ಫೆಬ್ರವರಿ 6 ರಂದು ದೇಶದಲ್ಲಿ Poco X5 Pro ಸ್ಮಾರ್ಟ್‌ಫೋನ್ ಆಗಮನ!..ಇಲ್ಲಿದೆ ಫುಲ್ ಡೀಟೇಲ್ಸ್!

02-02-23 07:08 pm       Source: Vijayakarnataka   ಡಿಜಿಟಲ್ ಟೆಕ್

12GB RAM ಮತ್ತು 512GB ವರೆಗಿನ ಸ್ಟೋರೇಜ್‌ ಜೊತೆಗೆ ಜೋಡಿಸಲಾಗಿರುವ ಕ್ವಾಲ್ಕಾಮ್ Snapdragon 778G ಪ್ರೊಸೆಸರ್ ಹೊಂದಿರುವ ಈ Poco X5 Pro ಸ್ಮಾರ್ಟ್‌ಫೋನ್ MIUI 14 ಜೊತೆಗೆ Android 12 ರನ್‌ ಆಗಲಿದೆ ಎಂದು ಹೇಳಲಾಗಿದೆ.

ಭಾರತದ ಜನಪ್ರಿಯ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳಲ್ಲಿ ಒಂದಾದ Poco ಕಂಪೆನಿ ದೇಶದ ಮಾರುಕಟ್ಟೆಗೆ ತನ್ನ ಬಹುನಿರೀಕ್ಷಿತ Poco X5 Pro ಸ್ಮಾರ್ಟ್‌ಫೋನ್ ಪರಿಚಯಿಸುವ ದಿನಾಂಕವನ್ನು ಘೋಷಿಸಿದೆ. ದೇಶದಲ್ಲಿ ಇದೇ ಫೆಬ್ರವರಿ 6 ರಂದು ಸಂಜೆ 5:30PM ಕ್ಕೆ ನೂತನ Poco X5 Pro ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸುವುದಾಗಿ ಪೊಕೊ ಇಂಡಿಯಾ ಸಂಸ್ಥೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದು, ಜನಪ್ರಿಯ ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರು Poco X5 Pro ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಬಗ್ಗೆ ಚಿತ್ರಗಳಿಂದ ತಿಳಿದುಬಂದಿದೆ. ಈಗಾಗಲೇ ಹಲವು ಬಾರಿ ಸುದ್ದಿಯಾಗಿರುವ Poco X5 Pro ಸ್ಮಾರ್ಟ್‌ಫೋನ್ ಹೊಂದಿರಬಹುದಾದ ಹಲವು ವದಂತಿಗಳ ವೈಶಿಷ್ಟ್ಯಗಳಿಂದಲೇ ಗಮನಸೆಳೆದಿದ್ದು, ಈ ಬಗ್ಗೆ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.

ಹೇಗಿರಲಿದೆ ಹೊಸ Poco X5 Pro ಸ್ಮಾರ್ಟ್‌ಫೋನ್?
ದೇಶದಲ್ಲಿ ಬಿಡುಗಡೆಯಾಗುತ್ತಿರುವ Poco X5 Pro ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳ ಕುರಿತಂತೆ ಕಂಪೆನಿಯಿಂದ ಕೆಲವೇ ಕೆಲವು ಮಾಹಿತಿಗಳು ಬಹಿರಂಗವಾಗಿವೆ. ಈ ಹೊಸ Poco X5 Pro ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್‌ ಹೆಚ್‌ಡಿ+ OLED ಡಿಸ್‌ಪ್ಲೇ ಹೊಂದಿರುವುದು ಖಚಿತವಾಗಿದ್ದು, ಈ ಡಿಸ್‌ಪ್ಲೇಯು 1080×2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಜೊತೆಗೆ 120Hz ಅಡಾಪ್ಟಿವ್ ರಿಫ್ರೆಶ್ ರೇಟ್‌, HDR10+ ಬೆಂಬಲವನ್ನು ನೀಡಬಹುದು ಎಂದು ಹೇಳಲಾಗಿದೆ. ಹುಡ್ ಅಡಿಯಲ್ಲಿ, 12GB RAM ಮತ್ತು 512GB ವರೆಗಿನ ಸ್ಟೋರೇಜ್‌ ಜೊತೆಗೆ ಜೋಡಿಸಲಾಗಿರುವ ಕ್ವಾಲ್ಕಾಮ್ Snapdragon 778G ಪ್ರೊಸೆಸರ್ ಹೊಂದಿರುವ ಈ Poco X5 Pro ಸ್ಮಾರ್ಟ್‌ಫೋನ್ MIUI 14 ಜೊತೆಗೆ Android 12 ರನ್‌ ಆಗಲಿದೆ ಎಂದು ಹೇಳಲಾಗಿದೆ.

POCO X5 Pro Key Specifications Leaked Ahead Of Launch

ಕ್ಯಾಮೆರಾ ವಿಭಾಗದಲ್ಲಿ, ಹೊಸ Poco X5 Pro ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ ಎಂಬುದು ಬಿಡುಗಡೆಯಾಗಿರುವ ಅಧಿಕೃತ ಚಿತ್ರಗಳ ಮೂಲಕವೇ ತಿಳಿದುಬಂದಿದೆ. ಇದು 108MP ಸೆನ್ಸಾರ್ ಫ್ರಾಥಮಿಕ ಸೆನ್ಸಾರ್ ಜೊತೆಗೆ 8MP ಅಲ್ಟ್ರಾ-ವೈಡ್ ಸೆನ್ಸಾರ್ ಮತ್ತು 2MP ಮ್ಯಾಕ್ರೋ ಲೆನ್ಸ್‌ಗಳನ್ನು ಒಳಗೊಂಡಿರಲಿದೆ. ಹಾಗೂ, ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 16MP ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾ ಒಳಗೊಂಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇನ್ನುಳಿದಂತೆ, ಈ Poco X5 Pro ಸ್ಮಾರ್ಟ್‌ಫೋನಿನಲ್ಲಿ 67W ವೇಗದ ಚಾರ್ಜಿಂಗ್ ಬೆಂಬಲಿಸುವ 5,000 mAh ಸಾಮರ್ಥ್ಯದ ಬ್ಯಾಟರಿ, 5G, ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಹೆಡ್‌ಫೋನ್‌ ಜ್ಯಾಕ್ ಸೇರಿದಂತೆ ಇತ್ತೀಚಿನ ಕನೆಕ್ಟಿವಿಟಿ ಆಯ್ಕೆಗಳು ಇರಲಿವೆ ಎಂದು ಹೇಳಲಾಗಿದೆ.

POCO X4 Pro स्मार्टफोन 6 फरवरी को भारत में होगा लॉन्च, जानें स्पेसिफिकेशन्स  और कीमत

Poco X5 Pro ಸ್ಮಾರ್ಟ್‌ಫೋನ್ ಬೆಲೆ ಎಷ್ಟಿರಬಹುದು?
ಭಾರತದ ಮಾರುಕಟ್ಟೆಗೆ ಫೆಬ್ರವರಿ 6 ರಂದು ಅನಾವರಣಗೊಳ್ಳುತ್ತಿರುವ ನೂತನ Poco X5 Pro ಸ್ಮಾರ್ಟ್‌ಫೋನ್ ಬೆಲೆ ಎಷ್ಟಿರಬಹುದು ಎಂಬ ಬಗ್ಗೆ ಕಂಪೆನಿಯಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ, ಕೆಲ ವರದಿಗಳಂತೆ, POCO X5 5G ಸ್ಮಾರ್ಟ್‌ಫೋನ್ ರೀಬ್ರಾಂಡೆಡ್ Redmi Note 12 5G ಮಾಡೆಲ್ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಈ ಸ್ಮಾರ್ಟ್‌ಫೋನ್ Snapdragon 4 Gen 1 SoC ಬದಲಿಗೆ, ಶಕ್ತಿಯುತವಾದ Snapdragon 778G ಪ್ರೊಸೆಸರ್‌ನಿಂದ ಚಾಲಿತವಾಗಿದೆ ಎಂದು ಹೇಳಲಾಗುತ್ತದೆ. ಅಂದರೆ, ಇದರ ಬೆಲೆ ಎಷ್ಟು ಎಂಬುದನ್ನು ನಾವು ಊಹಿಸಬಹುದು. ನಾವು 15 ರಿಂದ 18 ಸಾವಿರ ಬೆಲೆಗಳಲ್ಲಿ ನೂತನ Poco X5 Pro ಸ್ಮಾರ್ಟ್‌ಫೋನನ್ನು ಎದುರುನೋಡಬಹುದು.

Poco X5 Pro 5g With 120hz Amoled Display, Snapdragon 778g Launching In India On February 6.