ಬ್ರೇಕಿಂಗ್ ನ್ಯೂಸ್
30-07-21 07:27 pm Bengaluru Correspondent ಕ್ರೈಂ
ಬೆಂಗಳೂರು, ಜುಲೈ 30: ಇಂಟೀರಿಯರ್ ಡಿಸೈನರ್ ಆಗಿದ್ದ ದಂಪತಿಯಿಂದ ಹಣಕ್ಕಾಗಿ ಪೀಡಿಸಿದ ಪ್ರಕರಣದಲ್ಲಿ ಬೆಂಗಳೂರು ಕಮಿಷನರ್ ಕಮಲ್ ಪಂತ್, ಸೈಬರ್ ಸ್ಟೇಶನ್ ಮಹಿಳಾ ಇನ್ ಸ್ಪೆಕ್ಟರ್ ಮತ್ತು ಇಬ್ಬರು ಪಿಎಸ್ಐ ಸೇರಿ ನಾಲ್ವರು ಪೊಲೀಸ್ ಸಿಬಂದಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ.
ಇತ್ತೀಚೆಗೆ ಬೀದಿ ವ್ಯಾಪಾರಸ್ಥರಿಂದ ಹಣ ಕೇಳಿದ ಪ್ರಕರಣದಲ್ಲಿ ಮಹಿಳಾ ಇನ್ ಸ್ಪೆಕ್ಟರ್ ಸೇರಿ ನಾಲ್ವರನ್ನು ಪೊಲೀಸ್ ಕಮಿಷನರ್ ಅಮಾನತುಗೊಳಿಸಿದ ಬೆನ್ನಲ್ಲೇ ಇಂಟೀರಿಯರ್ ಡಿಸೈನರ್ ಆಗಿದ್ದ ಸುದೀಪ್ ಎಂಬವರು ಎಸಿಬಿಗೆ ದೂರು ದಾಖಲಿಸಿದ್ದರು. ದೂರಿನ ಬಗ್ಗೆ ಇಲಾಖಾ ತನಿಖೆಯ ವರದಿ ಆಧರಿಸಿ, ಕಮಿಷನರ್ ಇದೀಗ ವೈಟ್ ಫೀಲ್ಡ್ ಸಿಇಎನ್ ಠಾಣೆಯ ಇನ್ ಸ್ಪೆಕ್ಟರ್ ರೇಣುಕಾ, ಸಬ್ ಇನ್ ಸ್ಪೆಕ್ಟರ್ ಗಳಾದ ನವೀನ್, ಗಣೇಶ್ ಮತ್ತು ಕಾನ್ಸ್ ಟೇಬಲ್ ಆಗಿರುವ ಹೇಮಂತ್ ಅವರನ್ನು ಅಮಾನತುಗೊಳಿಸಿದ್ದಾರೆ.
ವಂಚನೆ ನೆಪದಲ್ಲಿ ಹತ್ತು ಲಕ್ಷ ಲಂಚ ಕೇಳಿದ್ದರು !
ಎಸ್ಐ ಗಣೇಶ್ ಮತ್ತೊಬ್ಬ ಸಿಬಂದಿ ಜುಲೈ 16ರಂದು ಗುಂಜೂರಿನಲ್ಲಿರುವ ಇಂಟೀರಿಯರ್ ಡಿಸೈನರ್ ಸುದೀಪ್ ಮನೆಗೆ ಬಂದಿದ್ದು, ನಿಮ್ಮ ಮೇಲೆ ಎಫ್ಐಆರ್ ಆಗಿರುವ ಬಗ್ಗೆ ತಿಳಿಸಿದ್ದಾರೆ. ಮಹಿಳೆಯೊಬ್ಬರು ನಿಮ್ಮ ಮೇಲೆ ದೂರು ನೀಡಿದ್ದು, 5 ಲಕ್ಷ ಹಣ ಪಡೆದು ಕೆಲಸ ಮಾಡದೆ ವಂಚಿಸಿದ್ದೀರಿ ಎಂದು ದೂರು ಬಂದಿರುವ ಬಗ್ಗೆ ತಿಳಿಸಿದ್ದಾರೆ. ಬಳಿಕ ಪತ್ನಿಯೊಂದಿಗೆ ಪೊಲೀಸ್ ಠಾಣೆಗೆ ಬರುವಂತೆ ತಿಳಿಸಿ, ಎಸ್ಐ ಗಣೇಶ್ ಮತ್ತು ಸಿಬಂದಿ ತೆರಳಿದ್ದರು.
ಸುದೀಪ್ ಪತ್ನಿಯೊಂದಿಗೆ ಠಾಣೆಗೆ ತೆರಳಿದ್ದು, ಎಫ್ಐಆರ್ ಪ್ರತಿಯನ್ನು ನೋಡುತ್ತಿದ್ದಾಗಲೇ ಎಸ್ಐ ಗಣೇಶ್ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಸೆಲ್ ಒಳಗೆ ಹಾಕಿ ರುಬ್ತೀನಿ ನೋಡು ಎಂದು ಒಳಗೆ ಎಳೆದುಕೊಂಡು ಹೋಗಿದ್ದ. ಬಳಿಕ ಅವರಿಬ್ಬರ ಫೋನನ್ನೂ ಪಡೆದುಕೊಂಡಿದ್ದ. ಆನಂತರ 11.30ರ ವೇಳೆಗೆ ಇನ್ ಸ್ಪೆಕ್ಟರ್ ರೇಣುಕಾ ಠಾಣೆಗೆ ಆಗಮಿಸಿದ್ದು, ಆಕೆಯ ಚೇಂಬರಿಗೆ ಕರೆಸಿಕೊಂಡಿದ್ದಾಳೆ. ಅರೆಸ್ಟ್ ಮಾಡುವುದಾಗಿ ಆಕೆಯೂ ಬೆದರಿಸಿದ್ದಾಳೆ.
ಸುದೀಪ್ ತಾನೇನು ವಂಚನೆ ಮಾಡಿಲ್ಲ. ಮನೆಯ ಕೆಲಸ ಮಾಡಿಕೊಡುತ್ತೇನೆ. ಹಣವನ್ನೂ ಹಿಂತಿರುಗಿಸುತ್ತೇನೆ. ನನ್ನ ಮೇಲೆ ಸುಳ್ಳು ದೂರು ದಾಖಲು ಮಾಡಬೇಡಿ ಎಂದು ಗೋಗರೆದಿದ್ದಾನೆ. ಈ ವೇಳೆ, ಸುದೀಪ್ ಅನ್ನು ಠಾಣೆಯ ಒಳಗಿರುವ ಕಾನ್ಫರೆನ್ಸ್ ರೂಮಿಗೆ ಒಯ್ದಿದ್ದು ಹತ್ತು ಲಕ್ಷ ರೂ. ಲಂಚ ನೀಡುವಂತೆ ಒತ್ತಡ ಹೇರಿದ್ದಾರೆ.
ಕೊನೆಗೆ ಸುದೀಪ್ ಮತ್ತು ಪತ್ನಿ ಐದು ಲಕ್ಷ ರೂಪಾಯಿ ನೀಡಲು ಒಪ್ಪಿಕೊಂಡಿದ್ದಾರೆ. ದೂರುದಾರ ಮಹಿಳೆಗೂ 5 ಲಕ್ಷ ರೂ. ನೀಡುವಂತೆ ಪೊಲೀಸರು ಒತ್ತಡ ಹೇರಿದ್ದರಿಂದ ಬಳಿಕ ಹಣ ಕೊಡಲು ಒಪ್ಪಿದ್ದು, ಬ್ಯಾಂಕಿಗೆ ತೆರಳಿದ್ದರು. ಪೊಲೀಸರು ಹಣಕ್ಕಾಗಿ ಬ್ಯಾಂಕಿಗೆ ತೆರಳುವಾಗ ಮಂಜು ಎಂಬ ವ್ಯಕ್ತಿಯನ್ನು ಕಳುಹಿಸಿದ್ದರು. ಬಳಿಕ ಸುದೀಪ್ ಪತ್ನಿ ಬ್ಯಾಂಕಿನಿಂದ ಹತ್ತು ಲಕ್ಷ ರೂ. ಡ್ರಾ ಮಾಡಿ, ಅಲ್ಲಿಯೇ ಮಹಿಳೆಗೆ 5 ಲಕ್ಷ ನೀಡಿದ್ದಾರೆ. ಇನ್ನುಳಿದ 5 ಲಕ್ಷ ಹಣವನ್ನು ಪೊಲೀಸ್ ಠಾಣೆಗೆ ತಂದಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಎಸ್ಐ ನವೀನ್, ಹಣವನ್ನು ಅಲ್ಲಿನ ಸೋಫಾದಲ್ಲಿ ಇಡುವಂತೆ ಹೇಳಿದ್ದಾರೆ. ಆಬಳಿಕ ಕೇಸ್ ಕ್ಲೋಸ್ ಮಾಡುವ ನಿಟ್ಟಿನಲ್ಲಿ ಸಹಿ ಹಾಕುವಂತೆ ಹೇಳಿದ್ದರು. ಹಣವನ್ನು ಸೋಫಾದಲ್ಲಿ ಇಟ್ಟಿದ್ದು, ಅದನ್ನು ಕಾನ್ ಸ್ಟೇಬಲ್ ಹೇಮಂತ್ ಕಲೆಕ್ಟ್ ಮಾಡಿದ್ದಾನೆ. ದಂಪತಿ ಠಾಣೆಯಿಂದ ಹಿಂತಿರುಗುವಾಗ, ಎಸ್ಐ ಗಣೇಶ್ ಉಳಿದ 5 ಲಕ್ಷ ರೂ. ಕೆಲವು ದಿನಗಳಲ್ಲಿ ತಂದು ಕೊಡುವಂತೆ ಸೂಚಿಸಿದ್ದಾನೆ. ಆದರೆ, ಮರುದಿನ ಸುದೀಪ್ ಠಾಣೆಗೆ ಬಂದು ಹಣ ಹೊಂದಿಸಲು ಆಗುವುದಿಲ್ಲ. ನನ್ನಲ್ಲಿ ಕೊಡಲು ಏನೂ ಇಲ್ಲ ಎಂದಿದ್ದಾನೆ. ಎಸ್ಐ ಗಣೇಶ್ ಪ್ರತಿಕ್ರಿಯಿಸಿ, ಇನ್ ಸ್ಪೆಕ್ಟರ್ ರೇಣುಕಾ ಅವರನ್ನು ಉಲ್ಲೇಖಿಸಿ, ಮೇಡಮ್ ಸಿಟ್ಟಾಗಿದ್ದಾರೆ. ಆದಷ್ಟು ಬೇಗ ಹಣ ತಂದುಕೊಡುವಂತೆ ಬೆದರಿಸಿದ್ದಾನೆ.
5 ಲಕ್ಷ ಇನ್ ಸ್ಪೆಕ್ಟರಿಗೆ ಹೋಗಿದೆ, ನಮಗೆ ಸಿಕ್ಕಿಲ್ಲ !
ಇದೇ ಮಾತನ್ನು ಅಲ್ಲಿನ ಇನ್ನೊಬ್ಬ ಎಸ್ಐ ನವೀನ್ ಬಳಿಯೂ ಹೇಳಿದ್ದಾನೆ. ಬಳಿಕ ಎಸ್ಐ ನವೀನ್, ನೀನು ಕೊಟ್ಟ ಐದು ಲಕ್ಷ ರೂ. ಇನ್ ಸ್ಪೆಕ್ಟರಿಗೆ ಮಾತ್ರ ಹೋಗಿದೆ. ನಮಗೆ ಏನೂ ಸಿಕ್ಕಿಲ್ಲ. 5 ಲಕ್ಷ ಆಗದಿದ್ದರೆ ಎರಡು ಲಕ್ಷ ಆದರೂ ತಂದುಕೊಡು ಎಂದು ಒತ್ತಾಯಿಸಿದ್ದಾನೆ. ಆನಂತರ ಇದೇ ವಿಚಾರವನ್ನು ಫೋನಲ್ಲಿಯೂ ಮಾತುಕತೆ ಮಾಡಿದ್ದು, ಅದನ್ನು ಸುದೀಪ್ ರೆಕಾರ್ಡ್ ಮಾಡಿಕೊಂಡು ಎಸಿಬಿಗೆ ದೂರು ನೀಡಿದ್ದಾನೆ. ಇದೀಗ ಎಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದು, ಪ್ರಾಥಮಿಕ ವರದಿಯನ್ನು ಆಧರಿಸಿ ಡಿಜಿಪಿ ಪ್ರವೀಣ್ ಸೂದ್ ನಾಲ್ವರನ್ನು ಅಮಾನತುಗೊಳಿಸಲು ಸೂಚನೆ ನೀಡಿದ್ದಾರೆ.
The Karnataka Police have suspended a woman inspector and three other policemen on charges of extorting money from a couple after threatening them with a case and imprisonment. Director General of Police (DGP) Praveen Sood has issued orders in this regard and kept Renuka, the inspector attached to the CEN police station in Whitefield division. Her colleagues, who turned partners in the crime — sub-inspectors Naveen, Ganesh, constable Hemanth Amana — were suspended by the Commissioner of Police Kamal Pant, police said on Friday.
08-05-25 07:50 pm
Bangalore Correspondent
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
08-05-25 04:57 pm
HK News Desk
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm