ಬ್ರೇಕಿಂಗ್ ನ್ಯೂಸ್

Forensic Expert Dr Mahabala Shetty, Dharmasthala case: ಧರ್ಮಸ್ಥಳ ಸ್ನಾನಘಟ್ಟ ಬಳಿ 20ಕ್ಕೂ ಹೆಚ್ಚು ಕೊಳೆತ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ, ಅವನ್ನು ಅಲ್ಲಿಯೇ ಹೂಳಲಾಗಿತ್ತು ; ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ    |    ಕನಸು ಕಮರಿಸಿದ ಅಪಘಾತ ; ವೈದ್ಯರ ಎಡವಟ್ಟು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೈಕಾಲಿನ ಶಕ್ತಿಯೇ ಊನ, ಕಂಗೆಟ್ಟ ವಿಶ್ವಕರ್ಮ ಕುಟುಂಬಕ್ಕೆ ಕ್ರಿಶ್ಚಿಯನ್ ಗೆಳೆಯರ ಆಸರೆ ! ಅರ್ಧಕ್ಕೆ ಉಳಿದುಬಿಟ್ಟ ಮನೆಗೆ ದಿಕ್ಕಿಲ್ಲದ ಸ್ಥಿತಿ, ಬೆಳಕು ಹರಿಸೀತೆ ಸಹೃದಯರ ಹಾರೈಕೆ ?!    |    Kannada Producer Ganesh, Film Dharmasthala File, Movie: 'ಧರ್ಮಸ್ಥಳ ಫೈಲ್ಸ್' ಸಿನಿಮಾ ಘೋಷಿಸಿದ ಕನ್ನಡದ ನಿರ್ಮಾಪಕ ಎ. ಗಣೇಶ್ ; ಸಮಸ್ಯೆ ಆದ್ರೆ ಚಿತ್ರತಂಡವೇ ಹೊಣೆ ಎಂಬ ಕಂಡೀಷನ್! ಕತೆ ಇನ್ನಷ್ಟೇ ಬರೆಸಬೇಕೆಂದ ಚಿತ್ರತಂಡ     |   

ಕೊರೊನಾ ಸೋಂಕಿತ ಯುವತಿಯ ರೇಪ್ ; ಆಂಬುಲೆನ್ಸ್ ಚಾಲಕನ ಕೃತ್ಯ ! 

06-09-20 02:39 pm       Headline Karnataka News Network   ಕ್ರೈಂ

ಕೊರೊನಾ ಸೋಂಕಿಗೆ ಒಳಗಾದ ಯುವತಿಯನ್ನು ಆಂಬುಲೆನ್ಸ್ ನಲ್ಲಿ ಒಯ್ಯುತ್ತಿದ್ದಾಗ ಅದರ ಚಾಲಕನೇ ಯುವತಿಯ ಅತ್ಯಾಚಾರಗೈದ ಘಟನೆ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ. 

ತಿರುವನಂತಪುರಂ, ಸೆಪ್ಟೆಂಬರ್ 6: ಕೊರೊನಾ ಸೋಂಕಿಗೆ ಒಳಗಾದ ಯುವತಿಯನ್ನು ಆಂಬುಲೆನ್ಸ್ ನಲ್ಲಿ ಒಯ್ಯುತ್ತಿದ್ದಾಗ ಅದರ ಚಾಲಕನೇ ಯುವತಿಯ ಅತ್ಯಾಚಾರಗೈದ ಘಟನೆ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ. 

ಇಬ್ಬರು ಯುವತಿಯರಿಗೆ ನಿನ್ನೆ ಸಂಜೆ ಕೊರೊನಾ ಪಾಸಿಟಿವ್ ಆಗಿತ್ತು. ಅದರಂತೆ, ರಾತ್ರಿ ಹೊತ್ತಿಗೆ ಆಂಬುಲೆನ್ಸ್ ಬಂದಿದ್ದು ಒಬ್ಬಳನ್ನು ಒಂದು ಆಸ್ಪತ್ರೆಗೆ ದಾಖಲು ಮಾಡಿದ ಆರೋಗ್ಯ ಅಧಿಕಾರಿಗಳು ಇನ್ನೊಬ್ಬ ಯುವತಿಯನ್ನು ಬೇರೊಂದು ಆಸ್ಪತ್ರೆಗೆ ಒಯ್ಯಲು ಚಾಲಕನಲ್ಲಿ ಸೂಚಿಸಿದ್ದರು. ಆದರೆ, ಮಧ್ಯರಾತ್ರಿಯಲ್ಲಿ ಚಾಲಕ ಯುವತಿಯನ್ನು ಒಯ್ಯುತ್ತಿದ್ದಂತೆ ನಡುದಾರಿಯಲ್ಲಿ ಆಂಬುಲೆನ್ಸ್ ನಿಲ್ಲಿಸಿದ್ದು ವಾಹನದಲ್ಲಿಯೇ ರೇಪ್ ಮಾಡಿದ್ದಾನೆ. ಬಳಿಕ ಆಸ್ಪತ್ರೆಗೆ ಒಯ್ದಿದ್ದು 22 ವರ್ಷದ ಯುವತಿ ತನಗಾದ ಕೃತ್ಯವನ್ನು ಅಲ್ಲಿನ ಸಿಬಂದಿಗೆ ತಿಳಿಸಿದ್ದಾಳೆ. ವೈದ್ಯರು ಲೈಂಗಿಕ ಕಿರುಕುಳ ಆಗಿರುವುದನ್ನು ದೃಢಪಡಿಸಿದ್ದಾರೆ. 

ಆನಂತ್ರ, ಪೊಲೀಸರು ಕೆಲವೇ ಹೊತ್ತಲ್ಲಿ ಆಂಬುಲೆನ್ಸ್ ಚಾಲಕನನ್ನು ಬಂಧಿಸಿದ್ದಾರೆ. ಆರೋಪಿ ಯುವಕ ಇತರೇ ಅಪರಾಧ ಕೃತ್ಯಗಳ ಹಿನ್ನೆಲೆ ಹೊಂದಿದ್ದಾನೆ ಎನ್ನುವುದು ತಿಳಿದುಬಂದಿದ್ದು ಇಂಥ ವ್ಯಕ್ತಿಗೆ ಆಂಬುಲೆನ್ಸ್ ಚಾಲಕ ವೃತ್ತಿಗೆ ನೇಮಿಸಿಕೊಂಡಿದ್ದು ಯಾಕೆಂದು ಆರೋಗ್ಯ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಪ್ರತಿ ಆಂಬುಲೆನ್ಸ್ ವಾಹನದಲ್ಲಿ ಇಬ್ಬರು ಇರಬೇಕು. ಮಹಿಳೆಯರು ಮಾತ್ರ ಪೇಶಂಟ್ ಆಗಿರುವಾಗ ಜಾಗ್ರತೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಘಟನೆ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ತನಿಖೆಗೆ ಆದೇಶ ಮಾಡಿದೆ.

Join our WhatsApp group for latest news updates