ಬ್ರೇಕಿಂಗ್ ನ್ಯೂಸ್
30-07-20 12:43 pm Special Correspondant ಡಿಜಿಟಲ್ ಟೆಕ್
ಚೀನಾ ಸಂಸ್ಥೆಗಳ ಜೊತೆ ಸಹಭಾಗಿತ್ವ ಹೊಂದಿರುವ 250 ಆಪ್ ಗಳ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ ಎನ್ನಲಾಗಿದೆ. ಇದರಲ್ಲಿ ಪಬ್ ಜಿ ಆ್ಯಪ್ ಕೂಡ ಒಳಗೊಂಡಿತ್ತು. ಅಚ್ಚರಿ ಎಂದರೆ, ಈಗ ಪಬ್ ಜಿ ತನ್ನ ಪ್ರೈವಸಿ ಪಾಲಿಸಿಯನ್ನು ಅಪ್ಡೇಟ್ ಮಾಡಿದೆ. ಈ ಮೂಲಕ ಬ್ಯಾನ್ ಆಗುವುದರಿಂದ ತಪ್ಪಿಸಿಕೊಳ್ಳಲು ದಾರಿ ಕಂಡು ಕೊಂಡಿದೆ.
ಭಾರತ ಹಾಗೂ ಚೀನಾ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಕೇಂದ್ರ ಸರ್ಕಾರ 59 ಚೀನಾ ಆ್ಯಪ್ ಗಳನ್ನು ಭಾರತದಲ್ಲಿ ಬ್ಯಾನ್ ಮಾಡುವ ಮೂಲಕ ಮಹತ್ವದ ಕ್ರಮ ಕೈಗೊಂಡಿತ್ತು.
ಬ್ಯಾನ್ ಮಾಡಲಾದ 59 ಆಪ್ ಗಳು ದೇಶದ ಬಳಕೆದಾರರ ಮಾಹಿತಿಯನ್ನು ಕದ್ದು ಚೀನಾ ಸರ್ಕಾರಕ್ಕೆ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ನಾವು ಈ ಕ್ರಮ ಕೈಗೊಂಡಿದ್ದೇವೆ ಎಂದು ಭಾರತ ಸರ್ಕಾರ ಸ್ಪಷ್ಟನೆ ನೀಡಿತ್ತು.
ಇದಾದ ಬೆನ್ನಲ್ಲೇ ಚೀನಾ ಸಂಸ್ಥೆಗಳ ಜೊತೆ ಸಹಭಾಗಿತ್ವ ಹೊಂದಿರುವ 250 ಆಪ್ ಗಳ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ ಎನ್ನಲಾಗಿದೆ. ಇದರಲ್ಲಿ ಪಬ್ ಜಿ ಆ್ಯಪ್ ಕೂಡ ಒಳಗೊಂಡಿತ್ತು.
ಅಚ್ಚರಿ ಎಂದರೆ, ಈಗ ಪಬ್ ಜಿ ತನ್ನ ಪ್ರೈವಸಿ ಪಾಲಿಸಿಯನ್ನು ಅಪ್ಡೇಟ್ ಮಾಡಿದೆ. ಈ ಮೂಲಕ ಬ್ಯಾನ್ ಆಗುವುದರಿಂದ ತಪ್ಪಿಸಿಕೊಳ್ಳಲು ದಾರಿ ಕಂಡು ಕೊಂಡಿದೆ.
ಪಬ್ ಜಿ ಉಗಮ ಅಗಿದ್ದು ದಕ್ಷಿಣ ಕೊರಿಯಾದಲ್ಲಿ. ಈ ಆಟ ಮೊದಲು ಪರಿಚಯಗೊಂಡಿದ್ದು 2017ರ ಡಿಸೆಂಬರ್ 20ರಂದು. Players Unknown Battleground ಪಬ್ಜಿ ವಿಸ್ತ್ರತ ರೂಪ. ಪಬ್ಜಿ ಕಾರ್ಪೋರೇಷನ್ ಈ ಆಟದ ಸೃಷ್ಟಿಕರ್ತ.
ಪಬ್ ಜಿ ಈ ಮೊದಲು ಕೇವಲ ವಿಡಿಯೋ ಗೇಮ್ ಆಗಿತ್ತು. ನಂತರ ಇದನ್ನು ಪಬ್ ಜಿ ಮೊಬೈಲ್ ಆಗಿ ಬದಲಾಯಿಸಿದ್ದು ಚೀನಾ ಮೂಲದ Tencent Games ಕಂಪನಿ. ಹೀಗಾಗಿ ಪಬ್ ಜಿಯಲ್ಲಿ ಈ ಸಂಸ್ಥೆಯ ಷೇರು ಕೂಡ ಇದೆ.
ಈ ಕಾರಣಕ್ಕೆ ಪಬ್ ಜಿಜಿನ್ನು ಬ್ಯಾನ್ ಮಾಡಲಾಗುತ್ತದೆ ಎನ್ನಲಾಗಿತ್ತು. ಇದಾದ ಬೆನ್ನಲ್ಲೇ ಪ್ರೈವಸಿ ಪಾಲಿಸಿಯನ್ನು ಸಂಸ್ಥೆ ಬದಲಿಸಿದೆ.
ಬದಲಾದ ಪ್ರೈವಸಿ ಪಾಲಿಸಿಯಲ್ಲಿ ಯಾವ ಯಾವ ಡಾಟಾಗಳನ್ನು ಆಪ್ ತೆಗೆದುಕೊಳ್ಳಲಾಗುತ್ತದೆ ಮತ್ತು ಅದನ್ನು ಏಕೆ ತೆಗೆದುಕೊಳ್ಳಲಾಗುತ್ತದೆ ಎನ್ನುವುದನ್ನು ಉಲ್ಲೇಖ ಮಾಡಲಾಗಿದೆ.
ಅಲ್ಲದೆ ಬದಲಾದ ಪಾಲಿಸಿಯಲ್ಲಿ ಭಾರತೀಯರಿಗೆ ಸಂಬಂಧಿಸಿದ ಡೇಟಾ ಭಾರತದಲ್ಲಿಯೇ ಇರುತ್ತದೆ. ಭಾರತೀಯ ಬಳಕೆದಾರರು ಪಬ್ಜಿ ಸಂಸ್ಥೆಯ ಸಂಪರ್ಕಿಸಿ ತಮ್ಮ ಡೇಟಾವನ್ನು ಅಳಿಸಿ ಹಾಕುವ ಹಕ್ಕನ್ನು ಹೊಂದಿದ್ದಾರೆ. ಈ ಮೂಲಕ ಸಂಪೂರ್ಣ ಪಾರದರ್ಶಕತೆಯನ್ನು ತಂದಿದ್ದೇವೆ ಎಂದು ಪಬ್ ಜಿ ಹೇಳಿದೆ.
31-10-25 08:10 pm
HK News Desk
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
30-10-25 03:20 pm
HK News Desk
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
31-10-25 10:47 pm
Mangalore Correspondent
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
ಅನಧಿಕೃತ ಪಾರ್ಕಿಂಗ್ ವಿರುದ್ಧ ಮಂಗಳೂರು ಪೊಲೀಸರ ಕಾರ್...
31-10-25 09:00 pm
78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
31-10-25 10:57 pm
Mangalore Correspondent
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm
ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm