ಬ್ರೇಕಿಂಗ್ ನ್ಯೂಸ್
22-06-23 07:15 pm Source: Gizbot ಡಿಜಿಟಲ್ ಟೆಕ್
ಒಪ್ಪೋ (Oppo) ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೇಗೆ ಜನಪ್ರಿಯತೆ ಪಡೆದುಕೊಂಡಿವೆಯೋ ಅದೇ ರೀತಿ ಒಪ್ಪೋ ಪ್ಯಾಡ್ ಸಹ ತನ್ನದೇ ಆದ ಬೇಡಿಕೆ ಸೃಷ್ಟಿಸಿಕೊಂಡಿದ್ದು, ಈ ನಡುವೆ ಗ್ರಾಹಕರಿಗೆ ಅನುಕೂಲ ಆಗುವ ಹಾಗೆ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಒಪ್ಪೋ ಪ್ಯಾಡ್‌ಗೆ 48% ರಿಯಾಯಿತಿ ಘೋಷಣೆ ಮಾಡಲಾಗಿದೆ.
ಹೌದು, ಒಪ್ಪೋ ಪ್ಯಾಡ್ ಏರ್ (Oppo Pad Air) ಭಾರೀ ರಿಯಾಯಿತಿ ಘೋಷಣೆ ಮಾಡಲಾಗಿದೆ. ಈ ಡಿವೈಸ್ 2000x1200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದ್ದು, 5MP ವೈಡ್-ಆಂಗಲ್ ಕ್ಯಾಮೆರಾದೊಂದಿಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 CPU ಪ್ರೊಸೆಸರ್ ಬಲ ಪಡೆದುಕೊಂಡಿದೆ. ಹಾಗಿದ್ರೆ, ಬನ್ನಿ ಈ ಟ್ಯಾಬ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರವನ್ನು ಗಮನಿಸೋಣ.
ಒಪ್ಪೋ ಪ್ಯಾಡ್ ಏರ್ ಡಿಸ್‌ಪ್ಲೇ ವಿವರ: ಈ ಡಿವೈಸ್ ಡೊಡ್ಡ ಡಿಸ್‌ಪ್ಲೇ ಹೊಂದಿದೆ. ಅಂದರೆ 10.36 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು 225ppi ಪಿಕ್ಸೆಲ್ ಸಾಂದ್ರತೆ ಪಡೆದುಕೊಂಡಿದೆ. ಜೊತೆಗೆ 2000x1200 ಪಿಕ್ಸೆಲ್ ಸ್ಕ್ರೀನ್ ಸಾಮರ್ಥ್ಯ ಹೊಂದಿದ್ದು, ಅತ್ಯುತ್ತಮ ವಿಡಿಯೋಗಳನ್ನು ವೀಕ್ಷಣೆ ಮಾಡಲು ಹಾಗೂ ಮೀಟಿಂಗ್‌ಗಲ್ಲಿ ಭಾಗವಹಿಸಲು ಸಹಕಾರಿಯಾಗಿದೆ.
ಒಪ್ಪೋ ಪ್ಯಾಡ್ ಏರ್ ಪ್ರೊಸೆಸರ್ ಮಾಹಿತಿ: ಈ ಒಪ್ಪೋ ಪ್ಯಾಡ್ ಏರ್ ಟ್ಯಾಬ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಸಿಪಿಯು ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಎಂಟು-ಕೋರ್ ಸಿಪಿಯು ಮತ್ತು ಅಡ್ರಿನೊ 610 ಜಿಪಿಯು ಬಲ ಪಡೆದುಕೊಂಡಿದೆ. ಉಳಿದಂತೆ 4GB RAM ಆಯ್ಕೆ 64 GB ಇಂಟರ್ ಸ್ಟೋರೇಜ್ ಸಾಮರ್ಥ್ಯದಿಂದ ಕೂಡಿದೆ.
ಒಪ್ಪೋ ಪ್ಯಾಡ್ ಏರ್ ಕ್ಯಾಮೆರಾ ರಚನೆ: ಇದರ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಹಿಂಭಾಗದಲ್ಲಿ f/2.0 ದ್ಯುತಿರಂಧ್ರದೊಂದಿಗೆ 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಹೊಂದಿದ್ದು, ಡಿಜಿಟಲ್ ಜೂಮ್ ಆಯ್ಕೆ ಪಡೆದಿದೆ. ಆದರೆ, ಇದಕ್ಕೆ ಫ್ಲ್ಯಾಶ್ ಆಯ್ಕೆ ಇಲ್ಲ.ಆದರೆ, ಹೆಚ್ಚುವರಿಯಾಗಿ 80 ಡಿಗ್ರಿ ಫೀಲ್ಡ್ ಆಫ್ ವ್ಯೂನೊಂದಿಗೆ ಕಾಣಿಸಿಕೊಂಡಿದೆ. ಜೊತೆಗೆ f/2.2 ದ್ಯುತಿರಂಧ್ರ ಹೊಂದಿರುವ 5 ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.
ಒಪ್ಪೋ ಪ್ಯಾಡ್ ಏರ್ ಬ್ಯಾಟರಿ ಹಾಗೂ ಇತರೆ: ಈ ಡಿವೈಸ್ 7100mAh ಸಾಮರ್ಥ್ಯ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಈ ಮೂಲಕ ಉತ್ತಮ ಬ್ಯಾಕಪ್ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಯುಎಸ್‌ಬಿ, ಸ್ಟಿರಿಯೊ ಸ್ಪೀಕರ್‌ಗಳು, ವೈ-ಫೈ, ಮಲ್ಟಿ ಡಿವೈಸ್ ಕನೆಕ್ಷನ್ ಸೇರಿದಂತೆ ಅನೇಕ ಪ್ರಮುಖ ಕನೆಕ್ಟಿಟಿವಿ ಸೌಲಭ್ಯ ಪಡೆದುಕೊಂಡಿದೆ. ಇದರ ಆಫರ್ ಬೆಲೆ ಗಮನಿಸೋಣ ಬನ್ನಿ.
ಒಪ್ಪೋ ಪ್ಯಾಡ್ ಏರ್ ಬೆಲೆ ಹಾಗೂ ಆಫರ್ ವಿವರ: ಈ ಟ್ಯಾಬ್ಲೆಟ್‌ನ ಸಾಮಾನ್ಯ ಬೆಲೆ 29,999ರೂ.ಗಳಾಗಿದೆ. ಆದರೆ, ಇದನ್ನು ನೀವು ಕೇವಲ 15,499 ರೂ.ಗಳಿಗೆ ಕೊಂಡುಕೊಳ್ಳಬಹುದು. ಯಾಕೆಂದರೆ ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್‌ನಲ್ಲಿ 48% ರಿಯಾಯಿತಿ ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ಆಫರ್ ಸಹ ಲಭ್ಯವಿದೆ. ವಿನಿಮಯದಲ್ಲಿ ನೀವು 14,250ರೂ ವರೆಗೆ ಉಳಿಸಬಹುದಾಗಿದೆ.
ವಿವೋ Y1005G: ವಿವೋ Y1005G ಸ್ಮಾರ್ಟ್‌ಫೋನ್‌ಗೂ ಸಹ 20% ರಿಯಾಯಿತಿ ನೀಡಲಾಗಿದ್ದು, ಈ ಫೋನ್‌ಸ ಸಾಮಾನ್ಯ ಬೆಲೆ 29,999 ರೂ.ಗಳಾಗಿದೆ. ಆದರೆ, 23,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ವಿನಿಮಯ ಆಫರ್‌ನಲ್ಲಿ 22,250ರೂ.ಗಳನ್ನು ಉಳಿಕೆ ಮಾಡಬಹುದಾಗಿದೆ. ಇನ್ನು ಈ ಫೋನ್ 6.38 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ.
Oppo Pad Air got 48 Percent Discount in Amazon check price specs.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 01:58 pm
Mangalore Correspondent
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm