ಬ್ರೇಕಿಂಗ್ ನ್ಯೂಸ್
07-10-21 04:19 pm Mangaluru Correspondent ಕ್ರೈಂ
ಮಂಗಳೂರು, ಅ.7: ಶೂಟೌಟ್ ಪ್ರಕರಣದಲ್ಲಿ ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಅವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ. ಆದರೆ, ರಾಜೇಶ್ ಪ್ರಭು ಹೃದಯಾಘಾತಕ್ಕೊಳಗಾಗಿದ್ದಾರೆ ಎನ್ನಲಾಗುತ್ತಿದ್ದು, ಪೊಲೀಸ್ ವಶದಲ್ಲಿದ್ದುಕೊಂಡೇ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎರಡು ದಿನಗಳ ಹಿಂದೆ ಮೋರ್ಗನ್ ಗೇಟ್ ನಲ್ಲಿರುವ ವೈಷ್ಣವಿ ಕಾರ್ಗೋ ಸಂಸ್ಥೆಯ ಕಚೇರಿಯಲ್ಲಿ ಶೂಟೌಟ್ ನಡೆದಿತ್ತು. ಸಂಬಳದ ವಿಚಾರದಲ್ಲಿ ತಕರಾರು ನಡೆಸಿದ್ದ ಇಬ್ಬರು ಕೆಲಸದಾಳುಗಳ ಮೇಲಿನ ಕೋಪದಲ್ಲಿ ರಾಜೇಶ್ ಪ್ರಭು ತನ್ನಲ್ಲಿದ್ದ ಪಿಸ್ತೂಲ್ ತೆಗೆದು ಶೂಟ್ ಮಾಡಿದ್ದರು. ಆದರೆ, ಶೂಟ್ ಮಾಡಿದ್ದು ತಪ್ಪಾಗಿ ಗುಂಡು ರಾಜೇಶ್ ಪ್ರಭು ಮಗ ಸುಧೀಂದ್ರನ ಮೇಲೆ ಬಿದ್ದಿತ್ತು. ತೀವ್ರ ಗಾಯಗೊಂಡಿದ್ದ ಸುಧೀಂದ್ರನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸುಧೀಂದ್ರ ಪ್ರಭು ತಲೆಗೆ ಗುಂಡೇಟು ಬಿದ್ದಿದ್ದರಿಂದ ಮೆದುಳಿಗೆ ಹಾನಿಯಾಗಿದೆ ಎನ್ನಲಾಗುತ್ತಿದ್ದು, ಮೆದುಳು ನಿಷ್ಕ್ರಿಯ ಆಗಿದೆಯೆಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಕುಟುಂಬಸ್ಥರು ಅಧಿಕೃತವಾಗಿ ದೃಢಪಡಿಸಿಲ್ಲ. ಮೆದುಳು ನಿಷ್ಕಿಯ ಆಗಿದ್ದರೆ, ದೇಹದ ಅಂಗಾಂಗಗಳನ್ನು ದಾನ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಮಗನಿಗೆ ಗುಂಡೇಟು ಬಿದ್ದ ಆಘಾತದಲ್ಲಿ ತಂದೆ ರಾಜೇಶ್ ಪ್ರಭುವಿಗೆ ಹೃದಯಾಘಾತ ಆಗಿದೆ ಎನ್ನಲಾಗುತ್ತಿದೆ.
ವೈಷ್ಣವಿ ಕಾರ್ಗೋ ಸಂಸ್ಥೆಯ ಲಾರಿಯೊಂದರ ಚಾಲಕ ಮತ್ತು ಕ್ಲೀನರ್ ತಮ್ಮ ಒಂದು ಟ್ರಿಪ್ ಸಂಬಳ ನಾಲ್ಕು ಸಾವಿರ ಆಗುತ್ತೆಂದು ಹಣ ಕೇಳಲು ಬಂದಿದ್ದರು. ಆ ಸಂದರ್ಭದಲ್ಲಿ ಕಚೇರಿಯಲ್ಲಿ ರಾಜೇಶ್ ಪ್ರಭು ಪತ್ನಿ ಮಾತ್ರ ಇದ್ದುದರಿಂದ ಕೆಲಸದ ನೌಕರರ ಕಿರಿಕಿರಿ ಸಹಿಸಲಾಗದೆ ಪತಿಯನ್ನು ಬರುವಂತೆ ಹೇಳಿದ್ದರು. ಕಚೇರಿ ಪಕ್ಕದಲ್ಲೇ ಮನೆ ಇದ್ದುದರಿಂದ ಉಟ್ಟ ಬಟ್ಟೆಯಲ್ಲೇ ರಾಜೇಶ್ ಪ್ರಭು ಬಂದಿದ್ದರು. ಆದರೆ, ಗನ್ ಕಾರಲ್ಲಿ ಜೊತೆಯಲ್ಲೇ ಇತ್ತು. ಕಚೇರಿಗೆ ಬಂದ ಕೂಡಲೇ ಕೆಲಸದವರು ಸಂಬಳದ ಬಗ್ಗೆ ಗಟ್ಟಿಸ್ವರದಲ್ಲಿ ಮಾತನಾಡಿದ್ದನ್ನು ಆಕ್ಷೇಪಿಸಿ, ಮಗ ಸುಧೀಂದ್ರ ಹೊಡೆದಿದ್ದಾನೆ. ಇದೇ ವಿಚಾರ ಜಟಾಪಟಿಗೆ ಕಾರಣವಾಗಿದ್ದು, ಇವರ ಜಗಳ ಬಿಡಿಸಲೆಂದು ತಂದೆ ರಾಜೇಶ್ ಪ್ರಭು ಪಿಸ್ತೂಲ್ ಹೊರ ತೆಗೆದಿದ್ದರು.
ತನಗೆ ಬೆದರಿಕೆ ಇದ್ದುದರಿಂದ ಲೈಸನ್ಸ್ ಹೊಂದಿದ್ದ ಪಿಸ್ತೂಲ್ ಇಟ್ಟುಕೊಂಡಿದ್ದ ರಾಜೇಶ್ ಪ್ರಭು, ತನ್ನ ಸ್ವಯಂ ರಕ್ಷಣೆಗೆ ಮಾತ್ರ ಅದನ್ನು ಬಳಸಿಕೊಳ್ಳಬೇಕು. ಆದರೆ, ತಮ್ಮ ಸಿಡುಕಿನ ಸ್ವಭಾವದಿಂದಾಗಿ ಕೆಲಸದಾಳುಗಳನ್ನು ಬೆದರಿಸಲು ಪಿಸ್ತೂಲ್ ತೋರಿಸಿದ್ದು ಈಗ ಮುಳುವಾಗಿ ಪರಿಣಮಿಸಿದೆ. ಪ್ರೀತಿಯ ಮಗನ ಪ್ರಾಣವನ್ನೇ ಕಿತ್ತುಕೊಳ್ಳುವಷ್ಟರ ಮಟ್ಟಿಗೆ ಪಿಸ್ತೂಲ್ ಸಂಗ ಹೋಗಿದ್ದು ವಿಪರ್ಯಾಸ.
ಸಂಬಳದ ವಿಚಾರದಲ್ಲಿ ಶೂಟೌಟ್ ; ನೌಕರರಿಬ್ಬರ ಮೇಲೆ ಮಗ ಕೈಮಾಡಿದ್ದೇ ಜಟಾಪಟಿಗೆ ಕಾರಣ !
ಮೋರ್ಗನ್ ಗೇಟ್ ಬಳಿ ಶೂಟೌಟ್ ; ಕೆಲಸದಾಳು ಮೇಲಿನ ಕೋಪದಲ್ಲಿ ಮಗನಿಗೇ ಗುಂಡು ಹಾರಿಸಿದ ಉದ್ಯಮಿ !
Morgans Gate Shootout in Mangalore Vaishnavi Xpress Cargo owner Rajesh Prabhu has been arrested for Misfire on Son. The Son who is admitted to the hospital is said to be brain dead. A 16-year-old boy was critically injured after his father allegedly opened fire at two men in Mangaluru on Tuesday afternoon.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm