ಬ್ರೇಕಿಂಗ್ ನ್ಯೂಸ್
26-08-21 03:31 pm Headline Karnataka News Network ಕ್ರೈಂ
ಮುಂಬೈ, ಆಗಸ್ಟ್ 26: ಮದ್ರಸಾದಲ್ಲಿ ಅರೇಬಿಕ್ ಕ್ಲಾಸಿಗೆ ಬರುತ್ತಿದ್ದ ಐದು ವರ್ಷದ ಮಗುವಿಗೆ ಅಶ್ಲೀಲ ವಿಡಿಯೋ ತೋರಿಸಿ, ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ಮುಂಬೈ ಪೋಕ್ಸೋ ಕೋರ್ಟ್ ಆರೋಪಿಗೆ ಒಂದು ವರ್ಷ ಕಠಿಣ ಶಿಕ್ಷೆ ನೀಡಿದೆ.
2016ರ ಆಗಸ್ಟ್ 30ರಂದು ಘಟನೆ ನಡೆದಿತ್ತು. 5 ವರ್ಷದ ಪುತ್ರಿಯನ್ನು ಮನೆ ಹತ್ತಿರದ ಮಸೀದಿಗೆ ಹೆತ್ತವರು ಅರೇಬಿಕ್ ಕಲಿಯಲೆಂದು ಕಳಿಸಿಕೊಡುತ್ತಿದ್ದರು. ಏಳು ಗಂಟೆಗೆ ಪುತ್ರಿಯನ್ನು ತಂದೆಯೇ ಮನೆಗೆ ಕರೆತರುತ್ತಿದ್ದರು. ಅಂದು ಕೂಡ ಮಗಳನ್ನು ಮನೆಗೆ ತಂದೆಯೇ ಕರೆತಂದಿದ್ದರು. ಬಳಿಕ ಆಕೆಯ ತಾಯಿ, ಇಂದು ಏನು ಕಳಿಸಿಕೊಟ್ರಮ್ಮಾ ಎಂದು ಮಗಳ ಬಳಿ ಕೇಳಿದ್ದಾಳೆ. ಆಗ ಮಗಳು ನಡೆದ ಘಟನೆಯನ್ನು ವಿವರಿಸಿದ್ದಳು.
ಅರೇಬಿಕ್ ಟೀಚರ್ ಕೆಲವು ಫೋಟೋ, ವಿಡಿಯೋಗಳನ್ನು ತೋರಿಸಿದ್ದರು. ಆನಂತರ ಏನೋ ಮಾಡಿದ್ರು. ಎಲ್ಲ ಆದ ಬಳಿಕ ಗುಪ್ತಾಂಗವನ್ನು ಕ್ಲೀನ್ ಮಾಡಿದ್ರು ಎಂದು ಹೇಳಿದ್ದಳು. ಈ ವಿಚಾರವನ್ನು ತಾಯಿ, ಗಂಡನಿಗೆ ಹೇಳಿದ್ದು ಮರುದಿನವೇ ಚೆಂಬೂರು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮೊಬೈಲ್ ವಶಕ್ಕೆ ಪಡೆದು ವಿಚಾರಿಸಿದಾಗ ಆತನ ಮೊಬೈಲಿನಲ್ಲಿ ಅಶ್ಲೀಲ ವಿಡಿಯೋಗಳಿದ್ದುದನ್ನು ಪತ್ತೆ ಮಾಡಿದ್ದರು.
ಆದರೆ, ಪೊಲೀಸರು ಚಾರ್ಜ್ ಶೀಟ್ ಹಾಕಿ, ಪ್ರಕರಣ ವಿಚಾರಣೆಗೆ ಬಂದಾಗ ಆರೋಪಿ ತಾನು ತಪ್ಪಿತಸ್ಥನಲ್ಲ ಎಂದು ವಾದಿಸಿದ್ದಾನೆ. ಅಲ್ಲದೆ, ಆತನ ಲಾಯರ್ ಕೂಡ ಅದೇ ವಾದ ಮಾಡಿದ್ದು, ಹುಡುಗಿಯ ಹೆತ್ತವರು ಶಾಲೆಯ ಫೀಸ್ ಕಟ್ಟಿರಲಿಲ್ಲ. ಅದಕ್ಕಾಗಿ ಈ ರೀತಿ ದೂರು ನೀಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಹುಡುಗಿಯ ತಾಯಿ ಈ ಆರೋಪವನ್ನು ನಿರಾಕರಿಸಿದ್ದು, ಅದರ ಬಗ್ಗೆ ಕೋರ್ಟಿನಲ್ಲಿ ಜಟಾಪಟಿಯೇ ನಡೆದಿತ್ತು.
ಈ ಬಗ್ಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಹುಡುಗಿ ಪರವಾಗಿ ವಾದ ಎತ್ತಿದ್ದು, ಆರೋಪಿಯ ಮೊಬೈಲಿನಲ್ಲಿ ಅಶ್ಲೀಲ ವಿಡಿಯೋಗಳಿದ್ದುದು ಸಾಬೀತಾಗಿದೆ. ಫೀಸ್ ಕಟ್ಟದ ವಿಚಾರದಲ್ಲಿ ಪೊಲೀಸ್ ದೂರು ಕೊಟ್ಟಿದ್ದರು ಎನ್ನುವುದು ಕ್ಷುಲ್ಲಕ. ಹಾಗಿದ್ದರೆ, ಮಸೀದಿ ಕಮಿಟಿಯವರೇ ಶಿಕ್ಷಕನನ್ನು ಹಿಡಿದು ಕೊಡುತ್ತಿರಲಿಲ್ಲ. ಮಸೀದಿ ಕಮಿಟಿಯವರು ಫೀಸ್ ವಿಚಾರದಲ್ಲಿ ಆಕ್ಷೇಪ ಹೇಳುತ್ತಿದ್ದರು. ನೀವು ವಿನಾಕಾರಣ ಈ ರೀತಿ ಆರೋಪ ಮಾಡುತ್ತಿದ್ದೀರಿ ಎಂದು ವಾದಿಸಿದರು.
ಇದನ್ನು ಪುರಸ್ಕರಿಸಿದ ಕೋರ್ಟ್, ಮೊಬೈಲಿನಲ್ಲಿ ಪೋರ್ನೋ ವಿಡಿಯೋ ಇರುವುದು ಖಾತ್ರಿಯಾಗಿತ್ತು. ಸಂತ್ರಸ್ತ ಬಾಲಕಿಗೆ ಆತನ ಮೊಬೈಲಲ್ಲಿ ಆ ರೀತಿಯ ವಿಡಿಯೋ ಇರುವುದೇನು ಕನಸು ಬಿದ್ದಿತ್ತಾ..? ಅದನ್ನು ತೋರಿಸಿದ್ದರಿಂದಲೇ ವಿಡಿಯೋ ಬಹಿರಂಗ ಆಗಿದ್ದಲ್ಲವೇ ? ಈ ರೀತಿಯ ಘಟನೆಗಳು ಮಕ್ಕಳ ಮೇಲೆ ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತದೆ. ಇಂಥ ಪ್ರಕರಣದಲ್ಲಿ ಆರೋಪಿಗಳ ಬಗ್ಗೆ ಕರುಣೆ ತೋರುವುದು ಸರಿಯಲ್ಲ ಎಂದು ಒಂದು ವರ್ಷದ ಕಠಿಣ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ. ಅಲ್ಲದೆ, ಹತ್ತು ಸಾವಿರ ರೂ. ದಂಡ ತೆರುವಂತೆ ಹೇಳಿದ್ದಾರೆ.
A Mumbai special court has sentenced a 30-year-old teacher to one year in jail for showing and masturbating a minor under the Pocso Act. The Arabic teacher showed the girl content on August 30, 2016, when the baby was only five years old.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm