ಬ್ರೇಕಿಂಗ್ ನ್ಯೂಸ್
18-10-21 05:04 pm Mysuru Correspondent ಕ್ರೈಂ
ಮೈಸೂರು, ಅ.18: ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು ನಂಜನಗೂಡಿನ ಹುಲ್ಲಹಳ್ಳಿ ಠಾಣೆಯ ಎಎಸ್ಐ ಸೇರಿದಂತೆ 8 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ವಂಚಿಸಿದ ಹಿನ್ನೆಲೆ ಯುವತಿಯೊಬ್ಬಳು ಡೆತ್ ನೋಟ್ ಬರೆದು ಸಾವಿಗೆ ಶರಣಾಗಿದ್ದಳು. ಸಾವನ್ನಪ್ಪಿದ ಘಟನೆಯ 11 ದಿನಗಳ ಬಳಿಕ ಡೆತ್ ನೋಟ್ ಮನೆಯಲ್ಲಿ ಸಿಕ್ಕಿದ್ದು ಯುವತಿ ಅಜ್ಜ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೀಗಾಗಿ ನಂಜನಗೂಡು ತಾಲೂಕು ಹುಲ್ಲಹಳ್ಳಿ ಠಾಣೆ ಎಎಸ್ಐ ಸೇರಿದಂತೆ 8 ಮಂದಿ ವಿರುದ್ದ ಎಫ್ಐಆರ್ ದಾಖಲಾಗಿದೆ. ಅದೇ ಠಾಣೆಯ ಎಎಸ್ಐ ಎಂ.ಶಿವರಾಜು 8ನೇ ಆರೋಪಿಯಾಗಿದ್ದಾನೆ.
ಯುವತಿ ನ್ಯಾಯ ಕೇಳಿ ಬಂದಾಗ ಸೂಕ್ತವಾಗಿ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದರೆಂದು ಹಾಗೂ ಆರೋಪಿಗಳು ನೀಡಿದ ಆಮಿಷಕ್ಕೆ ಬಲಿಯಾಗಿ ಯುವತಿ ನೀಡಿದ ದೂರು ದಾಖಲಿಸಿಲ್ಲವೆಂದು ಎಎಸ್ಐ ಶಿವರಾಜು ಮೇಲೆ ಆರೋಪ ಉಂಟಾಗಿದ್ದು ಯುವತಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿ ಸೇರ್ಪಡೆ ಮಾಡಲಾಗಿದೆ. ನಂಜನಗೂಡು ಠಾಣೆಯ ವೃತ್ತ ನಿರೀಕ್ಷಕರು ನೀಡಿದ ವರದಿ ಆಧಾರದಲ್ಲಿ ಕೇಸು ದಾಖಲಾಗಿದೆ. ಪ್ರಕರಣದಲ್ಲಿ ಸುರೇಶ, ಗುರುಮಲ್ಲು, ಲೋಕೇಶ್, ಜಡೆ ಮಲ್ಲಯ್ಯ, ಮಲ್ಲಿಕಾರ್ಜುನಯ್ಯ, ಗೌರಮ್ಮ, ರಾಜಮ್ಮ ಎಂಬವರ ಮೇಲೂ ಎಫ್.ಐ.ಆರ್ ದಾಖಲಾಗಿದೆ.
ನಂಬಿಸಿ ವಂಚಿಸಿದ ಧೂರ್ತ ;
ನಂಜನಗೂಡು ತಾಲೂಕು ಚೆನ್ನಪಟ್ಟಣ ಗ್ರಾಮದ ಶೋಭಾ ಎಂಬ ಯುವತಿ ಅದೇ ಗ್ರಾಮದ ಲೋಕೇಶ್ ಎಂಬಾತನನ್ನ ಪ್ರೀತಿಸಿದ್ದಳು. ಶೋಭಾಳನ್ನ ವಿವಾಹವಾಗುವುದಾಗಿ ನಂಬಿಸಿದ್ದ ಲೋಕೇಶ್ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಇವರ ಚಕ್ಕಂದ ನಡೆಯುತ್ತಿರುವಾಗಲೇ ಇದನ್ನು ನೋಡಿದ ಸುರೇಶ್ ಎಂಬಾತ ಯುವತಿ ಮನವೊಲಿಸಲು ಮುಂದಾಗಿದ್ದ. ಸುರೇಶ್ ಎಂಟ್ರಿ ಕೊಟ್ಟ ಎಂದು ಲೋಕೇಶ್, ಶೋಭಾಳನ್ನು ದೂರ ಮಾಡಿದ್ದ. ಲೋಕೇಶ್ ತನಗೆ ನೀಡಿದ್ದ ಮಾತನ್ನು ಮೀರಿ ವಂಚನೆ ಎಸಗಿದ ಎಂಬ ನೋವಿನಲ್ಲಿ ಯುವತಿ ಆನಂತರ ಆತನ ವಿರುದ್ಧ ದೂರು ನೀಡಲು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ತೆರಳಿದ್ದಾಳೆ. ಈ ವೇಳೆ ಶೋಭಾಳ ದೂರನ್ನು ಸ್ವೀಕರಿಸದೆ ಎಎಸ್ಸೈ ಶಿವರಾಜು ನಿರ್ಲಕ್ಷಿಸಿದ್ದಾರೆ.
ಇದೇ ವೇಳೆ, ಲೋಕೇಶ್ ಹಾಗೂ ಇತರರು ಸೇರಿ ಶೋಭಾ ಮನೆಗೆ ಬಂದು ಗಲಾಟೆ ಮಾಡಿದ್ದಾರೆ. ಪೊಲೀಸರ ಜೊತೆಗೆ ಡೀಲ್ ಮಾಡಿ ಕೇಸ್ ಮುಗಿಸಿರುವುದಾಗಿ ಕುಡಿದ ಮತ್ತಿನಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ, ನಮ್ಮನ್ನ ಏನೂ ಮಾಡಲು ಸಾಧ್ಯವಿಲ್ಲವೆಂದು ಧಮಕಿ ಹಾಕಿದ್ದಾರೆ. ಇಷ್ಟೆಲ್ಲ ಬೆಳವಣಿಗೆಯಿಂದ ನೊಂದ ಶೋಭಾ ನೇಣಿಗೆ ಶರಣಾಗಿದ್ದಾಳೆ. ಯುವತಿ ಸಾವಿನಿಂದ ಗೌರವಕ್ಕೆ ಅಂಜಿದ ಶೋಭಾ ಮನೆಯವರು ಸದ್ದಿಲ್ಲದೆ ಅಂತ್ಯಕ್ರಿಯೆ ನೆರವೇರಿಸಿದ್ದರು.
ಆದರೆ, ಸಾವು ನಡೆದು 11 ದಿನಗಳ ನಂತರ ಕೊಠಡಿ ಸ್ವಚ್ಛ ಮಾಡುವಾಗ ಶೋಭಾ ಬರೆದಿದ್ದ ಡೆತ್ ನೋಟ್ ಸಿಕ್ಕಿದೆ. ಡೆತ್ ನೋಟ್ ನಲ್ಲಿ ತನಗಾದ ಅನ್ಯಾಯವನ್ನ ಹೇಳಿಕೊಂಡಿದ್ದಾಳೆ. ಲೋಕೇಶ್ ತನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ಹೇಳಿದ್ದಾಳೆ. ಆತನಿಗೆ ಜೈಲು ಶಿಕ್ಷೆ ಆಗಬೇಕು, ನೇಣಿಗೆ ಏರಿಸಬೇಕೆಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾಳೆ.
ಡೆತ್ ನೋಟ್ ದೊರೆತ ನಂತರ ಶೋಭಾಳ ತಾತ ಚಿಕ್ಕಚೆನ್ನಯ್ಯ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ವಿರುದ್ಧವೂ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಎಸ್ಪಿಗೂ ಮಾಹಿತಿ ನೀಡಿದ್ದಾರೆ. ಅದರಂತೆ, ಹುಲ್ಲಹಳ್ಳಿ ಠಾಣೆಗೆ ಭೇಟಿ ನೀಡಿದ್ದ ಎಸ್ಪಿ ಚೇತನ್ ಪರಿಶೀಲನೆ ನಡೆಸಿದ್ದಾರೆ.
Mysuru Suicide case Death note of girl found after 15 days FIR lodged against 8 police personnel
23-08-25 10:40 pm
Bangalore Correspondent
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
23-08-25 04:58 pm
HK News Desk
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
23-08-25 10:22 pm
Mangalore Correspondent
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
ಆನಂದಾಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ "ಡೆನ್ನ ಡೆ...
23-08-25 07:02 pm
Mask Man Dharmasthala, Arrest, SIT: ಧರ್ಮಸ್ಥಳ...
23-08-25 03:04 pm
23-08-25 10:49 pm
Mangalore Correspondent
Sujatha Bhat, SIT, Dharmasthala Case; "ಸುಳ್ಳಜ...
23-08-25 06:21 pm
Dharmasthala Mask Man Arrest, SIT: ಧರ್ಮಸ್ಥಳ ಪ...
23-08-25 11:11 am
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm
Lucky Scheme, Shine Enterprises, Arrest, Mang...
22-08-25 09:17 pm