆಲೆ 2,499ರೂ.ಗಳಿಗೆ ಖರೀದಿಸಬಹುದು. ಇದನ್ನು ಫೈರ್‌ಬೋಲ್ಟ್‌ನ ಅಧಿಕೃತ ವೆಬ್‌ಸೈಟ್ ಮೂಲಕವೂ ಕೂಡ ಖರೀದಿಸಬಹುದಾಗಿದೆ.
ಇದಲ್ಲದೆ ಫೈರ್-ಬೋಲ್ಟ್ ಕಂಪೆನಿ ಇತ್ತೀಚಿಗೆ ಹೊಸ ಫೈರ್‌ಬೋಲ್ಟ್ ಅಲ್ಟಿಮೇಟ್ ಸ್ಮಾರ್ಟ್‌ವಾಚ್ ಪರಿಚಯಿಸಿತ್ತು. ಈ ಸ್ಮಾರ್ಟ್‌ವಾಚ್ 1.39 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 240 x 240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ವಾಚ್ ಮಲ್ಟಿ ವಾಚ್ ಫೇಸ್ ಆಯ್ಕೆಗಳನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್ ನಯವಾದ ಮತ್ತು ಸೊಗಸಾದ ವೃತ್ತಾಕಾರದ ಡಯಲ್ ವಿನ್ಯಾಸದೊಂದಿಗೆ ಬರಲಿದ್ದು, ಪ್ರೀಮಿಯಂ ಲುಕ್‌ನಲ್ಲಿ ಗಮನಸೆಳೆದಿದೆ.
ಇನ್ನು ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಒಳಗೊಂಡಿದೆ. ಇದಕ್ಕಾಗಿ ಇನ್‌ಬಿಲ್ಟ್ ಮೈಕ್ರೊಫೋನ್, ಸ್ಪೀಕರ್ ಮತ್ತು ಬ್ಲೂಟೂತ್ 5.0 ಪ್ರೋಟೋಕಾಲ್ ಅನ್ನು ಒಳಗೊಂಡಿದೆ. ಇದರಿಂದ ಸ್ಮಾರ್ಟ್‌ವಾಚ್ ಮೂಲಕವೇ ನಿಮ್ಮ ಫೋನ್ ಕರೆಗಳನ್ನು ಸ್ವೀಕರಿಸುವ ಮತ್ತು ತಿರಸ್ಕರಿಸುವ ಕೆಲಸ ಮಾಡಬಹುದಾಗಿದೆ. ಜೊತೆಗೆ ಈ ಸ್ಮಾರ್ಟ್ ವಾಚ್ ಮೀಸಲಾದ ಡಯಲ್ ಪ್ಯಾಡ್ ಅನ್ನು ಒಳಗೊಂಡಿದೆ. ಅಲ್ಲದೆ ಕಾಲ್ ಹಿಸ್ಟರಿ ಮತ್ತು ಕನೆಕ್ಟಿವಿಟಿ ಸಿಂಕ್ರೊನೈಸೇಶನ್ ಅನ್ನು ಬೆಂಬಲಿಸಲಿದೆ.
Fire Boltt Apollo 2 Smartwatch launched its design is completely different.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm