ಬ್ರೇಕಿಂಗ್ ನ್ಯೂಸ್
30-07-21 11:21 am Mangaluru correspondent ಕ್ರೈಂ
ಮಂಗಳೂರು, ಜುಲೈ 30: ಕಪ್ಪುಹಣ ಬಿಳಿ ಮಾಡುವ ಆಮಿಷಕ್ಕೆ ಬಲಿಯಾದ ವ್ಯಕ್ತಿಯೊಬ್ಬರು 9.20 ಲಕ್ಷ ರೂ. ಕಳೆದುಕೊಂಡ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವೃತ್ತಿಯಲ್ಲಿ ಪಿಡಬ್ಲ್ಯೂಡಿ ಗುತ್ತಿಗೆದಾರನಾಗಿರುವ ರೋಹಿದಾಸ್ ಎಂಬವರು, ಮನೆ ಕಟ್ಟಿ ಮಾರಾಟ ಮಾಡುವುದನ್ನು ಮಾಡುತ್ತಿದ್ದರು. ಈ ಬಗ್ಗೆ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು. ಜಾಹೀರಾತು ನೀಡಿದ ಒಂದು ವಾರದಲ್ಲಿ -----94477 ನಂಬರ್ನಿಂದ ನಿತಿನ್ ರಾಜ್ ಬೆಂಗಳೂರು ಮತ್ತು ಧನರಾಜ್ ವಿಟ್ಲ ಎಂಬವರು ಕರೆ ಮಾಡಿ, ತಾವು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿದ್ದು ನಮ್ಮ ಸಂಸ್ಥೆಯ ಮಾಲಿಕರಿಗೆ ಮಂಗಳೂರಿನಲ್ಲಿ ಮನೆ ಬೇಕೆಂದು ತಿಳಿಸಿದ್ದಾರೆ.
ಅಲ್ಲದೆ, ಮನೆ ಕಟ್ಟಲು 50 ಲಕ್ಷ ರೂ. ಸಾಲ ತೆಗೆಸಿಕೊಡುವುದಾಗಿ ಹೇಳಿದ್ದಾರೆ. ಅದಕ್ಕಾಗಿ ಧನರಾಜ್, ರೋಹಿದಾಸ್ ಅವರನ್ನು ಮೈಸೂರಿನ ಶ್ರೀರಂಗಪಟ್ಟಣಕ್ಕೆ ಬರಲು ಹೇಳಿದ್ದಾರೆ. ಈ ಸಂದರ್ಭ ನಿತಿನ್ ರಾಜ್ ಸಾಲದ ರೂಪವಾಗಿ 1.50 ಕೋಟಿ ರೂ. ಕಪ್ಪುಹಣವನ್ನು ನೀಡಿ, ಅದನ್ನು ಬಿಳಿ ಮಾಡಲು ತಿಳಿಸಿದ್ದಾರೆ. ಈ ಕಪ್ಪುಬಣ್ಣದ ಕಾಗದವನ್ನು ಲಿಕ್ವಿಡ್ ನಂತೆ ತೋರುವ ನೀರಿಗೆ ಮುಳುಗಿಸಿ ತೆಗೆದಾಗ ಕಪ್ಪುಬಣ್ಣದ ಕಾಗದ 500 ರೂ. ನೋಟಿನ ರೂಪ ತಾಳಿತ್ತು. ಇದೇ ರೀತಿ ಮಾಡಿ, ಹಣ ಮಾಡಿಕೊಳ್ಳುವಂತೆ ಹೇಳಿ 1.5 ಕೋಟಿ ರೂ.ವನ್ನು ರೋಹಿದಾಸ್ಗೆ ನೀಡಿದ್ದರು.
ಇದನ್ನು ನಂಬಿ ರೋಹಿದಾಸ್ ಹಣದ ಬ್ಯಾಗ್ ಹಾಗೂ ಲಿಕ್ವಿಡ್ಅನ್ನು ಕಾರಿನ ಡಿಕ್ಕಿಯಲ್ಲಿರಿಸಿ ಹೊರಟು ಬಂದಿದ್ದಾರೆ. ಆದರೆ ಒಂದು ಕಿಲೋ ಮೀಟರ್ ಮುಂದೆ ಬಂದಾಗ ಲಿಕ್ವಿಡ್ ಬಾಟಲ್ ಬಿದ್ದಂತೆ ಭಾಸವಾಗಿದ್ದು , ಧನರಾಜ್ ಕಾರು ನಿಲ್ಲಿಸಿ ಡಿಕ್ಕಿ ತೆರೆದು ನೋಡಿದ್ದಾರೆ. ಲಿಕ್ವಿಡ್ ಕ್ಯಾನ್ ಕೆಳಗೆ ಬಿದ್ದು, ಹೊರಗೆ ಚೆಲ್ಲಿತ್ತು. ತಕ್ಷಣ ಈ ಬಗ್ಗೆ ನಿತಿನ್ ರಾಜ್ಗೆ ಕರೆಮಾಡಿ ನಡೆದ ವಿಷಯವನ್ನು ತಿಳಿಸಿದ್ದಾರೆ. ಆತ ಬಂದು ಲಿಕ್ವಿಡ್ ಚೆಲ್ಲಿರುವುದಕ್ಕೆ ಬೈಯ್ದು, ಈ ಲಿಕ್ವಿಡ್ 25 ಲಕ್ಷ ರೂ. ಬೆಳೆಬಾಳುವ ವಸ್ತು ಆಗಿದ್ದು, ಬೇಜವಾಬ್ದಾರಿಯಿಂದ ಚೆಲ್ಲಿದ್ದು ಇನ್ನು ಇದು ಸಿಗುವುದು ಕಷ್ಟ ಎಂದು ಹೇಳಿದ್ದಾನೆ. ಅಲ್ಲದೆ ಯಾರೋ ಹುಡುಗಿಗೆ ಕರೆ ಮಾಡಿ ರೋಹಿದಾಸ್ ಜೊತೆಗೆ ಮಾತನಾಡಲು ತಿಳಿಸಿದ್ದಾನೆ. ಆಕೆ ಬೇರೆ ಲಿಕ್ವಿಡ್ ಬೇಕಾದಲ್ಲಿ 25 ಲಕ್ಷ ರೂ. ನೀಡಬೇಕು ಎಂದಿದ್ದಾಳೆ. ಬಳಿಕ ನಿತಿನ್ ತಾನು 10 ಲಕ್ಷ ರೂ. ರೆಡಿ ಮಾಡುತ್ತೇನೆ. ನೀವಿಬ್ಬರೂ ಸೇರಿ 15 ಲಕ್ಷ ರೂ. ರೆಡಿ ಮಾಡಿ ಕೂಡಲೇ ನೀಡಬೇಕಾಗಿ ತಿಳಿಸಿದ್ದಾನೆ. ಬಳಿಕ ಕಾರಿನಲ್ಲಿರುವ ಕಪ್ಪುಬಣ್ಣದ ಕಾಗದದ ಬ್ಯಾಗನ್ನು ಆತನ ಕಾರಿನಲ್ಲಿ ಇರಿಸಿ ನೀವು ಕೂಡಲೇ ಊರಿಗೆ ಹೋಗಿ ಹಣವನ್ನು ನೀಡಿದರೆ ಲಿಕ್ವಿಡ್ ತರಿಸುವುದಾಗಿ ತಿಳಿಸಿದ್ದಾನೆ.
ಮರುದಿವಸ ವಿಟ್ಲದ ಧನರಾಜ್ ಕರೆ ಮಾಡಿ ತಾನು 7 ಲಕ್ಷ ರೂ. ಹಣ ರೆಡಿ ಮಾಡುತ್ತೇನೆ. ತಾವು ಉಳಿದ ಹಣದ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾನೆ. ಈ ಬಗ್ಗೆ ಆತ ಪದೇ ಪದೇ ಪೋನ್ ಮಾಡುತ್ತಿದ್ದರಿಂದ ರೋಹಿದಾಸ್ ಹೆಂಡತಿ, ಮಕ್ಕಳ ಒಡವೆಗಳನ್ನು 7.20 ಲಕ್ಷ ರೂ.ಗೆ ಅಡವಿಟ್ಟು ಅದಕ್ಕೆ ತನ್ನಲ್ಲಿದ್ದ 2 ಲಕ್ಷ ರೂ. ಸೇರಿಸಿ ಒಟ್ಟು 9.20 ಲಕ್ಷ ರೂ. ಹಣವನ್ನು ರೆಡಿ ಮಾಡಿ ನೀಡಿದ್ದಾರೆ. ಆದರೆ ಹಣ ನೀಡಿದ ಬಳಿಕ ಅವರು ಲಿಕ್ವಿಡ್ ಆಗಲೀ, ಕಪ್ಪುಹಣವನ್ನೂ ನೀಡದೆ ವಂಚಿಸಿದ್ದಾರೆ. ತಾವು ಮೋಸ ಹೋಗಿದ್ದು ಅರಿವಾಗುತ್ತಿದ್ದಂತೆ ರೋಹಿದಾಸ್ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Mangalore Man a builder by profession falls into trap of black money exchange looses Ra 9 lakhs. A case has been booked at Kavoor Police station.
08-05-25 12:23 pm
HK News Desk
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
08-05-25 04:57 pm
HK News Desk
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
08-05-25 04:52 pm
Mangalore Correspondent
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
Operation Sindhoor, MP Brijesh Chowta, Manga...
07-05-25 03:36 pm
Hindu Maha Sabha, Mangalore, Rajesh Pavitran:...
07-05-25 02:36 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm