ಬ್ರೇಕಿಂಗ್ ನ್ಯೂಸ್
12-01-22 08:59 pm Mangalore Correspondent ಕ್ರೈಂ
Photo credits : Headline Karnataka
ಮಂಗಳೂರು, ಜ.12 : ಗೋವಿನ ಕರುವನ್ನು ಬಲಿಕೊಟ್ಟು ವಾಮಾಚಾರ ಮಾಡಿರುವ ಘಟನೆ ಮೂಡುಬಿದ್ರೆ ಬಳಿಯ ಕೀರ್ತಿನಗರ ಎಂಬಲ್ಲಿ ಬೆಳಕಿಗೆ ಬಂದಿದ್ದು, ಘಟನೆ ಬಗ್ಗೆ ಹಿಂದು ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕೋಡಂಗಲ್ಲು – ಕೀರ್ತಿನಗರ ರಸ್ತೆಯಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಕಟ್ಟಿದ ಸ್ಥಿತಿಯಲ್ಲಿ ಗೋವಿನ ರುಂಡ ಪತ್ತೆಯಾಗಿದೆ. ಪೊಲೀಸರು ಪರಿಶೀಲನೆ ನಡೆಸಿದಾಗ, ಅದರಲ್ಲಿ ಕುಂಕುಮ ಮತ್ತು ಹೂವು ಕೂಡ ಪತ್ತೆಯಾಗಿದೆ. ಯಾರೋ ವಾಮಾಚಾರ ನಡೆಸಿ, ಮೂರು ರಸ್ತೆ ಸೇರುವಲ್ಲಿ ತಂದು ಎಸೆದು ಹೋಗಿದ್ದಾರೆ ಎನ್ನಲಾಗುತ್ತಿದೆ.
ಮಂಗಳವಾರ ರಾತ್ರಿ ಅಥವಾ ಸೋಮವಾರ ರಾತ್ರಿ ವಾಮಾಚಾರ ನಡೆಸಿ, ಬಲಿ ಕೊಟ್ಟ ಗೋವಿನ ರುಂಡವನ್ನು ಪ್ಲಾಸ್ಟಿಕ್ ನಲ್ಲಿ ಕಟ್ಟಿ ಎಸೆದಿದ್ದಾರೆ. ಸ್ವಲ್ಪ ಕೊಳೆತ ರೀತಿ ಇದ್ದು, ಘಟನೆ ನಡೆದು 24 ಗಂಟೆ ಆಗಿರುವ ರೀತಿ ಕಂಡುಬಂದಿದೆ. ಪ್ಲಾಸ್ಟಿಕ್ ನಲ್ಲಿ ಕಟ್ಟಿದ್ದ ಪೊಟ್ಟಣವನ್ನು ನಾಯಿಗಳು ಎಳೆದು ತಂದು ರಸ್ತೆ ಮಧ್ಯ ಹಾಕಿರುವ ಸಾಧ್ಯತೆಯಿದೆ. ಬುಧವಾರ ಬೆಳಗ್ಗೆ ಜನರು ಗಮನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋವನ್ನು ಬಲಿ ಕೊಡುವ ಪದ್ಧತಿ ಇಲ್ಲ. ಈ ಭಾಗದಲ್ಲಿ ವಾಮಾಚಾರ ನಡೆದರೂ, ಗೋವನ್ನು ಬಲಿ ಕೊಡುವುದು ಕಡಿಮೆ. ಆದರೆ, ಇಲ್ಲಿ ಯಾರು ವಾಮಾಚಾರ ನಡೆಸಿದ್ದಾರೆ ಅನ್ನುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಮೂಡುಬಿದ್ರೆ ಪೊಲೀಸರು ವಾಮಾಚಾರ, ಇನ್ನಿತರ ಬಲಿ ಹೋಮಗಳನ್ನು ನಡೆಸುವ ಮಂದಿಯನ್ನು ವಿಚಾರಣೆ ನಡೆಸಿದ್ದಾರೆ.

ಕೆಲವರ ಶಂಕೆಯ ಪ್ರಕಾರ, ಕೇರಳ ಭಾಗದ ವಾಮಾಚಾರ ಮಾಡುವ ಮಂದಿಯನ್ನು ಕರೆಸಿ ಬಲಿ ಹೋಮ ಮಾಡಿಸಲಾಗಿದೆ ಎನ್ನಲಾಗುತ್ತಿದೆ. ಬೇರೆ ಕಡೆ ವಾಮಾಚಾರ ನಡೆಸಿ, ಗಂಡು ಕರುವನ್ನು ಬಲಿಕೊಟ್ಟು ತಲೆಯನ್ನು ಇಲ್ಲಿ ತಂದು ಹಾಕಿದ್ದಾರೆ. ಹಿಂದುಗಳನ್ನು ಕೆಣಕುವ ಉದ್ದೇಶದಲ್ಲಿ ಈ ಕೃತ್ಯ ಮಾಡಿದ ರೀತಿ ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ. ಅಲ್ಲಿಯೇ ಸ್ವಲ್ಪ ಹತ್ತಿರ ದೇವಸ್ಥಾನ ಇದ್ದು, ಅಂಥ ದುರುದ್ದೇಶ ಇರುತ್ತಿದ್ದರೆ ದೇಗುಲದ ಮುಂದೆ ಹಾಕುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಯಾರಾದ್ರೂ ಈ ಭಾಗದಲ್ಲಿ ವಾಮಾಚಾರದ ರೀತಿ ಹೋಮ ಮಾಡಿದ್ದಾರೆಯೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಮೂಡುಬಿದ್ರೆ ಪೊಲೀಸರು ತಿಳಿಸಿದ್ದಾರೆ.

ಹಿಂಜಾವೇಯಿಂದ 48 ಗಂಟೆಗಳ ಗಡುವು
ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದು ಜಾಗರಣ ವೇದಿಕೆ ಮೂಡುಬಿದ್ರೆ ಘಟಕದ ನಾಯಕರು, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಹಿಂದುಗಳನ್ನು ಕೆಣಕುವ ಉದ್ದೇಶದಿಂದ ಯಾರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಆರೋಪಿಗಳನ್ನು 48 ಗಂಟೆಗಳಲ್ಲಿ ಬಂಧಿಸದಿದ್ದರೆ ಮೂಡುಬಿದ್ರೆ ಠಾಣೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ. ಈ ಬಗ್ಗೆ ಹಿಂಜಾವೇ ನಾಯಕರು ಮೂಡುಬಿದ್ರೆ ಠಾಣೆಗೆ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದ್ದಾರೆ.
A head of a Calf chopped was found inside a plastic cover in Moodbidri police station limits, Cops suspect of witchcraft as flower and kunkuma is found on it's head. HJV demand arrest of the culprit within 10 days or warn of Gherao.
11-06-26 08:31 pm
HK News Staffer
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
11-06-26 06:37 pm
HK News Staffer
26 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗ ! ಧರ್ಮಸ್ಥಳ...
11-06-26 04:21 pm
ಕರಾವಳಿಯಲ್ಲಿ ಮುಂಗಾರು ಅಬ್ಬರ; ಮಂಗಳೂರಿನ ಬೀಚ್ಗಳಲ...
11-06-26 02:47 pm
ಮಂಗಳೂರು ನಗರದಲ್ಲಿ ಅಕ್ರಮ ಫ್ಲೆಕ್ಸ್ , ಬ್ಯಾನರ್ ತ...
10-06-26 10:03 pm
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
11-06-26 08:44 pm
HK News Staffer
ಮಾಣಿ ; ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು, ಗಾಡಿ ಪಲ್...
11-06-26 11:43 am
ಬ್ರಹ್ಮಾವರ; ತಾಯಿಯ ಮಡಿಲಲ್ಲೇ ವಿಧಿಯ ಅಟ್ಟಹಾಸ..! 40...
11-06-26 11:40 am
ಬೀಗ ಹಾಕಿದ ಮನೆಗಳೇ ಟಾರ್ಗೆಟ್; ತಮಿಳುನಾಡು, ಆಂಧ್ರಪ್...
10-06-26 01:48 pm
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm