ಬ್ರೇಕಿಂಗ್ ನ್ಯೂಸ್
04-12-21 03:42 pm HK Desk news ಕ್ರೈಂ
ಮಂಗಳೂರು, ಡಿ.4: ಕುದ್ರೋಳಿಯಲ್ಲಿ ನಡೆದ ಗ್ಯಾಂಗ್ ವಾರ್ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಬಳಸಿದ್ದ ಮೂರು ತಲ್ವಾರು, ಮೂರು ದ್ವಿಚಕ್ರ ವಾಹನ ಮತ್ತು ಒಂದು ಆಟೋ ರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ.
ನವನೀತ್ ಅಶೋಕನಗರ, ಹೇಮಂತ್ ಹೊಯ್ಗೆಬೈಲ್, ದೀಕ್ಷಿತ್ ಬೋಳೂರು ಮತ್ತು ಇವರು ತಲೆಮರೆಸಿಕೊಳ್ಳಲು ನೆರವು ನೀಡಿದ್ದ ಸಂದೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ವರ್ಷದ ಹಿಂದೆ ಅಳಕೆ ಗ್ಯಾಂಗಿನ ಇಂದ್ರಜಿತ್ ಎಂಬಾತನ ಕೊಲೆ ನಡೆದಿತ್ತು. ಬೋಳೂರು ಗ್ಯಾಂಗಿನ ಉಲ್ಲಾಸ್ ಕಾಂಚನ್, ಗೌತಮ್, ರಾಕೇಶ್, ಶರಣ್, ಕೌಶಿಕ್, ಆಶಿಕ್, ಮೋಕ್ಷಿತ್, ತಲ್ವಾರ್ ಜಗ್ಗ, ನಿತಿನ್ ಪೂಜಾರಿ ಮತ್ತು ದೇವದಾಸ ಪೂಜಾರಿ ಎಂಬವರು ಸೇರಿ ಹಳೆ ದ್ವೇಷದಲ್ಲಿ ಇಂದ್ರಜಿತ್ ಕೊಲೆ ಮಾಡಿದ್ದರು. ಪ್ರಕರಣದ ಆರೋಪಿಗಳು ಸದ್ಯ ಜೈಲಿನಲ್ಲಿದ್ದಾರೆ.
ಇಂದ್ರಜಿತ್ ಕೊಲೆಗೆ ಪ್ರತೀಕಾರ ತೀರಿಸಲು ಅಳಕೆ ಗ್ಯಾಂಗಿನ ನವನೀತ್, ಹೇಮಂತ್ ಮತ್ತು ದೀಕ್ಷಿತ್ ಬೋಳೂರು ಸೇರಿ ಸಂಚು ನಡೆಸಿದ್ದು, ಪ್ರಸ್ತುತ ಜೈಲಿನಲ್ಲಿರುವ ಕೌಶಿಕ್ ಮತ್ತು ಆಶಿಕ್ ಅವರ ಸೋದರನಾದ ಅಂಕಿತ್ ನನ್ನು ಕೊಲೆಗೈಯಲು ಪ್ಲಾನ್ ಹಾಕಿದ್ದರು. ಅದರಂತೆ, ಕುದ್ರೋಳಿಯಲ್ಲಿ ನ.27ರ ರಾತ್ರಿ ಅಂಕಿತ್ ಮೇಲೆ ಹಂತಕರ ತಂಡ ತಲವಾರು ಬೀಸಿದ್ದು, ಆತ ತಪ್ಪಿಸಿಕೊಂಡಿದ್ದ. ಈ ವೇಳೆ ಹಲ್ಲೆಯನ್ನು ತಡೆಯಲು ಬಂದಿದ್ದ ಶ್ರವಣ್ ಎಂಬಾತನ ಎಡ ಕುತ್ತಿಗೆಯ ಮೇಲೆ ಬಲವಾದ ತಲವಾರು ಏಟು ಬಿದ್ದಿದ್ದು ತೀವ್ರ ಗಾಯಗೊಂಡಿದ್ದಾನೆ.
ಹತ್ತು ವರ್ಷಗಳ ಹಿಂದೆ ಅಳಕೆ ಮತ್ತು ಬೋಳೂರು ಗ್ಯಾಂಗ್ ಮಧ್ಯೆ ಹುಲಿವೇಷ ಹಾಕುವ ವಿಚಾರದಲ್ಲಿ ವೈಷಮ್ಯ ಬೆಳೆದಿತ್ತು. ಇದೇ ದ್ವೇಷದಲ್ಲಿ 2014ರಲ್ಲಿ ಹಳೆ ರೌಡಿ ಬೋಳೂರು ಗ್ಯಾಂಗಿನ ತಲ್ವಾರ್ ಜಗ್ಗ ಯಾನೆ ಜನಾರ್ದನ್ ಎಂಬಾತನ ಮಗ ಸಂಜಯ್ ನನ್ನು ಅಳಕೆ ಗ್ಯಾಂಗ್ ಸದಸ್ಯರು ಸೇರಿ ಕೊಲೆ ಮಾಡಿದ್ದರು. ಈ ರೀತಿ ಹುಟ್ಟಿಕೊಂಡ ವೈಷಮ್ಯ ಪರಸ್ಪರ ಮುಯ್ಯಿಗೆ ಮುಯ್ಯಿ ಅನ್ನುವಷ್ಟರ ಮಟ್ಟಿಗೆ ಬೆಳೆದಿತ್ತು. 2019ರಲ್ಲಿ ಅಳಕೆ ಗ್ಯಾಂಗಿನ ರಿತೇಶ್ ಮೇಲೆ ತಲವಾರು ದಾಳಿ ನಡೆಸಿದ್ದ ಬೋಳೂರಿನ ಹುಡುಗರು, ಕೊಲೆಗೆ ಯತ್ನಿಸಿದ್ದರು. ಅದು ಗುರಿತಪ್ಪಿದ್ದರಿಂದ ರಿತೇಶ್ ಅಪಾಯದಿಂದ ಪಾರಾಗಿದ್ದ. ಆನಂತರ, ಒಂದೇ ವರ್ಷದ ಅಂತರದಲ್ಲಿ ಅಳಕೆ ಗ್ಯಾಂಗಿನ ಇಂದ್ರಜಿತ್ ನನ್ನು ತಲ್ವಾರ್ ಜಗ್ಗ ಮತ್ತಿತರರು ಸೇರಿ ಕಡಿದು ಕೊಂದು ಹಾಕಿದ್ದರು.
ಇಂದ್ರಜಿತ್ ಕೊಲೆಯಲ್ಲಿ ಆರೋಪಿಗಳು ಜೈಲಿನಲ್ಲಿದ್ದರೂ, ಅವರ ಹತ್ತಿರದ ಸಂಬಂಧಿಕರನ್ನು ಟಾರ್ಗೆಟ್ ಮಾಡಿದ ಅಳಕೆ ಗ್ಯಾಂಗ್ ಇದೀಗ ಮತ್ತೊಬ್ಬನ ಕೊಲೆಗಾಗಿ ತಲವಾರು ದಾಳಿ ನಡೆಸಿದೆ. ಅಳಕೆ ಮತ್ತು ಬೋಳೂರು ಎರಡು ಕಿಮೀ ಅಂತರದಲ್ಲಿರುವ ಪ್ರದೇಶಗಳಾಗಿದ್ದು, ಸಣ್ಣ ಪ್ರಾಯದ ಹುಡುಗರು ಹೈಸ್ಕೂಲ್, ಕಾಲೇಜು ಮುಗಿಸಿ ಗಾಂಜಾ ದಾಸರಾಗುತ್ತಲೇ ಸಹವಾಸ ದೋಷದಿಂದ ಪುಡಿ ರೌಡಿಗಳಾಗಿ ಬದಲಾಗುತ್ತಿದ್ದಾರೆ. ಗಾಂಜಾ ಅಮಲಿನಲ್ಲಿ ಎರಡೂ ಕಡೆಯ ಗುಂಪಿನಲ್ಲಿ ಸದಸ್ಯರು ಸೇರಿಕೊಂಡಿದ್ದು, ಪರಸ್ಪರ ಕತ್ತಿ ಮಸೆಯುತ್ತಾ ಜೈಲು ಸೇರುತ್ತಿದ್ದಾರೆ. ಯಾರದ್ದೋ ದ್ವೇಷದಲ್ಲಿ ಇನ್ಯಾರೋ ಅಮಾಯಕರು ಪ್ರಾಣ ಕಳಕೊಳ್ಳುತ್ತಿದ್ದರೆ, ಇದನ್ನು ಹತ್ತಿಕ್ಕಬೇಕಾದ ಪೊಲೀಸರು ಮೂಲಕ್ಕೆ ಹೋಗದೆ ಒಂದಷ್ಟು ಮಂದಿಯನ್ನು ಬಂಧಿಸಿ ಕೈತೊಳೆದುಕೊಳ್ಳುತ್ತಿರುವುದು ಇವರ ದ್ವೇಷಕ್ಕೆ ತುಪ್ಪ ಸುರಿಯುತ್ತಿದೆ.
Urwa police arrested four people in connection with the murder attempt on Ankit Boloor. The cops have also confiscated three swords, three two-wheeler and one auto-rickshaw that were used in the act. Navneet, resident of Ashoknagar in the city, Hemanth, resident of Hoigebail and Deekshith, resident of Boloor are the main accused who are arrested. Sandesh was arrested for helping the accused hide after the incident
25-08-25 10:37 am
HK News Desk
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
ಮಾಸ್ಕ್ ಮ್ಯಾನ್ ಇಡೀ ಸರ್ಕಾರಿ ಯಂತ್ರವನ್ನು ಮೋಸಗೊಳಿಸ...
23-08-25 10:40 pm
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
24-08-25 10:49 pm
Mangalore Correspondent
YouTuber Sameer MD, Beltangady Police Station...
24-08-25 02:48 pm
ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರ...
23-08-25 10:22 pm
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
25-08-25 02:29 am
Mangaluru Correspondent
ಮುಸ್ಲಿಂ ಗಂಡನನ್ನು ರಾಡ್ ನಲ್ಲಿ ಹೊಡೆದು ಕೊಲೆಗೈದು ಶ...
24-08-25 10:33 pm
ಜೈಲು ಸಿಬ್ಬಂದಿಯಿಂದಲೇ ಕೈದಿಗಳಿಗೆ ಗಾಂಜಾ ಪೂರೈಕೆ ;...
24-08-25 06:36 pm
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಜೊತೆ ಸು...
24-08-25 04:48 pm
ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪತಿಯ ಕಾಲಿಗೆ ಪೊಲೀಸ...
24-08-25 04:00 pm