ಬ್ರೇಕಿಂಗ್ ನ್ಯೂಸ್
22-10-21 05:06 pm Mangaluru Correspondent ಕ್ರೈಂ
ಉಳ್ಳಾಲ, ಅ.22 : ಬಬ್ಬುಕಟ್ಟೆಯ ಚಂದಪ್ಪ ಎಸ್ಟೇಟಿನ ಒಂಟಿ ಬಂಗಲೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಹಿತ್ತಾಳೆ ದೀಪಗಳನ್ನ ಕದ್ದೊಯ್ದ ಪ್ರಕರಣದಲ್ಲಿ ಮದನಿನಗರದ ಇಬ್ಬರು ಕಳ್ಳರನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲದ ಮದನಿ ನಗರ ನಿವಾಸಿಗಳಾದ ಅಸ್ವೀರ್ (22) ಮತ್ತು ನಿಜಾಮುದ್ದೀನ್(22) ಬಂಧಿತ ಕಳ್ಳರು. ಬಬ್ಬುಕಟ್ಟೆ ಸಮೀಪದ ಚಂದಪ್ಪ ಎಸ್ಟೇಟ್ ನ ಸುಜಾತ ಎಂಬವರಿಗೆ ಸೇರಿದ ಒಂಟಿ ಬಂಗಲೆಗೆ ನುಗ್ಗಿದ ಕಳ್ಳರು ಲಕ್ಷಕ್ಕೂ ಮೀರಿ ಬೆಳೆ ಬಾಳುವ ಹಿತ್ತಾಳೆ ದೀಪಗಳನ್ನ ಕದ್ದೊಯ್ದ ಘಟನೆ ಕಳೆದ ಅ.6 ರಂದು ಬೆಳಕಿಗೆ ಬಂದಿತ್ತು. ಬಂಗಲೆ ಮಾಲಕಿ ಸುಜಾತ ಅವರು ಕುಟುಂಬ ಸಮೇತ ಹೊರ ದೇಶದಲ್ಲಿ ವಾಸವಿದ್ದು ಬಂಗಲೆ ಒಂಟಿಯಾಗಿತ್ತು. ಪಿಕ್ಕಾಸಿನಲ್ಲಿ ಬಂಗಲೆಯ ಹಿಂಬಾಗಿಲನ್ನ ಮುರಿದು ಒಳನುಗ್ಗಿದ ಕಳ್ಳರು ಮನೆಯೆಲ್ಲಾ ತಡಕಾಡಿದ್ದು ಕೊನೆಗೆ ಒಳಗಿದ್ದ ದೊಡ್ಡ ಗಾತ್ರದ ಮೂರು ಹಿತ್ತಾಳೆ ದೀಪ ಮತ್ತು ಎರಡು ಸಣ್ಣ ಗಾತ್ರದ ದೀಪಗಳನ್ನ ಎಗರಿಸಿ ಪರಾರಿಯಾಗಿದ್ದರು.
ಬಂಗಲೆಯ ಪಕ್ಕದ ನಿವಾಸಿ ಸುಜಾತ ಅವರ ಸಹೋದರ ವಕೀಲ ಗಂಗಾಧರ್ ಉಳ್ಳಾಲ್ ಅವರಿಗೆ ಅ.6 ರಂದು ಕಳ್ಳತನ ಘಟನೆ ಗಮನಕ್ಕೆ ಬಂದಿದ್ದು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಳ್ಳತನ ಪ್ರಕರಣದ ಬಗ್ಗೆ ಯಾವುದೇ ಸಿಸಿಟಿವಿ ದಾಖಲೆ ಇಲ್ಲದಿದ್ದರೂ ಉಳ್ಳಾಲ ಪಿಐ ಸಂದೀಪ್ ನೇತೃತ್ವದ ತಂಡ ಕಳ್ಳರ ಜಾಡು ಹಿಡಿಯಲು ಬಲೆ ಬೀಸಿತ್ತು. ಕುಂಪಲ ಬಗಂಬಿಲದಲ್ಲಿ ತಿರುಗಾಡುತ್ತಿದ್ದ ಅಸ್ವೀರ್ ಮತ್ತು ನಿಝಾಮುದ್ದೀನನ್ನು ಸಂಶಯದ ಮೇರೆಗೆ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಮದನಿನಗರ ನಿವಾಸಿಗಳಾದ ತಸ್ಲೀಮ್ ಮತ್ತು ಅಮ್ಮು ಕೂಡ ಭಾಗಿಯಾಗಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತ ಆರೋಪಿಗಳಿಂದ ಕಳ್ಳತನ ನಡೆಸಿದ ಲಕ್ಷಾಂತರ ಮೌಲ್ಯದ ಹಿತ್ತಾಳೆ ದೀಪಗಳನ್ನ ವಶ ಪಡಿಸಿಕೊಂಡಿದ್ದಾರೆ. ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಖಚಿತ ಸುಳಿವು ಇಲ್ಲದಿದ್ದರೂ ಕೆಲವೇ ದಿನಗಳಲ್ಲಿ ಒಂಟಿ ಬಂಗಲೆ ಕಳ್ಳತನ ಪ್ರಕರಣ ಭೇದಿಸಿದ ಉಳ್ಳಾಲ ಪೊಲೀಸರ ಕಾರ್ಯ ವೈಖರಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ದೀಪಕ್ಕಾಗಿ ಭಾವುಕರಾಗಿ ಹರಕೆ ಹೊತ್ತಿದ್ದ ಸಿರಿವಂತರು !
ದುಬೈಯಲ್ಲಿ ಕುಟುಂಬ ಸಮೇತ ವಾಸವಾಗಿರುವ ಸಿರಿವಂತ ಕುಟುಂಬದ ಸುಜಾತ ಅವರು ತನ್ನ ಒಂಟಿ ಬಂಗಲೆಯ ಭಾವನಾತ್ಮಕ ಅಂಗವಾದ ಹಿತ್ತಾಳೆ ದೀಪಗಳು ಕಳವಾಗಿರುವ ವಿಷಯ ತಿಳಿದು ಕೂಡಲೇ ಸಂಬಂಧಿಕರು, ಸ್ನೇಹಿತ ವರ್ಗದವರಿಗೆ ಕರೆ ಮಾಡಿ ಎಷ್ಟು ಖರ್ಚಾದರೂ ಪರವಾಗಿಲ್ಲ. ತನಗೆ ಆ ದೀಪಗಳು ಮತ್ತೆ ಸಿಗಬೇಕೆಂದು ಹೇಳಿದ್ದರಂತೆ. ಅಲ್ಲದೆ ಎಲ್ಲ ದೈವ, ದೇವರುಗಳಿಗೂ ದೀಪಗಳು ಮತ್ತೆ ಸಿಗುವಂತೆ ಹರಕೆ ಹೊತ್ತಿದ್ದರಂತೆ. ಸುಜಾತ ಅವರ ಭಾವನಾತ್ಮಕ ನಂಟಿನ ಪ್ರತಿಫಲವೋ ಎಂಬಂತೆ ಮದನಿ ನಗರದ ಕಳ್ಳರು ಇದೀಗ ಪೊಲೀಸರಿಗೆ ಪವಾಡ ಸದೃಶರಾಗಿ ಸಿಕ್ಕಿ ಬಿದ್ದಿದ್ದು ದೀಪಗಳು ಮತ್ತೆ ಬಂಗಲೆ ಸೇರುವಂತಾಗಿದೆ.
ತೊಕ್ಕೊಟ್ಟು ; ಒಂಟಿ ಬಂಗಲೆಗೆ ನುಗ್ಗಿ ಕಳ್ಳತನ, ಲಕ್ಷಾಂತರ ಮೌಲ್ಯದ ಹಿತ್ತಾಳೆ ದೀಪಗಳ ಕಳವು
Mangalore Thokottu Burglars enter bungalow, steal Five brass lamps worth lakhs two arrested by Ullal Police. FIve steal brass lamps worth lakhs had been stolen.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm